Advertisement

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ

03:14 PM Dec 13, 2020 | Suhan S |

ಅಥಣಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ಕಾರ್ಯಕಾರಿ ಸಮಿತಿಗೆ ಎಲ್ಲ 24 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಸಂಘದ ಚಿಕ್ಕೋಡಿಜಿಲ್ಲಾಧ್ಯಕ್ಷ ಜಿ.ಎಂ. ಹಿರೇಮಠ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ನಮ್ಮ ಪ್ಯಾನಲ್‌ ಸದಸ್ಯರು ಶಿಕ್ಷಕರ ಬೇಡಿಕೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಕೋವಿಡ್‌ ಸಂಕಷ್ಟ ಸಮಯದಲ್ಲಿಚುನಾವಣೆ ಬೇಡ ಎಂದು ನಿರ್ಧರಿಸಿ ಪ್ರಪ್ರಥಮ ಬಾರಿ ಅವಿರೋಧ ಆಯ್ಕೆಗೆ ಸಹಕರಿಸಿದ್ದಾರೆ. ಈ ವಿಷಯದಲ್ಲಿ ರಾಜ್ಯ ಸಂಘದಿಂದ ಕೂಡಾ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ಶಿಕ್ಷಕರ ಸೇವಾ ಪುಸ್ತಕಗಳ ನಕಲು ಪ್ರತಿ ಮತ್ತು ವೇತನ ಪ್ರಮಾಣಪತ್ರ ಪೂರೈಕೆ, ಶಿಕ್ಷಕರ ಸಂಘಟನೆ ಮೂಲಕ ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ, ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೊಬೈಲ್‌ ನಲ್ಲಿ ತಂತ್ರಾಂಶ ಅಳವಡಿಕೆ, ವೆಬ್‌ಸೈಟ್‌ ವ್ಯವಸ್ಥೆ, ಸರಕಾರಿ ಶಾಲೆಗಳ ಸಬಲೀಕರಣ ಮತ್ತು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ಶಿಕ್ಷಕರಿಗೆ ಇತರೆ ಕೆಲಸಗಳಿಂದ ಮುಕ್ತಿಗೊಳಿಸುವುದು ಸೇರಿದಂತೆ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಸ್ಪಂ ದಿಸಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಎಸ್‌ಸಿ-ಎಸ್‌ಟಿ ಸಂಘದ ಅಧ್ಯಕ್ಷ ಸಿ.ಎಂ. ಕಾಂಬಳೆ, ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಎ.ಬಿ. ದಾಬಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ. ಬಿಜ್ಜರಗಿ, ಎ.ಬಿ.ಕುಟಕೋಳಿ ಮಾತನಾಡಿದರು. ನೂತನವಾಗಿಆಯ್ಕೆಯಾದ ಸದಸ್ಯರಾದ ಬಿ.ಎ. ಮುಜಾವರ, ಕೆ.ಆರ್‌. ಬಡಿಗೇರ, ಎಸ್‌.ಎಂ. ಸೂರ್ಯವಂಶಿ, ಎಂ.ಎಸ್‌. ಸಕ್ರಿ, ಪಿ.ಜಿ. ಮಾಳಿ, ಎಸ್‌.ಕೆ. ಹಳ್ಳೋಳ್ಳಿ,ಆರ್‌.ಎಚ್‌. ಕಟ್ಟಿ, ವಿ.ಎ. ಕನ್ನೂರ, ಎಸ್‌.ಎಂ. ಚವ್ಹಾಣ, ಬಿ.ಎಸ್‌. ಕಾರಾಜನಗಿ, ಆರ್‌.ಕೆ. ಬಡಿಗೇರ, ಎ.ಬಿ. ಕುಟಕೋಳಿ, ಡಿ. ಮೂಲಿಮನಿ, ಅಣ್ಣಪ್ಪ ಹೈಬತ್ತಿ, ಟಿ.ಎಚ್‌. ಪಾಟೀಲ, ಭಾರತಿ ಸಂಗೊಳ್ಳಿ, ಬಿ.ಎಲ್‌. ಮೂಲಿಮನಿ, ಎ.ಎಚ್‌. ಕೋಳಿ, ಜಿ.ಜಿ. ಪವಾರ, ಶೋಭಾ ಢವಳೆ, ಎಂ.ಎಂ. ಮಿರ್ಜೆ, ಎ.ಎನ್‌. ಗಸ್ತಿ, ಆರತಿ ಖೋತ ಸೇರಿದಂತೆ ಪಿ.ಎಚ್‌. ಪತ್ತಾರ, ಆನಂದ ದೇಶಮುಖ, ಆರ್‌. ಎಂ. ಅನಂತಪುರ, ಪಿ.ಎಸ್‌. ಮಸಳಿ, ಎಸ್‌.ಎ.ವಾಲಿ, ಜಿ.ಎಂ. ಮಾನೆ, ಬಿ.ಎಲ್‌.ಪೂಜಾರಿ, ಎಸ್‌ .ಟಿ. ಬೆಳ್ಳಂಕಿ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next