Advertisement

ಕ್ಯಾನ್ಸರ್‌ ಸೋಲಿಸಲು ಅನೂಪನ ಅದ್ವಿತೀಯ ಸಾಹಸ

11:27 AM Feb 06, 2018 | Team Udayavani |

ಬೆಂಗಳೂರು: “ಕ್ಯಾನ್ಸರ್‌ ನನ್ನೊಂದಿಗೆ ಸ್ಪರ್ಧೆಗೆ ನಿಂತಿದೆ. ಆದರೆ, ನನ್ನ “ವಿಲ್‌ ಪವರ್‌’ ಮುಂದೆ ಕ್ಯಾನ್ಸರ್‌ ಸೋತು ಸುಣ್ಣವಾಗಲಿದೆ’. ಇದು 24ನೇ ವರ್ಷದಲ್ಲಿ ಕ್ಯಾನ್ಸರ್‌ ಬಾಧಿತರಾಗಿ, 25ನೇ ವರ್ಷದಲ್ಲಿ ಗುಣಮುಖರಾಗಿ, 26ನೇ ವರ್ಷದಲ್ಲಿ ಮತ್ತೆ ಕ್ಯಾನ್ಸರ್‌ ಬಾಧೆಯೊಳಗೆ ಸಿಕ್ಕಿರುವ ಅನೂಪ್‌ ಕೃಷ್ಣ ಅವರ ಆತ್ಮಸ್ಥೈರ್ಯದ ನುಡಿ. “ಫೋಟೋಗ್ರಫಿಯಲ್ಲಿ ನನಗೆ ರಾಜ್ಯಪ್ರಶಸ್ತಿ ಬಂದಾಗ
ಕುಟುಂಬ ಸಮೇತವಾಗಿ ತುಂಬಾ ಖುಷಿ ಪಟ್ಟಿದ್ದೇವೆ. ಈಗ ಕ್ಯಾನ್ಸರ್‌ ಬಂದಿದೆ. ಹಾಗಂತ ಎಂದೂ ಕಣ್ಣೀರು ಹಾಕಿಲ್ಲ. ಅಪ್ಪ, ಅಮ್ಮ, ಮನೆಯರು ಅತ್ತಾಗ ನಾನೇ ಅವರನ್ನು ಸಮಾಧಾನ ಪಡಿಸಿದ್ದೇನೆ. ನೋವು, ನಲಿವು ಎರಡೂ ಸಮಾನವಾಗಿ ಸ್ವೀಕರಿಸುವುದೇ ಜೀವನ,’ ಎಂದು ಹೇಳುವ ಅನೂಪ್‌ ಕೃಷ್ಣ ಅವರ ನುಡಿಗಳು ಕ್ಯಾನ್ಸರ್‌ ರೋಗವನ್ನೇ ಒಧ್ದೋಡಿಸುವಷ್ಟು ಗಟ್ಟಿಯಾಗಿವೆ.

Advertisement

“2014ರಲ್ಲಿ ಶೇಷಾದ್ರಿಪುರದ ಕೆನ್‌ ಸ್ಕೂಲ್‌ ಆಫ್ ಆರ್ಟ್‌ನಲ್ಲಿ ಬಿ.ಎಸ್ಸಿ ಪದವಿ ಮುಗಿಸಿದೆ. ಉದ್ಯೋಗ ಹುಡುಕುತ್ತಿದ್ದಾಗ ಒಮ್ಮೆ ತುಂಬಾ ಜ್ವರ ಬಂದಿತ್ತು. ಮನೆಯವರಿಗೆ ಹೇಳಿದೆ. ಸಮೀಪದ ಆಸ್ಪತ್ರೆಗೆ ಹೋಗಿ ರಕ್ತಪರೀಕ್ಷೆ ಮಾಡಿಸಿಕೊಂಡು ಮನೆಗೆ ಹೋಗಿ ರೆಸ್ಟ್‌ ತೆಗೆದುಕೊಂಡಿದ್ದಷ್ಟೇ. ಸ್ವಲ್ಪ ದಿನದ ನಂತರ ಮತ್ತೆ ಜ್ವರ, ಹೊಟ್ಟೆ ಉರಿ ಕಾಣಿಸಿಕೊಂಡಿತು. ಆಗ ಮತ್ತೂಂದು ಆಸ್ಪತ್ರೆ. ಪರೀಕ್ಷೆ. ಆಗ ನನ್ನನ್ನು ಐಸಿಯುನಲ್ಲಿ ಇಟ್ಟಿದ್ದರು. ಅಲ್ಲೇ ಪಕ್ಕದಲ್ಲಿದ್ದ ನರ್ಸ್‌ ಮತ್ತು ವೈದ್ಯರು “ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ಕಾಯಿಲೆ ಬರುತ್ತಾ’ ಎಂದು ಮಾತನಾಡಿಕೊಳ್ಳುತ್ತಿದ್ದಾಗಲೇ ನಾನು ಕ್ಯಾನ್ಸರ್‌ಗೆ ತುತ್ತಾಗಿರುವುದು ತಿಳಿಯಿತು. ನಂತರ ಮನೆಯವರಿಗೆ ಗೊತ್ತಾದಾಗ ತುಂಬಾ ಸಂಕಟ ಪಟ್ಟರು,’ ಎಂದು ಅನೂಪ್‌ ನೆನಪಿಸಿಕೊಂಡರು.

