Advertisement

ಬಿಜೆಪಿ-ಆರೆಸ್ಸೆಸ್‌ ಸುಳ್ಳು ಸೃಷ್ಟಿಗೆ ಟಕ್ಕರ್‌ ನೀಡಿ: ಉಮಾಶ್ರೀ

03:00 PM Jun 30, 2020 | Suhan S |

ಬನಹಟ್ಟಿ: ಭಾರತಕ್ಕೆ ಆಧುನಿಕ ತಂತ್ರಜ್ಞಾನ ತಂದವರ ಕಾಂಗ್ರೆಸ್ಸಿಗರು. ಆದರೆ ಈ ತಂತ್ರಜ್ಞಾನ ಬಳಸಿಕೊಂಡು ಬಿಜೆಪಿ ಮತ್ತು ಆರೆಸ್ಸೆಸ್‌ ಸುಳ್ಳುಗಳನ್ನು ಸೃಷ್ಟಿಸಿ ಜನರಿಗೆ ಹೇಳುತ್ತಿದೆ. ಅದಕ್ಕೆ ನಾವು ಟಕ್ಕರ್‌ ನೀಡಬೇಕು. ಆದ್ದರಿಂದ ಕಾಂಗ್ರೆಸ್‌ ಯುವಕರು ಸಾಮಾಜಿಕ ಜಾಲತಾಣ ಬಳಸಿಕೊಂಡು ಪಕ್ಷದ ಪ್ರಚಾರದಲ್ಲಿ ತೊಡಗಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.

Advertisement

ಭದ್ರನ್ನವರ ಮನೆ ಆವರಣದಲ್ಲಿ ಸೋಮವಾರ ನೂತನ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿ, ಇತಿಹಾಸ ಸರಿಯಾಗಿ ತಿಳಿದುಕೊಂಡು ಅದನ್ನು ಜನರಿಗೆ ಮುಟ್ಟಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು. ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಪಕ್ಷಕ್ಕಾಗಿ ಶ್ರಮಿಸಬೇಕು ಎಂದರು. ಕೇಂದ್ರ ಸರ್ಕಾರ ಕೋವಿಡ್ ಗೆ ಸಂಬಂಧಿಸಿದಂತೆ ಜನರ ಮೇಲೆ ಜವಾಬ್ದಾರಿ ನೀಡಿದೆ. ಕೋವಿಡ್ ಗೆ ಔಷಧಿ ದೊರೆಯುವವರೆಗೆ ಎಲ್ಲರೂ ಜಾಗ್ರತೆಯಿಂದ ಇರಬೇಕು. ಜು. 2 ರಂದು ನಡೆಯಲಿರುವ ಡಿ.ಕೆ. ಶಿವಕುಮಾರ ಅಧಿಕಾರ ಸ್ವೀಕಾರ ಸಮಾರಂಭ ಯಶಸ್ವಿಯಾಗಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ದೇಶದ ಜನತೆಗೆ ಒಳಿತು ಮಾಡಲು ಕಾಂಗ್ರೆಸ್‌ ಕಾರ್ಯಕರ್ತರು ಒಟ್ಟಾಗಿ ಹೋರಾಡಿ ಜನರ ಕಷ್ಟಕ್ಕೆ ಸ್ಪಂದಿಸೋಣ. ಕೋವಿಡ್‌-19 ಭಯಾನಕ ರೋಗವಾಗಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಎಲ್ಲರೂ ಧರಿಸಬೇಕು. ಬರುವ ದಿನಗಳಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜು.7ರಂದು ಬನಹಟ್ಟಿಯಲ್ಲಿ ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಶ್ರೀಪಾದ ಗುಂಡಾ, ಪ್ರಕಾಶ ಮಮದಾಪುರ ಮತ್ತು ಡಾ| ಎ.ಆರ್‌. ಬೆಳಗಲಿ ಮಾತನಾಡಿದರು. ಈ ವೇಳೆ ಶಂಕರ ಜಾಲಿಗಿಡದ, ರಾಜೇಂದ್ರ ಭದ್ರನವರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಶಂಕರಗೌಡ ಪಾಟೀಲ, ಸತ್ಯಪ್ಪ ಮಗದುಮ್‌, ನಿಜಗುಣಿ ಶಿರಹಟ್ಟಿ, ಬಸವರಾಜ ಗುಡೋಡಗಿ, ಈಶ್ವರ ಚಮಕೇರಿ, ರಾಹುಲ ಕಲಾಲ, ಎಸ್‌.ಬಿ. ಭಜಂತ್ರಿ, ಬಸವರಾಜ ಕೊಕಟನೂರ, ನೀಲಕಂಠ ಮುತ್ತೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next