Advertisement
ಈ ನಡುವೆ, ಅಸಮಾಧಾನಿತ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರೊಂದಿಗೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಶಾಸಕರ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಹಿರಿಯ ಶಾಸಕರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಎಂ.ಪಿ.ರೇಣುಕಾಚಾರ್ಯ ಇತರರು ಅಸಮಾಧಾನದ ಮಾತುಗಳನ್ನಾಡುತ್ತಿರುವುದು ಪಕ್ಷದ ನಾಯಕರಲ್ಲಿ ಆತಂಕ ಸೃಷ್ಟಿಸಿದಂತಿದೆ. ಹಾಗಾಗಿ ಅತೃಪ್ತರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ತೆರೆಮರೆಯಲ್ಲೇ ನಡೆಸುತ್ತಿದ್ದಾರೆ.
Related Articles
Advertisement
ಹೈ-ಕ ಭಾಗದಲ್ಲಿ 15-16 ಶಾಸಕರು ಗೆದ್ದಿದ್ದೇವೆ. ಇನ್ನೂ 3- 4 ಶಾಸಕರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿಲ್ಲ. ನಮ್ಮ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸ ಲಾತಿ ನೀಡಿದರೆ ನನಗೆ ಅಷ್ಟೇ ಸಾಕು ಎಂದು ಹೇಳಿದರು.
ಬಿಜೆಪಿ ಶಾಸಕ ರಾಮಣ್ಣ ಲಮಾಣಿ, ಸೋತವರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂದರೆ 4 ಬಾರಿ ಗೆದ್ದ ನಾವೇನು ಮಾಡಬೇಕು. ಕಳೆದ ಬಾರಿ ಸಂಪುಟದಲ್ಲೂ ಅವರಿಗೇ ಅವಕಾಶ. ಈ ಬಾರಿಯೂ ಸ್ಥಾನ ನೀಡು ತ್ತಾರೆ ಎಂದರೆ ಏನರ್ಥ ಎಂದು ಬೇಸರ ವ್ಯಕ್ತಪಡಿಸಿದರು.0
ಹೊರಟ್ಟಿ- ಕತ್ತಿ ಭೇಟಿ: ಶಾಸಕರ ಭವನದಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ನಾವೆಲ್ಲಾ ಹಿಂದೆ ಒಂದೇ ಪಕ್ಷದಲ್ಲಿ ಇದ್ದವರು. ಮುಂದೆ ರಾಜಕೀಯದಲ್ಲಿ ಏನಾಗುವುದೋ ಗೊತ್ತಿಲ್ಲ. ಹಿಂದೆ ಒಟ್ಟಿಗೆ ಇದ್ದವರು ಮುಂದೆಯೂ ಒಟ್ಟಿಗೆ ಆಗಬ ಹುದು. ರಾಜಕಾರಣದಲ್ಲಿ ಎಲ್ಲವೂ ಹೀಗೆಯೇ ಆಗುತ್ತಿದೆ ಎಂದು ತಿಳಿದುಕೊಳ್ಳಬಾರದು ಎಂದು ಮಾರ್ಮಿಕವಾಗಿ ನುಡಿದರು.
ಮರಳಿ ಮನೆಗೆ ಬನ್ನಿ ಎಂದು ಉಮೇಶ್ ಕತ್ತಿ ಯವರಿಗೆ ಬಹಳ ದಿನಗಳಿಂದ ಹೇಳುತ್ತಿದ್ದೇವೆ. ಈಗಲೂ ಹೇಳಿದ್ದೇನೆ. ಕೆಲವು ಮುಳ್ಳುಗಳಿದ್ದು, ಸರಿ ಪಡಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ಆಗು ಹೋಗುಗಳ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ಹೇಳಿದರು.
