Advertisement

ಅಭಿವೃದ್ಧಿ ಕಾರ್ಯಗಳ ಮುಂದೆ ಅಸತ್ಯ ಗೆಲ್ಲದು

11:36 AM Apr 16, 2018 | Team Udayavani |

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷ 10 ತಿಂಗಳಿನಲ್ಲಿ ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮುಂದಿದ್ದು, ಸತ್ಯ ಏನೆಂದು ಅವರಿಗೆ ತಿಳಿದಿದೆ. ವಿಪಕ್ಷಗಳು ನಡೆಸುವ ಸುಳ್ಳು ಪ್ರಚಾರಗಳು ಯಶಸ್ವಿಯಾಗಲಾರವು ಎಂದು ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ರವಿವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಪಕ್ಷಗಳು ಅಪಪ್ರಚಾರ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಕಾರ್ಯ ಮಾಡುತ್ತಿವೆ. ನನ್ನ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ವಸತಿ ಯೋಜನೆಗಳ ಸಹಿತ ಮೂಲಸೌಕರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆೆ.

ಹಕ್ಕುಪತ್ರ, ಪಡಿತರ ಚೀಟಿ, ಅನ್ನಭಾಗ್ಯ ಸಹಿತ ಸರಕಾರದ ಜನಪರ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಜಾತಿ, ಧರ್ಮ ನೋಡದೆ ಎಲ್ಲರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂದರು.

ಯಾವುದೇ ಚುನಾವಣಾ ಪ್ರಚಾರ ಸತ್ಯದ ಆಧಾರದಲ್ಲಿ, ಶಾಂತಿ ಸೌಹಾರ್ದ ವಾತಾವರಣದಲ್ಲಿ ನಡೆಯಲಿ. ಸುಳ್ಳು ಪ್ರಚಾರಗಳನ್ನು ಮಾಡಿ ಸಮಾಜವನ್ನು ವಿಭಜಿಸುವ ಕಾರ್ಯವನ್ನು ಯಾರೂ ಮಾಡಬಾರದು ಎಂದವರು ಹೇಳಿದರು.

ಪೋಕೊÕ ಕಾಯಿದೆ ಬಲಗೊಳ್ಳಲಿ
ಜಮ್ಮು-ಕಾಶ್ಮೀರದಲ್ಲಿ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಅತ್ಯಂತ ಖಂಡನೀಯ. ದೇಶದಲ್ಲಿ ಪೋಕೊÕ ಕಾಯಿದೆ ಜಾರಿಯಲ್ಲಿದ್ದರೂ ಇಂತಹ ಕೃತ್ಯಗಳು ಹೆಚ್ಚುತ್ತಿವೆ. ಅದುದದರಿಂದ ಪೋಕೊÕ ಕಾಯಿದೆಗೆ ತಿದ್ದುಪಡಿ ತಂದು ಇನ್ನಷ್ಟು ಕಠಿನಗೊಳಿಸಬೇಕು ಹಾಗೂ ಕಠಿನ ಶಿಕ್ಷೆ ವಿಧಿಸುವಂತಾಗಬೇಕು ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಕಾನೂನು ಸಚಿವರನ್ನು ನಾನು ಆಗ್ರಹಿಸುತ್ತಿದ್ದೇನೆ ಎಂದರು. 

Advertisement

ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಮುಖಂಡರಾದ ರಮೇಶ್‌ ಶೆಟ್ಟಿ , ಸುರೇಶ್‌ ಭಟ್ನಾಗರ್‌, ಜಬ್ಟಾರ್‌, ಗೋಪಾಲಕೃಷ್ಣ ತಲಪಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next