Advertisement

Himachal: ಹಿಮಾಚಲದಲ್ಲಿ ನಿಲ್ಲದ ಪ್ರಕೋಪ

12:53 AM Aug 16, 2023 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆ, ಮೇಘ ಸ್ಫೋಟ, ಭೂಕುಸಿತ ನಿಂತಿಲ್ಲ. ಆ ರಾಜ್ಯದ ಅಲ್ಲಲ್ಲಿ ಮನೆಗಳು ಕುಸಿದು ಬೀಳುವುದು ಮುಂದುವರಿದಿದೆ. ಇದೇ ವೇಳೆ ಶಿಮ್ಲಾದಲ್ಲಿ ಶಿವ ದೇವಸ್ಥಾನದ ಮೇಲೆ ಗುಡ್ಡ ಕುಸಿದಲ್ಲಿ ಇನ್ನೆರಡು ಶವಗಳು ಸಿಕ್ಕಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಸಾವಿನ ಒಟ್ಟು ಸಂಖ್ಯೆ 56ಕ್ಕೆ ಏರಿದೆ.

Advertisement

ಶಿಮ್ಲಾದ ಸಮ್ಮರ್‌ಹಿಲ್‌ನ ಶಿವದೇಗುಲ ದಲ್ಲಿ ಮತ್ತು ಫಾಗ್ಲಿಯಲ್ಲಿನ ಭೂಕುಸಿತದ ಅವಶೇಷಗಳಡಿ ಇನ್ನೂ 10 ಮಂದಿ ಸಿಲುಕಿ ದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣ ದಳ, ರಾಜ್ಯ ವಿಪತ್ತು ನಿರ್ವಹಣ ದಳಗಳು ಈ ಎರಡೂ ಸ್ಥಳಗಳಲ್ಲಿ ಮಂಗಳವಾರ ಬಿರುಸಿನ ಕಾರ್ಯಾಚರಣೆ ನಡೆಸಿವೆ. ಸೋಮ ವಾರ ರಾತ್ರಿ ಭಾರೀ ಮಳೆ ಸುರಿದಿದ್ದ ರಿಂದ ತಾತ್ಕಾಲಿಕವಾಗಿ ರಕ್ಷಣ ಕಾರ್ಯಾ ಚರಣೆಯನ್ನು ನಿಲ್ಲಿಸಲಾಗಿತ್ತು. ಶಿಮ್ಲಾ ದಲ್ಲಿ ಗುಡ್ಡ ಕುಸಿದು ಕನಿಷ್ಠ ಏಳು ಮನೆ ಗಳ ಮೇಲೆ ಬಿದ್ದಿದ್ದು, ಅಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ಆರಂಭಿಸಲಾಗಿದೆ.

ಮಂಡಿ ಜಿಲ್ಲೆಯಲ್ಲಿ 19 ಸಾವು
ಮಳೆ ಕಾರಣದಿಂದ ಸಂಭವಿಸಿದ ದುರಂತ ಗಳಿಂದ ಹಿಮಾಚಲದ ಮಂಡಿ ಜಿಲ್ಲೆಯಲ್ಲಿ 19 ಸಾವುಗಳು ಸಂಭವಿಸಿವೆ. ಸೆನ್‌ ಪಂಚಾಯತ್‌ನಲ್ಲಿ ಒಂದೇ ಕುಟುಂಬದ 7 ಮಂದಿ ದುರಂತ ಸಾವನ್ನು ಕಂಡಿ ದ್ದಾರೆ. ಸಂಬಲ್‌ನಲ್ಲಿ 6 ಶವಗಳನ್ನು ಹೊರ ತೆಗೆಯಲಾಗಿದೆ. ಸೋಲನ್‌ ಜಿಲ್ಲೆ ಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ದಲ್ಲಿ 857 ರಸ್ತೆಗಳಲ್ಲಿ ಸಂಚಾರ ಸ್ಥಗಿತ ವಾಗಿದೆ. 4,285 ಟ್ರಾನ್ಸ್‌ಫಾರ್ಮರ್‌ಗಳು, 889 ನೀರು ಪೂರೈಕೆ ಘಟಕಗಳಿಗೆ ಹಾನಿಯಾಗಿದೆ.

ಎಂಟಕ್ಕೆ ಏರಿಕೆ
ಉತ್ತರಾಖಂಡದಲ್ಲಿ ಮಳೆ ಪ್ರಕೋಪ ದಿಂದ ಸಾವಿಗೀಡಾದವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಗೌರಿಕುಂಡ ದಲ್ಲಿ ಆ. 4ರಂದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಮಂಗಳ ವಾರ ಪತ್ತೆ ಯಾಗಿದೆ. ಆ. 19ರ ವರೆಗೆ ಉತ್ತರಾಖಂಡ ದಲ್ಲಿ ಬಿರುಸಿನ ಮಳೆ ಯಾಗುವ ಬಗ್ಗೆ ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next