Advertisement
ವಿನಾ ಕಾರಣ ಗದ್ದಲಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಪುತ್ತೂರಿಗೆ 6:30ರಿಂದ ಕೆಎಸ್ಸಾರ್ಟಿಸಿ ಬಸ್ ಆರಂಭವಾಗುತ್ತದೆ. ಆಮೇಲೆ 15 ನಿಮಿಷ ಕ್ಕೊಂದು ಬಸ್ ಇದ್ದರೂ ವಿದ್ಯಾರ್ಥಿಗಳು ಹಾಗೂ ಪುತ್ತೂರಿಗೆ ಕೆಲಸಕ್ಕಾಗಿ ತೆರಳುವವರು ಅದರಲ್ಲಿ ಹೋಗದೇ ಮಡಿಕೇರಿಗೆ ಹೋಗುವ ವೇಗದೂತ ಬಸ್‌ಗಾಗಿ ಕಾಯುತ್ತಾರೆ. ಮಡಿಕೇರಿಗೆ ತೆರಳುವ ಬಸ್‌ಗಳು ಉಪ್ಪಿನಂಗಡಿಯಿಂದ ಬಿಟ್ಟರೆ, ಮತ್ತೆ ಅದಕ್ಕೆ ನಿಲುಗಡೆ ನೀಡುವುದು ಪುತ್ತೂರಿನಲ್ಲಿಯೇ. ಹಾಗಾಗಿ ಅದಕ್ಕಾಗಿ ಕಾಯುವ ಮೂಲಕ ಒಂದೆಡೆ ವಿನಾಕಾರಣ ನೂಕುನುಗ್ಗಲಿಗೆ ಅವಕಾಶವಾದರೆ, ಇನ್ನೊಂದೆಡೆ ಉಪ್ಪಿನಂಗಡಿಯಿಂದ ಮಡಿಕೇರಿ, ಮೈಸೂರಿಗೆ ಪ್ರಯಾಣಿಸುವವರಿಗೂ ಸೀಟು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ವರ್ಷವೂ ಇದೇ ರೀತಿಯ ನೂಕುನುಗ್ಗಲಿನಿಂದಾಗಿ ಉಪ್ಪಿನಂಗಡಿಯಲ್ಲಿ ಮಡಿಕೇರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸೊಂದರ ಬಾಗಿಲು ಕಿತ್ತುಹೋದ ಘಟನೆ ನಡೆದಿದೆ.