Advertisement

ಉಮೇಶ್‌ “ದಿ ವಿಲನ್‌’ಎಂದು ಟ್ವೀಟಿಗರಿಂದ ವ್ಯಂಗ್ಯ

12:30 AM Feb 26, 2019 | Team Udayavani |

ವಿಶಾಖಪಟ್ಟಣ: ಕೊನೆಯ ಓವರ್‌ನಲ್ಲಿ ಉಮೇಶ್‌ ಯಾದವ್‌ 14 ರನ್‌ ಬಿಟ್ಟುಕೊಟ್ಟಿದ್ದರಿಂದ ಆಸ್ಟ್ರೇಲಿಯ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಎರಡು ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ. ಇದೀಗ ಕೊನೆಯ ಓವರ್‌ ಎಸೆದ ಉಮೇಶ್‌ ಯಾದವ್‌ ವಿರುದ್ಧ ಟ್ವೀಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. “ದಿ ವಿಲನ್‌’ ಎಂದು ಕ್ರಿಕೆಟ್‌ ಅಭಿಮಾನಿಗಳು ಆಕ್ರೋಶದಿಂದ ಉಮೇಶ್‌ ಯಾದವ್‌ ವಿರುದ್ಧ ಹರಿಹಾಯ್ದಿದ್ದಾರೆ. ಅಭಿಮಾನಿಗಳ ಸಿಟ್ಟಿಗೆ ಕ್ರಿಕೆಟ್‌ ವಿಶ್ಲೇಷಕ ಹರ್ಷ ಬೊಗ್ಲೆ “ನಿಮಗೆ ಕ್ರೀಡೆ ಅರ್ಥವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next