Advertisement

2.15 ಲಕ್ಷ ಮೌಲ್ಯದ ಅನಧಿಕೃತ ಕೀಟನಾಶಕ ಜಪ್ತಿ

07:56 PM Aug 06, 2022 | Team Udayavani |

ಶಹಾಪುರ: ಅನಧಿಕೃತವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 2.15 ಲಕ್ಷ ರೂ. ಮೌಲ್ಯದ ಕೀಟನಾಶಕ ಔಷಧಿಯನ್ನು ಆರೋಪಿ ಸಮೇತ ಶುಕ್ರವಾರ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡ ಘಟನೆ ಮಡಿವಾಳೇಶ್ವರ ನಗರದ ಮನೆಯೊಂದರಲ್ಲಿ ನಡೆದಿದೆ.

Advertisement

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೊಸೂರ ಗ್ರಾಮದ ಬಾಳಪ್ಪ ಛತ್ರಪ್ಪ ಛಲವಾದಿ (45) ಬಂಧಿತ ಆರೋಪಿ. ನೋಂದಾಯಿತವಲ್ಲದ ಕೀಟನಾಶಕಗಳನ್ನು ಅಕ್ರಮವಾಗಿ ರೈತರಿಗೆ ವಂಚಿಸಿ, ಮಾರಾಟ ಮಾಡುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರ ಜತೆಗೂಡಿ ದಾಳಿ ನಡೆಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿ ಕಾರಿ ಡಾ| ರೂಪಾದೇವಿ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಸೂಪರ್‌ ಪ್ಲವರ್‌ ಕೀಟನಾಶಕ, ಬಲವನ್‌ ಅರ್ಗೇನೀಕ್‌ ರಸಗೊಬ್ಬರ ಹೀಗೆ ವಿವಿಧ ಅನಧಿಕೃತ ಕೀಟನಾಶಕ ಹಾಗೂ ರಸಗೊಬ್ಬರ ಇರುವುದು ಕಂಡು ಬಂತು. ಅವುಗಳ ಮೌಲ್ಯ 2,15,799 ರೂ. ಆಗಿದೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೆ ಅನಧಿಕೃತ ಕೀಟನಾಶಕ ಹಾಗೂ ರಸಗೊಬ್ಬರ ಮಾರಾಟ ಮಾಡಲು ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದ ಜಟ್ಟಿಲಿಂಗೇಶ್ವರ ಅಗ್ರೋ ಏಜೆನ್ಸಿಯಿಂದ ತಂದಿರುವುದಾಗಿ ಆರೋಪಿ ತಿಳಿಸಿದರು ಎಂದು ಮಾಹಿತಿ ನೀಡಿದ್ದಾರೆ. ಪಿಎಸೈ ಶ್ಯಾಮಸುಂದರ ನಾಯಕ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next