Advertisement

ಮತ್ತೆ ಕಿರುತೆರೆಯತ್ತ ಉಮಾಶ್ರೀ

09:57 AM Dec 10, 2019 | Lakshmi GovindaRaj |

ಕಲಾವಿದರು ಕಿರುತೆರೆ, ಹಿರಿತೆರೆಯಲ್ಲಿ ತಮಗೆ ಇಷ್ಟವಾದ ಪಾತ್ರಗಳನ್ನು ಮಾಡುತ್ತಾರೆ. ಅದೇ ಕಾರಣದಿಂದ ಸಿನಿಮಾ ಮಂದಿ ಕಿರುತೆರೆಯಲ್ಲಿ, ಕಿರುತೆರೆ ಮಂದಿ ಸಿನಿಮಾದಲ್ಲಿ ಕಾಣಸಿಗುತ್ತಾರೆ ಕೂಡಾ. ಹಿರಿಯ ನಟಿ ಉಮಾಶ್ರೀ ಈಗ ಮತ್ತೆ ಕಿರುತೆರೆಯತ್ತ ಬಂದಿದ್ದಾರೆ. ರಾಜಕಾರಣದಲ್ಲಿ ಬಿಝಿಯಾಗಿದ್ದ ಉಮಾಶ್ರೀ ನಟನೆಯಿಂದ ದೂರವಿದ್ದರು. ಈಗ ಮತ್ತೆ ನಟನೆಗೆ ವಾಪಾಸ್‌ ಆಗಿದ್ದಾರೆ.

Advertisement

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದರಲ್ಲಿ ತಾಯಿ ಪಾತ್ರ ಮಾಡಲು ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಸಿನಿಮಾ, ಕಿರುತೆರೆಯಿಂದ ಉಮಾಶ್ರೀಯವರಿಗೆ ಸಾಕಷ್ಟು ಅವಕಾಶಗಳು ಬಂದರೂ ಅವ್ಯಾವುದನ್ನು ಒಪ್ಪಿಕೊಂಡಿರಲಿಲ್ಲ. ಈಗ ಧಾರಾವಾಹಿಯೊಂದನ್ನು ಒಪ್ಪಿಕೊಂಡು ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ಪುಟ್ಮಲ್ಲಿ ಎಂಬ ಪಾತ್ರ ಮಾಡುತ್ತಿದ್ದಾರೆ. ರವಿಚಂದ್ರನ್‌ ಅವರ “ಪುಟ್ನಂಜ’ ಚಿತ್ರದಲ್ಲಿ ಉಮಾಶ್ರೀ ಪುಟ್ಮಲ್ಲಿ ಎಂಬ ಪಾತ್ರ ಮಾಡಿದ್ದರು. ಅಂದಹಾಗೆ, ಉಮಾಶ್ರೀಯವರಿಗೆ ಕಿರುತೆರೆ ಹೊಸದಲ್ಲ. ಈಗಾಗಲೇ “ಮುಸ್ಸಂಜೆ’, “ಅಮ್ಮನಿಗಾಗಿ’ ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ಉಮಾಶ್ರೀ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next