Advertisement

Umanath kotian ನಾಮಪತ್ರ ಸಲ್ಲಿಕೆ: ಕೇಸರಿ ಕಲರವದಲ್ಲಿ ಮಿಂದೆದ್ದ ಮೂಡುಬಿದಿರೆ

01:00 AM Apr 19, 2023 | Team Udayavani |

ಮೂಡುಬಿದಿರೆ: ಎಲ್ಲೆಲ್ಲೂ ರಾರಾಜಿಸಿದ ಬಿಜೆಪಿ ಬಾವುಟ, ಜತೆಗೆ ಭಗವಾಧ್ವಜ, ಮೂಡುಬಿದಿರೆ ಪೇಟೆಯ ಮುಖ್ಯರಸ್ತೆ ಸಂಪೂರ್ಣ ಕೇಸರಿಮಯ. ಕೇಸರಿ ಶಾಲು, ಪೇಟ ಧರಿಸಿ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದು ಅಭಿಮಾನಿಗಳು, ಕಾರ್ಯಕರ್ತರು…

Advertisement

ಇದು ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮಾನಾಥ ಕೋಟ್ಯಾನ್‌ ಮಂಗಳವಾರ ನಾಮಪತ್ರ ಸಲ್ಲಿಸುವ ವೇಳೆ ಕಂಡು ಬಂದ ಚಿತ್ರಣ.

ಮೂಡುಬಿದಿರೆಯ ಮೂಡು ವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾದ ಮೆರವಣಿಗೆ ತಾಲೂಕು ಆಡಳಿತ ಸೌಧದ ವರೆಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಜಯಘೋಷ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು. ಚೆಂಡೆ ಬಳಗ, ನಾಸಿಕ್‌ ಬ್ಯಾಂಡ್‌, ಹುಲಿವೇಷ ತಂಡಗಳು ಮೆರವಣಿಗೆಗೆ ಮೆರಗು ನೀಡಿತು. ತೆರೆದ ವಾಹನದಲ್ಲಿ ಉಮಾನಾಥ ಕೋಟ್ಯಾನ್‌, ನಳಿನ್‌ ಕುಮಾರ್‌ ಕಟೀಲು ಸಹಿತ ಪ್ರಮುಖರು ಸಾಗಿದರು.

ಮೋದಿಗೆ ಜೈಕಾರ
ಶಿಸ್ತುಬದ್ಧವಾಗಿ ಸಾಗಿದ ಮೆರವಣಿಗೆ ಯುದ್ದಕ್ಕೂ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು. ಭಾರತ ಮಾತೆ, ಭಾರತೀಯ ಜನತಾ ಪಕ್ಷಕ್ಕೂ ಜತೆಗೆ ನಳಿನ್‌ ಕುಮಾರ್‌ ಕಟೀಲು, ಕೋಟ್ಯಾನ್‌ ಅವರಿಗೂ ಜೈ ಹೇಳಿದರು.

ವಿವಿಧ ದೇಗುಲಗಳಿಗೆ ಭೇಟಿ
ಕೋಟ್ಯಾನ್‌ ಅವರು ಮುಂಜಾನೆ ಯಿಂದಲೇ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು. ಪೊಳಲಿ, ಕಟೀಲು, ಬಪ್ಪನಾಡು, ಪುತ್ತಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮೂಡು ವೇಣುಪುರ ಶ್ರೀ ವೆಂಕಟರಮಣ, ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

Advertisement

ಪಕ್ಷದ ಪ್ರಮುಖರು ಭಾಗಿ
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು, ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಪಕ್ಷದ ಪ್ರಮುಖರಾದ ಈಶ್ವರ ಕಟೀಲ್‌, ಸುಧೀರ್‌ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ, ಕ್ಷೇತ್ರದ ಅಧ್ಯಕ್ಷ ಸುನೀಲ್‌ ಆಳ್ವ, ಪ್ರಮುಖರಾದ ಮೇಘನಾಥ ಶೆಟ್ಟಿ, ಕೃಷ್ಣರಾಜ ಹೆಗ್ಡೆ, ಸುಚರಿತ ಶೆಟ್ಟಿ, ಜಗದೀಶ್‌ ಅಧಿಕಾರಿ, ಭುವನಾಭಿರಾಮ ಉಡುಪ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next