Advertisement

ಯುವ ಸೇನಾಧಿಕಾರಿ ಹತ್ಯೆ: 3 ಹಿಜ್‌ಬುಲ್‌ ಶಂಕಿತರ ಪೋಟೋ ಬಿಡುಗಡೆ

12:23 PM May 12, 2017 | udayavani editorial |

ಜಮ್ಮು ಕಾಶ್ಮೀರ : 22ರ ಹರೆಯದ ಕಾಶ್ಮೀರದ ಭಾರತೀಯ ಸೇನಾ ಅಧಿಕಾರಿಯನ್ನು ಅಪಹರಿಸಿ ಹತ್ಯೆಗೈದ ಹಿಜ್‌ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಮೂವರು ಶಂಕಿತರನ್ನು ಪೊಲೀಸರು ಗುರುತಿಸಿದ್ದಾರೆ.  ಅಂತೆಯೇ ಅವರ ಫೋಟೋಗಳನ್ನು ಮಾಧ್ಯಮಕ್ಕೆ ಬಿಡುಗಡೆಮಾಡಿದ್ದಾರೆ ಮಾತ್ರವಲ್ಲದೆ ಅವರ ಚಿತ್ರಗಳಿರುವ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಹಾಕಿಸಿದ್ದಾರೆ. 

Advertisement

ಪೊಲೀಸರು ಗುರುತಿಸಿರುವ ಹಂತಕರ ಹೆಸರು ಇಂತಿದೆ : ಇಷ್‌ಫಾಕ್‌ ಅಹ್ಮದ್‌ ಠೊಕರ್‌, ಗಯಾಸ್‌ ಉಲ್‌ ಇಸ್ಲಾಮ್‌ ಮತ್ತು ಅಬ್ಟಾಸ್‌ ಅಹ್ಮದ್‌ ಭಟ್‌. 

ಈ ಶಂಕಿತ ಉಗ್ರರು ಎಲ್ಲಿ ಅಡಗಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದವರಿಗೆ ಇನಾಮು ನೀಡಲಾಗುವುದು ಎಂದು ಪೊಲೀಸರು ಪ್ರಕಟಿಸಿದ್ದಾರೆ. 

ಮೂಲತಃ ದಕ್ಷಿಣ ಕಾಶ್ಮೀರದ ಕುಲಗಾಂವ್‌ನ ನಿವಾಸಿ, 22ರ ಹರೆಯದ ರಾಜಪುತಾನ ರೈಫ‌ಲ್ಸ್‌  ಅಧಿಕಾರಿ, ಉಮರ್‌ ಫ‌ಯಾಜ್‌ ಅವರು ಶೋಪಿಯಾನ್‌ನಲ್ಲಿನ ತಮ್ಮ ಸೋದರ ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದಾಗ ಶಂಕಿತ ಹಿಜ್‌ಬುಲ್‌ ಮುಜಾಹಿದೀನ್‌ ಉಗ್ರರು ಕಳೆದ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಅಪಹರಿಸಿ ಬಳಿಕ ಹತ್ಯೆಗೈದಿದ್ದರು. ಫ‌ಯಾಜ್‌ ಅವರ ಗುಂಡುಗಳು ತುಂಬಿದ್ದ  ಮೃತ ದೇಹವು ಮರುದಿನ ಬೆಳಗ್ಗೆ ಪತ್ತೆಯಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next