Advertisement

ಮತ್ತೊಂದು ಪರಮಾಣು ಪರೀಕ್ಷೆಗೆ ಇರಾನ್‌ ಸಜ್ಜು?

11:30 AM Jun 10, 2022 | Team Udayavani |

ವಿಯಾನ್ನ: ಇತ್ತೀಚಿನ ವರ್ಷಗಳಲ್ಲಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಅಮೆರಿಕ ಸೇರಿದಂತೆ ಹಲವಾರು ದೈತ್ಯ ದೇಶಗಳನ್ನು ಎದುರು ಹಾಕಿಕೊಂಡಿರುವ ಇರಾನ್‌, ಪುನಃ ಅಂಥದ್ದೇ ಕೆಲಸಕ್ಕೆ ಕೈ ಹಾಕಿದೆಯೇ ಎಂಬ ಪ್ರಶ್ನೆ ಎದ್ದಿದೆ.

Advertisement

ಅದಕ್ಕೆ ಕಾರಣ, ಇತ್ತೀಚೆಗೆ ತನ್ನ ಪರಮಾಣು ಪರೀಕ್ಷಾ ಸ್ಥಳದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗಾ ವಹಿಸಲು ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ 27 ಕ್ಯಾಮೆರಾಗಳನ್ನು ಇರಾನ್‌ ಸರ್ಕಾರ ಬಂದ್‌ ಮಾಡಿದೆ.

ಈ ಹಿನ್ನೆಲೆಯಲ್ಲಿ ವಿಯೆನ್ನಾದಲ್ಲಿ ಕರೆಯಲಾಗಿರುವ ಪರಮಾಣು ತುರ್ತು ಸಭೆಯಲ್ಲಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯಾದ ನಿರ್ದೇಶಕ ರಫೇಲ್‌ ಮರಿಯಾನೊ ಗ್ರಾಸ್ಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next