Advertisement
ಏ.12ರಂದು ಉಮೇಶ ಕಾರಜೋಳ ಹೆಸರಿನಲ್ಲಿ ಇರುವ ಫೇಸ್‌ಬುಕ್‌ನಲ್ಲಿ ಮೋದಿ ಓಕೆ, ಬಿಎಸ್‌ವೈ ಯಾಕೆ? ಎಂಬ ಬರಹ ಹಾಕಲಾಗಿತ್ತು. ರಾಯಚೂರು ಜಿಲ್ಲೆಯ ಲಿಂಗಸಗೂರು ಕ್ಷೇತ್ರದ ಆಕಾಂಕ್ಷಿ ಆಗಿರುವ ಉಮೇಶ ಅವರಿಗೆ ಅಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅವರು ಅಸಮಾಧಾನಗೊಂಡು ಈ ರೀತಿ ಹಾಕಿದ್ದಾರೆಂದು ಹೇಳಲಾಗಿದೆ. ಆದರೆ, ಸಂಜೆಯ ಹೊತ್ತಿಗೆ ಉಮೇಶ ಕಾರಜೋಳ ಹೆಸರಿನ ಅದೇ ಫೇಸ್‌ಬುಕ್‌ನಲ್ಲಿ, ನಾನು ಯಾವುದೇ ಸ್ಟೇಟಸ್ ಹಾಕಿಲ್ಲ. ಕಿಡಿಗೇಡಿಗಳು ನನ್ನ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾಡಿದ್ದಾರೆಂದು ಮತ್ತೂಂದು ಸ್ಟೇಟಸ್ ಹಾಕಿ ಸ್ಪಷ್ಟನೆ ನೀಡಿದ್ದಾರೆ. Advertisement
ಕಾರಜೋಳ ಪುತ್ರ ಹೆಸರಲ್ಲಿ ವಿವಾದಾತ್ಮಕ ಸ್ಟೇಟಸ್
06:50 AM Apr 14, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.