ಕ್ಯಾನ್ಸರ್‌ ಗಾಗಿ ಕಣ್ಣೀರಿಲ್ಲ: “ಕ್ಯಾನ್ಸರ್‌ಗೆ ಚಿಕಿತ್ಸೆ ಆರಂಭವಾಯಿತು. ಮೊದಲ ಬಾರಿ ಕೀಮೋಥೆರಪಿಗೆ ಒಳಗಾದಾಗ ಏನೂ ಅನಿಸಲಿಲ್ಲ. ಒಂದೆಡೆದು ಆಸ್ಪತ್ರೆಯಲ್ಲಿ ಹತ್ತು ದಿನ ಪೇಟ್ಲೆಟ್‌ ಜಾಸ್ತಿ ಮಾಡಿಕೊಳ್ಳಲು ಔಷಧ ಪಡೆದೆ. ನೋವಿನ ಮೇಲೆ ನೋವು ಬಂತು. ಸಹಿಸಿಕೊಂಡೆ. ಒಮ್ಮೆ ಬೆನ್ನು ನೋವು ಜೋರಾಗಿ, ಕಣ್ಣೀರು ಬಂದಿದ್ದು ಬಿಟ್ಟರೆ, ಕ್ಯಾನ್ಸರ್‌ಗಾಗಿ ನಾನು ಯಾವತ್ತೂ ಕಣ್ಣೀರು ಹಾಕಿಲ್ಲ. 2017ರ ಆ. 20ಕ್ಕೆ ಕ್ಯಾನ್ಸರ್‌ ನನ್ನಿಂದ ದೂರಾಗಿತ್ತು. ವೈದ್ಯರು ನೀಡಿದ ವರದಿಯಲ್ಲಿ ಕ್ಯಾನ್ಸರ್‌ ಇಲ್ಲ ಎಂಬುದು ಸ್ಪಷ್ಟವಾಗಿತ್ತು’.

“ಒಂದು ತಿಂಗಳು ಕಳೆಯಿತು. 2017ರ ಸೆಪ್ಟೆಂಬರ್‌ನಲ್ಲಿ ಡೆಂಘೀ ಜ್ವರ ಬಂತು. ಆಸ್ಪತ್ರೆಗೆ ಹೋದರೆ ಮತ್ತೆ ಕ್ಯಾನ್ಸರ್‌ ಅಟ್ಯಾಕ್‌ ಆಗಿದೆ ಎಂದು ವೈದ್ಯರೇ ಖಚಿತಪಡಿಸಿದರು. ಈಗಲೂ ಚಿಕಿತ್ಸೆ ಪಡೆಯು ತ್ತಿದ್ದೇನೆ. ಮನೆಯಿಂದ ಹೋರಗೆ ಹೋಗುವುದಿಲ್ಲ. ಆದರೂ ನನ್ನ ಹವ್ಯಾಸ ಬಿಟ್ಟಿಲ್ಲ. ಫೋಟೋಗ್ರಫಿ ಮಾಡುತ್ತೇನೆ. ಲೇಖನ ಬರೆಯುತ್ತೇನೆ. ಪುಸ್ತಕ ಓದುತ್ತೇನೆ. ವಿಡಿಯೋ ಎಡಿಟಿಂಗ್‌  ಡುತ್ತಿರುತ್ತೇನೆ,’
ಎಂದು ಕ್ಯಾನ್ಸರ್‌ನೊಂದಿಗಿನ ಹೋರಾಟ ಬಿಚ್ಚಿಟ್ಟರು ಅನೂಪ್‌

ಕ್ಯಾನ್ಸರ್‌ಗೆ ನನ್ನ  ಮೇಲೆ ಲವ್ವಾಗಿದೆ!
ಹೋದ ವರ್ಷ ಕ್ಯಾನ್ಸರ್‌ನಿಂದ ಮುಕ್ತಿ ಸಿಕ್ಕಿತ್ತು. ಈ ವರ್ಷ ಅದೇನೋ ಕ್ಯಾನ್ಸರ್‌ಗೆ ನನ್ನ ಮೇಲೆ ಲವ್‌ ಆಗಿದೆ. ಮುಂದಿನ ವರ್ಷಕ್ಕೆ ಮತ್ತೆ ಬ್ರೇಕ್‌ಅಪ್‌ ಕನ್ಫರ್ಮ್. ಆಗ ಮತ್ತೂಮ್ಮೆ ನಾನು ಕ್ಯಾನ್ಸರ್‌ನಿಂದ ಸರ್ವೈವಲ್‌ ಆಗುವೆ. ಈ ವರ್ಷ ಕ್ಯಾನ್ಸರ್‌ನಿಂದ ಮುಕ್ತಿ ಸಿಕ್ಕಿದವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.
 ವಿಶ್ವ ಕ್ಯಾನ್ಸರ್‌ ದಿನದಂದು ಅನೂಪ್‌ರ ಫೇಸ್‌ಬುಕ್‌ ಸ್ಟೇಟಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next