ಯಡಿಯೂರಪ್ಪ ಬಳಿ ಚರ್ಚೆ: ಯಡಿಯೂರಪ್ಪ ನಿವಾಸಕ್ಕೆ ಮಂಗಳವಾರ ರಾತ್ರಿ ತೆರಳಿದ್ದ ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ ಅವರು ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಚರ್ಚೆ ನಡೆಸಿದರು. ತಮಗೆ ಈಗ ಅವಕಾಶ ತಪ್ಪಿಸಿದ ರೀತಿಯಲ್ಲೇ ಮುಂದೆ ಸಹೋದರ ರಮೇಶ್ ಜಾರಕಿಹೊಳಿ ಅವರಿಗೆ ಅನ್ಯಾಯ ವಾಗಬಾರದು. ಹಿಂದೆ ನಡೆದ ಮಾತುಕತೆಯಂ ತೆಯೇ ಅವರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು ಎನ್ನಲಾಗಿದೆ.
ಇನ್ನೊಂದೆಡೆ ವರಿಷ್ಠರು ರವಾನಿಸಿದ ಪಟ್ಟಿಯಲ್ಲಿದ್ದ ತಮ್ಮ ಹೆಸರನ್ನು ತೆಗೆಸಿದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಉಮೇಶ್ ಕತ್ತಿ ಒತ್ತಾಯಿಸಿದರು. ಯಾವುದೇ ಕಾರಣಕ್ಕೂ ಮಾಜಿ ಶಾಸಕರು ಸಚಿವ ಸ್ಥಾನದಲ್ಲಿ ಮುಂದುವರಿಯ ಬಾರದು ಎಂದು ಆಗ್ರಹಿಸಿದರು. ಬಳಿಕ ಯಡಿ ಯೂರಪ್ಪ ಅವರು ಉಭಯ ನಾಯಕರನ್ನು ಸಮಾ ಧಾನಪಡಿಸುವ ಪ್ರಯತ್ನ ಮಾಡಿದರು ಎಂದು ಹೇಳಲಾಗಿದೆ.
ಸಿಎಂ ಜತೆ ಚರ್ಚಿಸಿದ್ದೇನೆನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಸಿಕ್ಕಿಲ್ಲ. ಹಾಗೆಂದು ನನಗೆ ಯಾವ ಅತೃಪ್ತಿ, ಅಸಮಾ ಧಾನವೂ ಇಲ್ಲ. ನನಗಿದ್ದ ಅಸಮಾಧಾನವನ್ನು ಮುಖ್ಯಮಂತ್ರಿಗಳ ಹೇಳಿಕೊಂಡಿದ್ದೇನೆ. ಅವರು ನನಗೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಎಂದು ನಾಯಕ ಉಮೇಶ್ ಕತ್ತಿ ಹೇಳಿದರು. ನಮ್ಮ ಕುಟುಂಬ ಮುಗಿಸಲು ಸಾಧ್ಯವಿಲ್ಲ
ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ಅಸಮಾಧಾನ ಇಲ್ಲವೇ ಇಲ್ಲ. ನನಗೆ ಯಾವುದೇ ಸ್ಥಾನಮಾನವೂ ಬೇಡ. ನಾನು ಸನ್ಯಾಸಿ ರೀತಿಯ ಇದ್ದೇನೆ ಎಂದು ಸಿಎಂ ಯಡಿಯೂರಪ್ಪ ಅವರ ಮುಂದೆಯೇ ಹೇಳಿ ದ್ದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿ ದರು. ನಾನು ಸಚಿವನಾಗಿದ್ದಕ್ಕಿಂತ ಶಾಸಕನಾಗಿ ಹೆಚ್ಚು ಕೆಲಸ ಮಾಡಿದ್ದೇನೆ. ಉಮೇಶ್ ಕತ್ತಿಯವರಿಗೆ ಅನ್ಯಾ ಯವಾಗಿದ್ದು, ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ. ನಮ್ಮ ಕುಟುಂಬವನ್ನು ತುಳಿಯಬೇಕು ಎಂದು ನಾಲ್ಕೈದು ಮಂದಿ ಅಂದುಕೊಂಡರೂ ಅದು ಸಾಧ್ಯವಿಲ್ಲ ಎಂದು ಜಾರಕಿಹೊಳಿ ಹೇಳಿದರು.