Advertisement

ಉಂಡಾರು ಬ್ರಹ್ಮಕಲಶೋತ್ಸವಕ್ಕೆ ಗ್ರಾಮಸ್ಥರೇ ಬೆಳೆಸಿದ ತರಕಾರಿ

06:00 AM Apr 19, 2018 | |

ಕಾಪು: ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಈ ದಿನಗಳಲ್ಲಿ ಅನ್ನಸಂತರ್ಪಣೆಗೆ ಗ್ರಾಮಸ್ಥರೇ ಬೆಳೆದ ಸಾವಯವ ತರಕಾರಿಯ ಅಡುಗೆ ಮಾಡಲಾಗುತ್ತಿದೆ. 

Advertisement

ಎ.18ರಿಂದ ಎ.27ರವರೆಗೆ ಕಾರ್ಯಕ್ರಮ ನಡೆಯ ಲಿದ್ದು, ಈ ಸಂದರ್ಭ ಬೇಕಾದ ತರಕಾರಿಗಳನ್ನು ಗ್ರಾಮದ ನಾಲ್ಕು ಕಡೆಗಳಲ್ಲಿ ಬೆಳೆಸಲಾಗಿದೆ. ಜತೆಗೆ ಪೂಜಾ ಕಾರ್ಯಕ್ಕೆ ಕಬ್ಬನ್ನೂ ಬೆಳೆಸಲಾಗಿದೆ.  

ಗ್ರಾಮದ ಪ್ರಗತಿಪರ ಕೃಷಿಕರಾದ ಉದಯ್‌ ಜಿ. ಉಂಡಾರು ದೇವಸ್ಥಾನದ ಬಳಿಯ ವನಜಾಕ್ಷಮ್ಮ ಅವರ ಗದ್ದೆಯಲ್ಲಿ ಸೌತೆಕಾಯಿ ಮತ್ತು ತನ್ನ ಸ್ವಂತ ಗದ್ದೆಯಲ್ಲಿ ಕಬ್ಬನ್ನು ಬೆಳೆಸಿದ್ದಾರೆ. ಇನ್ನಂಜೆ ಮೂಡುಮನೆಯ ರವಿವರ್ಮ ಶೆಟ್ಟಿ ಮತ್ತು ಚಂದ್ರಹಾಸ ಗುರುಸ್ವಾಮಿ ಅವರು ಬೂದು ಕುಂಬಳ ಮತ್ತು ಸೌತೆ ಕಾಯಿ, ದಿನೇಶ್‌ ಶೆಟ್ಟಿ ಕಲ್ಯಾಲು ಸೌತೆಕಾಯಿ, ಕೃಷ್ಣ ಅಮೀನ್‌ ಅವರು ತರಕಾರಿ ಬೆಳೆ, ವಿಷ್ಣು ಫ್ರೆಂಡ್ಸ್‌ ವತಿಯಿಂದ ಕಲ್ಲಿಮಾರು ಗದ್ದೆಯಲ್ಲಿ ಅಲಸಂಡೆ, ಇನ್ನಂಜೆ ಬಿಲ್ಲವರ ಸಂಘದ ವತಿಯಿಂದ ವಿವಿಧ ತರಕಾರಿಗಳನ್ನು ಬೆಳೆಯಲಾಗಿದೆ. 
 
ಸಮಾರಾಧನೆಯೇ ವಿಶೇಷ
ಉಂಡಾರು ದೇಗುಲದಲ್ಲಿ ಅನ್ನಸಂತರ್ಪಣೆಯೇ ಮುಖ್ಯ ಸೇವೆಯಾಗಿದೆ. ದೇವರು ಉಂಡ ನೆನಪಿಗೆ ಕರ್ಕಾಟಕ ಮಾಸದ ಆಟಿ ಅಮಾವಾಸ್ಯೆಯಂದು ದೇವರಿಗೆ ಬೇಯಿಸಿದ ಮಾವಿನಕಾಯಿ ನೈವೇದ್ಯವನ್ನು ಸಮರ್ಪಿಸುವುದು, ಗ್ರಾಮಸ್ಥರು ಪ್ರಸಾದ ಸ್ವೀಕರಿಸುವ ಸಂಪ್ರದಾಯ ಇಲ್ಲಿದೆ. ಇದರೊಂದಿಗೆ ಭಕ್ತರು ಹರಿಕೆಯಾಗಿ ಸಮಾರಾಧನೆ ಸೇವೆ ನೀಡುವುದು ವಾಡಿಕೆಯಲ್ಲಿದೆ. 

ಅಳಿಲು ಸೇವೆ  
ಬ್ರಹ್ಮಕಲಶೋತ್ಸವ ಸಂದರ್ಭ ಕ್ವಿಂಟಾಲ್‌ಗ‌ಟ್ಟಲೆ ತರಕಾರಿ ಅಗತ್ಯವಿದ್ದು ಅದರಲ್ಲಿ ನಮ್ಮದೂ ಒಂದು ಪಾಲು ಅಳಿಲಿ ಸೇವೆ ಇರಲಿ ಎಂಬ ಮನೋಭಾವದೊಂದಿಗೆ ತರಕಾರಿಯನ್ನು ಬೆಳೆದಿದ್ದೇವೆ. 
– ಉದಯ್‌ ಜಿ., ಕೃಷಿಕರು  

ಮನೆಯ ತರಕಾರಿ ದೇವರಿಗೆ
ಬ್ರಹ್ಮಕಲಶೋತ್ಸವಕ್ಕೆ ಹೊರೆ ಕಾಣಿಕೆಗಾಗಿ ಪೇಟೆಯಿಂದ ತರಕಾರಿ ತಂದು ಸಮರ್ಪಣೆ ಮಾಡುವುದು ಸರಿಯೆಂದು ಕಾಣಲಿಲ್ಲ. ಅದಕ್ಕಾಗಿ ಮನೆಯಲ್ಲೇ ತರಕಾರಿ ಬೀಜ ಬಿತ್ತನೆ ನಡೆಸಿ, ಸಾವಯವ ಬೆಳೆ ಬೆಳೆಸಿದ್ದೇವೆ.
– ರವಿವರ್ಮ ಶೆಟ್ಟಿ, ಮೂಡುಮನೆ  

Advertisement

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next