Advertisement
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಕಿರಿಯರು 5 ವಿಕೆಟಿಗೆ 282 ರನ್ ಬಾರಿಸಿದರೆ, ಯುಎಇ 34.3 ಓವರ್‌ಗಳಲ್ಲಿ 128ಕ್ಕೆ ಆಲೌಟ್ ಆಯಿತು. “ಎ’ ವಿಭಾಗದ ಇನ್ನೊಂದು ಮುಖಾಮುಖೀಯಲ್ಲಿ ಪಾಕಿಸ್ಥಾನ 4 ವಿಕೆಟ್‌ಗಳಿಂದ ಅಫ್ಘಾನಿಸ್ಥಾನವನ್ನು ಮಣಿಸಿತು. ಭಾರತ-ಪಾಕಿಸ್ಥಾನ ಶನಿವಾರ ಎದುರಾಗಲಿವೆ.
ಭಾರತದ ದೊಡ್ಡ ಮೊತ್ತದಲ್ಲಿ ಆರಂಭಕಾರ ಹರ್ನೂರ್ ಸಿಂಗ್ ಕೊಡುಗೆ ಮಹತ್ವದ್ದಾಗಿತ್ತು. ಅವರು 120 ರನ್ ಬಾರಿಸಿದರು. 130 ಎಸೆತಗಳ ಈ ರಂಜನೀಯ ಆಟದಲ್ಲಿ 11 ಬೌಂಡರಿ ಒಳಗೊಂಡಿತ್ತು. ನಾಯಕ್ ಯಶ್ ಧುಲ್ 63, ರಾಜ್ಯವರ್ಧನ್ ಅಜೇಯ 48 ರನ್ ಮಾಡಿದರು. ಬೌಲಿಂಗ್‌ನಲ್ಲೂ ಮಿಂಚಿದ ರಾಜ್ಯವರ್ಧನ್ 24ಕ್ಕೆ 3 ವಿಕೆಟ್ ಕೆಡವಿದರು. ಗರ್ವ್ ಸಂಗ್ವಾನ್, ವಿಕ್ಕಿ ಒಸ್ವಾಲ್, ಕೌಶಲ್ ತಾಂಬೆ ತಲಾ 2 ವಿಕೆಟ್ ಉರುಳಿಸಿದರು. ಯುಎಇ ಸರದಿಯಲ್ಲಿ 45 ರನ್ ಮಾಡಿದ ಕೈ ಸ್ಮಿತ್ ಅವರದೇ ಹೆಚ್ಚಿನ ಗಳಿಕೆಯಾಗಿತ್ತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಭಾರತ-5 ವಿಕೆಟಿಗೆ 282 (ಹರ್ನೂರ್ 120, ಧುಲ್ 63, ರಾಜ್ಯವರ್ಧನ್ ಔಟಾಗದೆ 48, ಶರಾಫುಲ್ 44ಕ್ಕೆ 2). ಯುಎಇ-34.3 ಓವರ್‌ಗಳಲ್ಲಿ 128 (ಸ್ಮಿತ್ 45, ಸೂರ್ಯ ಸತೀಶ್ 21, ರಾಜ್ಯವರ್ಧನ್ 24ಕ್ಕೆ 3, ಒಸ್ವಾಲ್ 7ಕ್ಕೆ 2, ತಾಂಬೆ 16ಕ್ಕೆ 2, ಸಂಗ್ವಾನ್ 39ಕ್ಕೆ 2).