Advertisement

ಅನಧಿಕೃತ ಗಣಿಗಾರಿಕೆ ಕರೆಂಟ್‌ ಕಟ್‌

12:06 PM Jun 23, 2019 | Suhan S |

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿ ಸೇರಿ ಇತರೆ ಭಾಗದಲ್ಲಿರುವ ಅನಧಿಕೃತ ಕಲ್ಲುಗಣಿಗಾರಿಕೆಯಿಂದ ಪರಿಸರ ಹಾಗೂ ಸುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಯಾವುದೇ ನಿಮಯ ಪಾಲಿಸದೇ ಅನಧಿಕೃತವಾಗಿ ಕಲ್ಲು ಒಡೆದು ಅಕ್ರಮವಾಗಿ ಕ್ರಷರ್‌ ನಡೆಸುತ್ತಿರುವ ಘಟಕಗಳ ಮೇಲೆ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಪರವಾನಗಿ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಕ್ರಮಕ್ಕೆ ಮುಂದಾಗಿದೆ. ಅನಧಿಕೃತ ಕ್ರಷರ್‌ಗಳು ಪಡೆದಿರುವ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದೆ.

Advertisement

ವೆಂಕಟಗಿರಿ ಹೋಬಳಿ ಸೇರಿ ಜಿಲ್ಲೆಯಲ್ಲಿಯಲ್ಲಿ ಒಟ್ಟು 42 ಕಲ್ಲುಕ್ವಾರಿ ಹಾಗೂ ಕ್ರಷರ್‌ಗಳಿಗೆ ಪ್ರಾಧಿಕಾರ ಪರವಾನಗಿ ನೀಡಿದ್ದು, ಜಿಲ್ಲೆಯಲ್ಲಿ ಪರವಾನಗಿ ಇಲ್ಲದ 50ಕ್ಕೂ ಹೆಚ್ಚು ಕಲ್ಲುಪುಡಿ ಮಾಡುವ ಘಟಕಗಳಿವೆ. ಇದರಿಂದ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ರೈತರು ಮತ್ತು ಸಂಘ ಸಂಸ್ಥೆಗಳಿಂದ ದೂರು ಬಂದಿರುವ ಕಾರಣ ಕೂಡಲೇ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವುದರಿಂದ ಮೊದಲ ಹಂತದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಪ್ರಾಧಿಕಾರ ಜೆಸ್ಕಾಂಗೆ ಸುತ್ತೋಲೆ ಹೊರಡಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಅಧಿಕೃತವಾಗಿ 42 ಕಲ್ಲು ಕ್ವಾರಿ ಲೈಸೆನ್ಸ್‌ ನೀಡಿದ್ದು ಇವರು ಮಾತ್ರ ಕಲ್ಲುಗಣಿಗಾರಿಕೆ (ಕಲ್ಲನ್ನು ಕ್ರಷಿಂಗ್‌) ಮಾಡಬಹುದಾಗಿದೆ. ವೆಂಕಟಗಿರಿ ಸೇರಿ ಜಿಲ್ಲೆಯ ಇತರೆ ಭಾಗದಲ್ಲಿ ಲೈಸೆನ್ಸ್‌ ಇಲ್ಲದೇ ಕಲ್ಲುಕ್ವಾರಿ ಗಣಿಗಾರಿಕೆ ಮಾಡಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಸರಕಾರಕ್ಕೆ ಇದರಿಂದ ನಷ್ಟವೂ ಆಗುತ್ತಿದೆ. ಇಂತಹ ಘಟಕಗಳನ್ನು ಪತ್ತೆ ಮಾಡಲಾಗಿದ್ದು ಯಾದಿ ಸಮೇತ ಜೆಸ್ಕಾಂ ಪತ್ರ ಬರೆದು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಸೂಚಿಸಲಾಗಿದೆ.•ರಾವಳ, ಸದಸ್ಯ ಕಾರ್ಯದರ್ಶಿ

ಪ್ರಾಧಿಕಾರ ಕಲ್ಲುಗಣಿಗಾರಿಕೆಯ ಸಿ ಲೈಸೆನ್ಸ್‌ ನೀಡುವ ಸಂದರ್ಭದಲ್ಲಿ ಕಲ್ಲು ಕ್ವಾರಿ ಟೆಂಡರ್‌ ಪಡೆದವರಿಗೆ ಮಾತ್ರ ಕಲ್ಲುಪುಡಿ ಮಾಡುವ ಘಟಕಗಳನ್ನು ನಿಯಮಕ್ಕೆ ಅನುಗುಣವಾಗಿ ಹಾಕಿಕೊಳ್ಳಬೇಕು. ರಸ್ತೆಯಿಂದ 200 ಮೀಟರ್‌ ಹಾಗೂ ಘಟಕದ ಸುತ್ತಲೂ ಎತ್ತರಕ್ಕೆ ತಗಡಿನ ಗೋಡೆ ನಿರ್ಮಿಸಬೇಕು. ಸುತ್ತಲೂ ಕೃಷಿ ಭೂಮಿ ಇದ್ದರೆ ಬೆಳೆಗೆ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸೇರಿ ಹಲವು ನಿಯಮಗಳ ಪಾಲನೆ ಮಾಡಲು ಸೂಚಿಸಿ ಪರವಾನಗಿ ನೀಡಲಾಗುತ್ತದೆ.

 

Advertisement

•ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next