Advertisement

ಪ್ರಸಕ್ತ ಮಾಸಾಂತ್ಯದಲ್ಲಿ ವಿಶ್ವಸಂಸ್ಥೆ ಖಜಾನೆ ಬರಿದು?

02:04 AM Oct 09, 2019 | mahesh |

ವಾಷಿಂಗ್ಟನ್‌: ವಿಶ್ವಸಂಸ್ಥೆಯು 230 ದಶಲಕ್ಷ ಡಾಲರ್‌ನಷ್ಟು ಹಣದ ಕೊರತೆ ಎದುರಿಸುತ್ತಿದ್ದು, ಪ್ರಸಕ್ತ ತಿಂಗಳಾಂತ್ಯ ದಲ್ಲಿ ಖಜಾನೆ ಬರಿದಾಗಲಿದೆ ಎಂದು ಸ್ವತಃ ವಿಶ್ವಸಂಸ್ಥೆ ಅಧ್ಯಕ್ಷ ಆ್ಯಂಟೋನಿಯೋ ಗುಟೆರಸ್‌ ಮಾಹಿತಿ ನೀಡಿದ್ದಾರೆ.

Advertisement

ಯುಎನ್‌ ಕಾರ್ಯಾಲಯದ 37 ಸಾವಿರ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಅವರು ಈ ವಿಚಾರವನ್ನು ಉಲ್ಲೇಖೀ ಸಿದ್ದಾರೆ. ಆದರೆ, ಉದ್ಯೋಗಿಗಳ ವೇತನ ಹಾಗೂ ಇತರೆ ಭತ್ಯೆಗಳನ್ನು ನೀಡಲು ಕೈಗೊಂಡಿರುವ ಹೆಚ್ಚುವರಿ ಕ್ರಮಗಳ ಬಗ್ಗೆ ಪ್ರಸ್ತಾವಿಸಿಯೇ ಇಲ್ಲ ಎಂದು ಎಎಫ್ಪಿ ವರದಿ ಮಾಡಿದೆ.

ಸಾಮಾನ್ಯವಾಗಿ ವಿಶ್ವಸಂಸ್ಥೆಗೆ ಅಗತ್ಯವಿರುವ ಬಜೆಟ್‌ಗೆ ಪೂರಕವಾಗಿ ಸದಸ್ಯ ರಾಷ್ಟ್ರಗಳು ಹಣ ಪಾವತಿಸುತ್ತವೆ. ಆದರೆ, ಪ್ರಸಕ್ತ ಸಾಲಿನಲ್ಲಿ ಸದಸ್ಯ ರಾಷ್ಟ್ರಗಳು ಶೇ.70ರಷ್ಟು ಮೊತ್ತವನ್ನು ಮಾತ್ರ ಪಾವತಿಸಿವೆ.

ಇದರಿಂದಾಗಿ 230 ದಶಲಕ್ಷ ಡಾಲರ್‌ ನಗದು ಕೊರತೆ ಉಂಟಾಗಿದೆ ಎಂದು ಪತ್ರದಲ್ಲಿ ವಿವರಿ ಸಲಾ ಗಿದೆ. ವಿಶ್ವಸಂಸ್ಥೆಯ ಖಜಾನೆ ಬರಿದಾಗುವ ಸುದ್ದಿ ಕುರಿತು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next