Advertisement

ಅನಧಿಕೃತ ಲೇಔಟ್‌ ತೆರವು ಕಾರ್ಯಾಚರಣೆ

01:27 PM Jul 08, 2020 | Suhan S |

ಧಾರವಾಡ: ಇಲ್ಲಿಯ ಸವದತ್ತಿ ರಸ್ತೆ ಬಳಿಯ 8 ಎಕರೆ ಜಾಗದಲ್ಲಿ ನಿರ್ಮಿಸಿದ್ದ ಅನಧಿಕೃತ ಲೇಔಟ್‌ಗಳನ್ನು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ನೇತೃತ್ವದಲ್ಲಿ ಮಂಗಳವಾರ ತೆರವು ಮಾಡಲಾಯಿತು.

Advertisement

ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಪರವಾನಗಿ ಪಡೆಯದೇ ನಿವೇಶನಗಳನ್ನು ಅಭಿವೃದ್ಧಿ ಪಡಿಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಹುಡಾ ವತಿಯಿಂದ 2 ಬಾರಿ ನೋಟಿಸ್‌ ನೀಡಲಾಗಿತ್ತು. ಆದರೆ ನೋಟಿಸ್‌ ಗೆ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ನಿವೇಶನಗಳಲ್ಲಿ ಹಾಕಿದ್ದ ಕಲ್ಲು, ರಸ್ತೆಗಳು ಹಾಗೂ ನೀರಿನ ಪೈಪ್‌ಗ್ಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹುಡಾ ಅಧ್ಯಕ್ಷ ನಾಗೇಶ ಕಲುºರ್ಗಿ, ಹು-ಧಾ ಅವಳಿನಗರದಲ್ಲಿ ಸದ್ಯ 57 ಅನಧಿಕೃತ ಲೇಔಟ್‌ಗಳನ್ನು ಗುರುತಿಸಲಾಗಿದ್ದು, ಇನ್ನೂ ನೂರಾರು ಲೇಔಟ್‌ ಗಳಿದ್ದು, ಅವುಗಳ ಪತ್ತೆ ಕಾರ್ಯ ಸಾಗಿದೆ. ಅನಧಿಕೃತ ಲೇಔಟ್‌ಗಳನ್ನು ಅಧಿಕೃತ ಮಾಡಿಕೊಳ್ಳಲು ಸಮಯ ನೀಡಲಾಗಿದೆ ಎಂದರು.

ಅನಧಿಕೃತ ಲೇಔಟ್‌ಗಳಿಗೆ ಬಡ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಪಶು ಆಗುತ್ತಿದ್ದು, ಹೀಗಾಗಿ ಅದನ್ನು ತಡೆಯುವ ನಿಟ್ಟಿನಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ತೆರವು ಕಾರ್ಯಾಚರಣೆಗೆ ಅನೇಕರು ತಡೆಯೊಡ್ಡುತ್ತಿದ್ದು, ಯಾವುದಕ್ಕೂ ಬಗ್ಗದೆ ನಿರಂತರವಾಗಿ ತೆರವು ನಡೆಸಲಾಗುವುದು. ಧಾರವಾಡದಲ್ಲಿ ಇನ್ನೂ ಒಂದು ವಾರ ಕಾಲ ಕಾರ್ಯಾಚರಣೆ ಸಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next