Advertisement

ಹೆರಿಗೆ ಅವಧಿಯಲ್ಲಿ ಶಿಶು ಸಾವು: ಜಗತ್ತಿನಲ್ಲಿ ಭಾರತದ ಪಾಲು ಶೇ.60

09:03 PM May 10, 2023 | Team Udayavani |

ಕೇಪ್‌ಟೌನ್‌: ಹೆರಿಗೆ ಅವಧಿಯಲ್ಲಿ ತಾಯಿಯ ಸಾವು, ನವಜಾತ ಶಿಶುಗಳ ಮರಣ, ಗರ್ಭಾವಸ್ಥೆಯಲ್ಲಿಯೇ ಶಿಶುಗಳ ಸಾವು ಪ್ರಕರಣಗಳಲ್ಲಿ ಭಾರತವು ಜಗತ್ತಿನ ಹತ್ತು ರಾಷ್ಟ್ರಗಳ ಪೈಕಿ ಮೊದಲ ಸಾಲಿನಲ್ಲಿ ಇದೆ. ಇಲ್ಲಿಯೇ ಜಗತ್ತಿನ ಮೂರು ವಿಭಾಗಗಳ ಶೇ.60ರಷ್ಟು ಪ್ರಕರಣಗಳು ದೃಢಪಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಮತ್ತು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್ಪಿಎ) ಅಧ್ಯಯನ ಹೇಳಿದೆ.

Advertisement

2020ಕ್ಕೆ ಸಂಬಂಧಿಸಿದಂತೆ 7,88,000 ಹೆರಿಗೆ ಅವಧಿಯಲ್ಲಿ ತಾಯಿಯ ಸಾವು, ನವಜಾತ ಶಿಶುಗಳ ಮರಣ, ಗರ್ಭಾವಸ್ಥೆಯಲ್ಲಿಯೇ ಶಿಶುಗಳ ಸಾವು ಪ್ರಕರಣಗಳು ದಾಖಲಾಗಿವೆ. ಜಗತ್ತಿನಲ್ಲಿ 45 ಲಕ್ಷ ಇಂಥ ಕೇಸುಗಳು ದೃಢಪಟ್ಟಿವೆ. ಈ ಪಟ್ಟಿಯಲ್ಲಿ ನೈಜೀರಿಯಾ, ಪಾಕಿಸ್ತಾನ, ಡೆಮಾಕ್ರಾಟಿಕ್‌ ಆಫ್ ಕಾಂಗೋ, ಇಥಿಯೋಪಿಯಾ, ಬಾಂಗ್ಲಾದೇಶ ಮತ್ತು ಚೀನಾ ಇವೆ. ಹೆರಿಗೆ ವೇಳೆ ತಾಯಿಯ ಸಾವು, ನವಜಾತ ಶಿಶುಗಳ ಸಾವು ನಿಯಂತ್ರಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಕಳೆದ ದಶಕದ ಅವಧಿಯಲ್ಲಿ ನಿಧಾನಗತಿಯಲ್ಲಿತ್ತು ಎಂದು ವರದಿಯಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ.

ಕೊರೊನಾ ಸೋಕು, ಹವಾಮಾನ ಬದಲಾವಣೆ ಸೇರಿದಂತೆ ಪ್ರಮುಖ ವಿಚಾರಗಳೂ ಕೂಡ ಈ ಕ್ಷೇತ್ರದಲ್ಲಿ ಹೆಚ್ಚಿನ ನಿಯಂತ್ರಣ ಸಾಧಿಸಲು ಅಡ್ಡಿಯಾಗಿತ್ತು ಎಂದೂ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next