Advertisement

ಗ್ರಾಮಸ್ಥರಿಂದ ತುಂಬಿತು ಉಮಿಲಾಯಿ ಕಿರುನದಿ

01:14 PM Jan 04, 2021 | Team Udayavani |

ವೇಣೂರು, ಜ. 3:  ಪ್ರತೀ ವರ್ಷದಂತೆ ಈ ವರ್ಷವೂ ಕುಕ್ಕೇಡಿ ಗ್ರಾಮದ ಉಮಿಲಾಯಿ ಪರಿಸರದ ಕಿರುನದಿ ತುಂಬಿ ತುಳುಕುತ್ತಿದೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ವರದಾನವಾಗುವ ಈ ನದಿಯಲ್ಲಿ ನೀರಿರಲು ಕಾರಣ ಕುಕ್ಕೇಡಿ ಮತ್ತು ಗರ್ಡಾಡಿಯ ಗ್ರಾಮಸ್ಥರು.

Advertisement

ತಾಲೂಕಿನಲ್ಲಿ ಕೆಲವು ಕಿಂಡಿ ಅಣೆ ಕಟ್ಟುಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿ ಬೇಸಗೆಯಲ್ಲಿ ಜೀವ ಕಳೆದುಕೊಳ್ಳುತ್ತವೆ. ಆದರೆ ಉಮಿಲಾಯಿ ಪರಿಸರದ ಕಿರುನದಿಗೆ ಗ್ರಾಮಸ್ಥರೇ ಹಲಗೆ ಅಳವಡಿಸಿ ಶ್ರಮದಾನದ ಮೂಲಕ ನೀರಿಂಗಿಸುವ ಕಾರ್ಯದಲ್ಲಿ ನಿರತರಾಗಿ ಜಲ ಸಮೃದ್ಧಿ ಪಡೆದುಕೊಂಡಿದ್ದಾರೆ.

2013ರಲ್ಲಿ ಉಮಿಲಾಯಿ ಪರಿಸರದ ಉಪನದಿಗೆ ಜನರ ಬೇಡಿಕೆಯಂತೆ ಕಿರು ಸೇತುವೆ ನಿರ್ಮಿಸಿ ಹಲಗೆ ಅಳವ ಡಿಸಲಾಗಿತ್ತು. ಅಂದಿನಿಂದ ಸತತ 7 ವರ್ಷಗಳಿಂದ ಈ ಕಿಂಡಿ ಅಣೆಕಟ್ಟಿಗೆ ಕುಕ್ಕೇಡಿ-ಗರ್ಡಾಡಿ ಗ್ರಾಮಸ್ಥರು ಹಲಗೆ ಅಳವಡಿಸುತ್ತಾ ಬರುತ್ತಿದ್ದು, ಪರಿಸರದಲ್ಲಿ ಅಂತರ್ಜಲದ ಮಟ್ಟ ವೃದ್ಧಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

1 ಕಿ.ಮೀ.ನಷ್ಟು ನೀರು ಸಂಗ್ರಹ :

15 ಕಿಂಡಿಗಳಿರುವ ಈ ಕಿರುಸೇತುವೆಯಡಿ ಸುಮಾರು 10 ಅಡಿ ಎತ್ತರಕ್ಕೆ ಹಲಗೆ ಅಳವಡಿಸಿ ನೀರನ್ನು ತಡೆಯಲಾಗುತ್ತದೆ. ಒಂದು ಕಿಂಡಿಗೆ ಸರಿಸುಮಾರು 24 ಹಲಗೆ ಬೇಕಾಗುತ್ತವೆ. ಒಂದು ಅಡಿಯಷ್ಟು ಜಾಗವನ್ನು ಬಿಟ್ಟು ಎರಡು ಬದಿಗಳಲ್ಲಿ ಹಲಗೆ ಇಳಿಸಲಾಗುತ್ತದೆ. ಮಧ್ಯ ಭಾಗಕ್ಕೆ ಮಣ್ಣುತುಂಬಿಸಿ ನೀರನ್ನು ಪೂರ್ಣವಾಗಿ ತಡೆಯಲಾಗುತ್ತದೆ. ನದಿಯ ಸುಮಾರು 1 ಕಿ.ಮೀ.ನಷ್ಟು ಉದ್ದಕ್ಕೆ ನೀರು ನಿಲ್ಲುವುದು ವಿಶೇಷ.

Advertisement

ಮಾದರಿ ಕಾರ್ಯ :  ಕುಕ್ಕೇಡಿ-ಗರ್ಡಾಡಿ ಗ್ರಾಮದ25ರಿಂದ 30 ಗ್ರಾಮಸ್ಥರುಶ್ರಮದಾನದಲ್ಲಿ ಪ್ರತೀ ವರ್ಷ ಪಾಲ್ಗೊಂಡು ನದಿಯ ಅಣೆಕಟ್ಟಿಗೆಹಲಗೆ ಅಳವಡಿಸುವ ಜವಾಬ್ದಾರಿ ತೆಗೆದುಕೊಂಡು ಮಾದರಿಯಾಗಿದ್ದಾರೆ. ಈ ಅಣೆಕಟ್ಟಿನಿಂದ ಕೇವಲ ನದಿ ಬದಿಯ ಕೃಷಿ ಭೂಮಿಗಳಿಗೆಮಾತ್ರವಲ್ಲದೆ ಕುಕ್ಕೇಡಿ ಮತ್ತು ಗರ್ಡಾಡಿ ಗ್ರಾಮದ 30ಕ್ಕೂ ಅಧಿಕ ಕುಟುಂಬಗಳಿಗೆಅನುಕೂಲವಾಗಿದೆ. ಮಾತ್ರವಲ್ಲದೆ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಳಕ್ಕೂಕಾರಣವಾಗಿದೆ. ಕಟ್ಟ ನಿರ್ಮಿಸಲುಹಲಗೆಯ ಬೇಡಿಕೆ ಇಟ್ಟಾಗ ಈಹಿಂದಿನ ಶಾಸಕ ವಸಂತ ಬಂಗೇರ ತಮ್ಮ ನಿಧಿಯಿಂದ ಅನುದಾನ ಒದಗಿಸಿದ್ದಾರೆ.ಈಗಿನ ಶಾಸಕ ಹರೀಶ್‌ ಪೂಂಜ ಅವರೂನಮ್ಮ ಕಾರ್ಯವನ್ನು ಶ್ಲಾಘಿಸಿ ಹಲಗೆಗೆಅನುದಾನವನ್ನು ಒದಗಿಸಿಕೊಟ್ಟಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

 

– ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next