ಚಿತ್ರರಂಗದಲ್ಲೇ ಮೊದಲ ಬಾರಿಗೆ ಎಂಬಂತೆ ತುಳು ರಂಗಭೂಮಿಯಲ್ಲಿ ನವರಸರಾಜೆ ಎಂದೇ ಖ್ಯಾತಿಗಳಿಸಿರುವ ಭೋಜರಾಜ ವಾಮಂಜೂರು ಈ ಚಿತ್ರ ನವರಸಗಳಲ್ಲಿ ಎಂಟನ್ನು ಅಭಿನಯಿಸಿ ಮಿಂಚಿದ್ದಾರೆ. ಸಾಮಾನ್ಯವಾಗಿ ಕಲಾವಿದರು ಒಂದು ಚಿತ್ರದಲ್ಲಿ, ದ್ವಿಪಾತ್ರ, ತ್ರಿಪಾತ್ರಗಳ ಮೂಲಕ ಅಭಿನಯಿಸುವುದನ್ನು ಕಂಡಿದ್ದೇವೆ. ದಶಾವತಾರಂ ಚಿತ್ರದಲ್ಲಿ ಕಮಲಹಾಸನ್ 10 ಪಾತ್ರಗಳಲ್ಲಿ ಮಿಂಚಿದ್ದಾರೆ. ಆದರೆ ಈ ಚಿತ್ರದಲ್ಲಿ ವಾಮಂಜೂರು ಅವರು ಪ್ರತಿ ರಸಕ್ಕೊಂದರಂತೆ ಎಂಟು ಪಾತ್ರಗಳನ್ನು ನಿರ್ವಹಿಸಿದ್ದಾರೆ.
Advertisement
ಚಿತ್ರರಂಗದಲ್ಲಿ ಇಂತಹ ಪ್ರಯತ್ನ ಇದೇ ಮೊದಲ ಬಾರಿಗೆ ನಡೆದಿದ್ದು, ತುಳು ಚಿತ್ರಪ್ರೇಮಿಗಳಿಗೆ ವಿಭಿನ್ನ ಮನೋರಂಜನೆಯನ್ನು ನೀಡಲಿದೆ. ಜತೆಗೆ ಅರವಿಂದ ಬೋಳಾರ್ ಅವರು ದ್ವಿಪಾತ್ರದಲ್ಲಿ ಮಿಂಚಿದ್ದು, ನವೀನ್ ಡಿ. ಪಡೀಲ್ ಮುಸ್ಲಿಂ ಸಮಾಜಸೇವಕರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಆ್ಯನಿಮೇಶನ್ ವರ್ಕ್ ಕೆನಡಾದಲ್ಲಿ ನಡೆದಿದ್ದು, ನೊಣದ ಮಾಡೆಲಿಂಗ್, ರಿಗ್ಗಿಂಗ್ ಕೆಲಸ ಹೈದರಾಬಾದ್, ಮುಂಬಯಿನಲ್ಲಿ ನಡೆದಿದೆ. ಈ ಚಿತ್ರದಿಂದಾಗಿ ತುಳು ಚಿತ್ರವನ್ನು ಇತರ ಭಾಷಿಗರೂ ನೋಡಲಿದ್ದು, ಮಾರುಕಟ್ಟೆಯೂ ವೃದ್ಧಿಯಾಗಲಿದೆ ಎಂದು ಚಿತ್ರದ ನಿರ್ದೇಶಕ ರಂಜಿತ್ ಸುವರ್ಣ ಅಭಿಪ್ರಾಯಿಸುತ್ತಾರೆ.