Advertisement

ಮಗು ಮೃತ್ಯು: ಆ್ಯಂಬ್ಯುಲೆನ್ಸ್ ಗೆ ಹಣವಿಲ್ಲದೆ ಚೀಲದಲ್ಲಿ ಮೃತದೇಹವನ್ನು ಹಾಕಿ ತಂದ ತಂದೆ.!

09:48 AM May 15, 2023 | Team Udayavani |

ಪಶ್ಚಿಮ ಬಂಗಾಳ: ತೀರಿ ಹೋದ ಮಗನ ಹೆಣವನ್ನು ಮನೆಗೆ ತರಲು ಹಣವಿಲ್ಲದ ಕಾರಣ ಇಲ್ಲೊಬ್ಬ ತಂದೆ ಬ್ಯಾಗ್‌ ನಲ್ಲೇ ತನ್ನ ಮಗನ ಮೃತದೇಹವನ್ನು ತಂದಿರುವ ಹೃದಯ ವಿದ್ರಾವಕ ಘಟನೆ ಬಂಗಾಳದಲ್ಲಿ ನಡೆದಿದೆ.

Advertisement

ಬಂಗಾಳದ ಡಂಗಿಪಾರ ಗ್ರಾಮದ ನಿವಾಸಿ ವಲಸೆ ಕಾರ್ಮಿಕನಾಗಿರುವ ಅಸೀಂ ದೇವಶರ್ಮಾ ಅವರ ಅವಳಿ ಮಕ್ಕಳಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಮಕ್ಕಳನ್ನು ಕಲಿಯಾಗಂಜ್ ರಾಜ್ಯ ಜನರಲ್ ಆಸ್ಪತ್ರೆಗೆ ಮೊದಲು ದಾಖಲು ಮಾಡಲಾಗಿದೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಅವಳಿ ಮಕ್ಕಳಲ್ಲಿ ಒಂದು ಮಗು ಶನಿವಾರ ಮೃತಪಟ್ಟಿದೆ.

ಮಗುವಿನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಬೇಕು. ಒಂದು ಆ್ಯಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡಿ ಎಂದು ಆಸ್ಪತ್ರೆಯವರಲ್ಲಿ ಅಸೀಂ ದೇವಶರ್ಮಾ ಅವರು ಕೇಳಿಕೊಂಡಿದ್ದಾರೆ. ಆದರೆ ಆ್ಯಂಬ್ಯುಲೆನ್ಸ್ ಚಾಲಕ ಇದಕ್ಕೆ 8000 ರೂ. ಕೊಡುವಂತೆ ಕೇಳಿದ್ದಾನೆ. ಮೊದಲೇ ಕಷ್ಟಪಟ್ಟು ಆಸ್ಪತ್ರೆಯ ಬಿಲ್‌ ಪಾವತಿಸಿದ ಅಸೀಂ ದೇವಶರ್ಮಾ ಅವರಿಗೆ ಇದು ಸಾಧ್ಯವಿಲ್ಲವೆಂದು ತನ್ನ ಮಗನ ಮೃತದೇಹವನ್ನು ಹೇಗಾದರೂ ಮಾಡಿ ಊರಿಗೆ ತೆಗೆದುಕೊಂಡು ನಿರ್ಧರಿಸಿದ್ದಾರೆ.

ಬ್ಯಾಗ್‌ ವೊಂದರಲ್ಲಿ ತನ್ನ 5 ತಿಂಗಳ ಮಗುವಿನ ಮೃತದೇಹವನ್ನು ಹಾಕಿಕೊಂಡು ಬಂಗಾಳದ ಸಿಲಿಗುರಿಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ರಾಯಗಂಜ್‌ಗೆ ಖಾಸಗಿ ಬಸ್ ನಲ್ಲಿ ಸಾಗಿದ್ದಾರೆ. ಯಾರಿಗೂ ಗೊತ್ತಾಗದಂತೆ ಬ್ಯಾಗ್‌ ನ್ನು ಸುರಕ್ಷಿತವಾಗಿ ಹಿಡಿದುಕೊಂಡಿದ್ದಾರೆ. ಕಲಿಯಾಗಂಜ್‌ ತಲುಪಿದ ಬಳಿಕ ಅಲ್ಲಿಂದ ಆ್ಯಂಬ್ಯುಲೆನ್ಸ್ ವ್ಯವಸ್ಥೆಯೊಂದನ್ನು ಮಾಡಿಕೊಂಡು ಊರಿಗೆ ಬಂದು ಮಗನ ಅಂತ್ಯಕ್ರಿಯೆಯನ್ನು ನಡೆಸಿದ್ದಾರೆ.

“ನನ್ನ 5 ತಿಂಗಳ ಮಗ 6 ದಿನಗಳ ಚಿಕಿತ್ಸೆ ಬಳಿಕ ಮೃತಪಟ್ಟಿದ್ದಾನೆ. ಆತನ ಚಿಕಿತ್ಸೆಗೆ ನಾನು 16 ಸಾವಿರ ರೂ. ವ್ಯಯಿಸಿದ್ದೇನೆ. ನನ್ನ ಬಳಿ ಆ್ಯಂಬ್ಯುಲೆನ್ಸ್ ಗೆ ನೀಡಲು ಹಣವಿಲ್ಲ ಅದಕ್ಕಾಗಿ ನಾನು ಚೀಲದಲ್ಲಿ ಮಗನ ಮೃತದೇಹವನ್ನು ಹಾಕಿಕೊಂಡು ಬಂದೆ” ಎಂದು ದುಃಖದಲ್ಲಿ ಅಸೀಂ ದೇವಶರ್ಮಾ ಹೇಳಿದರು.

Advertisement

ಘಟನೆ ಬಗ್ಗೆ ಉಲ್ಲೇಖಿಸಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಅನೇಕರು ಸೇರಿದಂತೆ ಹಲವು ರಾಜಕೀಯ ಮುಖಂಡರು ಸರ್ಕಾರದ ಕುರಿತು ಟೀಕೆ ಮಾಡಿವೆ.

 

Advertisement

Udayavani is now on Telegram. Click here to join our channel and stay updated with the latest news.

Next