ದೇವಾಲಯ.
Advertisement
ಈ ದೇವಾಲಯಕ್ಕೆ ಪುರಾಣ ಪ್ರಸಿದ್ಧಿ ಇದೆ. ದೇವಾಲಯದ ಸುತ್ತಮುತ್ತಲೂ ಮಂದೆ ಮಕ್ಕಿಗದ್ದೆ(ಖುಷ್ಕಿ ಭತ್ತದ ಜಮೀನು) ಪ್ರದೇಶವಿತ್ತು. ಇದಕ್ಕಾಗಿ ಈ ದೇವಾಲಯ ಮಕ್ಕಿ ದೇವಸ್ಥಾನ ಎಂದು ಪ್ರಸಿದ್ಧವಾಗಿದೆ.
Related Articles
Advertisement
ಹೊಸಾಕುಳಿಯಲ್ಲಿ ನೆಲೆಯಾದ ಉಮಾಮಹೇಶ್ವರ ದೇವರು ಪಶ್ಚಿಮಾಭಿಮುಖವಾಗಿದೆ. ದೇವಾಲಯದ ಹಿಂಭಾಗದಲ್ಲಿ ಎತ್ತರದ ಗುಡ್ಡ, ಎಡಬಲಗಳಲ್ಲಿ ಭತ್ತದ ಗದ್ದೆ ಮತ್ತು ಎದುರು ಭಾಗದಲ್ಲಿ ವಿಶಾಲವಾದ ಅಡಕೆ ತೋಟದ ಸಾಲು ಇದೆ. ಈಗಲೂ ಸಹ ದೇವಾಲಯದ ಬಲಭಾಗದಲ್ಲಿನ ಮಕ್ಕಿಗದ್ದೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಭತ್ತ ಬೆಳೆಯಲಾಗುತ್ತಿದೆ.
ಸುಮಾರು 500 ವರ್ಷಗಳ ಹಿಂದೆ ಈ ದೇವಾಲಯದಿಂದ ಸುಮಾರು 29 ಕಿ.ಮೀ.ದೂರದ ಅಠಾರ ಎಂಬಲ್ಲಿ ದೊಡ್ಡ ಪ್ರಮಾಣದ ಈಶ್ವರ ದೇವಾಲಯವಿತ್ತಂತೆ. ಮರಾಠರ ಆಳ್ವಿಕೆಯ ಈ ಪ್ರದೇಶದಮೇಲೆ ಬಹುಮನಿ ಸುಲ್ತಾನರ ದಾಳಿ ನಡೆಯಿತು. ಅಠಾರದಲ್ಲಿ ಆಗ ಸಾಮಂತ ರಾಜರೊಬ್ಬರ ಕೋಟೆ ಮತ್ತು ಅರಮನೆಗಳಿದ್ದು ಆಡಳಿತದ ಕೇಂದ್ರವಾಗಿತ್ತು.
ಸುಲ್ತಾನರ ದಾಳಿಯಿಂದ ದೇವಾಲಯ ಮತ್ತು ಗುಡಿಗಳು ಧ್ವಂಸವಾಗಿ ಅಲ್ಲಿನ ಪರಂಪರಾಗತ ಹಲವು ಕುಟುಂಬಗಳು ಆ ಪ್ರದೇಶ ತ್ಯಜಿಸಿ ಹೊಸಾಕುಳಿ, ಸಾಲಕೋಡು, ಮುಗ್ವಾ,ಬಾಳೆಗದ್ದೆ, ಗುಡ್ಡೆಬಾಳು ಇತ್ಯಾದಿ ಪ್ರದೇಶಗಳಿಗೆ ವಲಸೆ ಬಂದರಂತೆ. ಇಲ್ಲಿಗೆ ಬಂದು ನೆಲೆಯೂರಿದ
ಆ ಕುಟುಂಬಗಳ ಜನರು ಒಂದೆರಡು ವರ್ಷಗಳಲ್ಲಿಯೇ ತಾವು ತ್ಯಜಿಸಿ ಬಂದ ಅಠಾರಕ್ಕೆ ತೆರಳಿ ಅಲ್ಲಿನ ಈಶ್ವರ ದೇವಾಲಯದ ಶಿಲಾಕಲ್ಲುಗಳು, ಮರದ ನಾಟಾ ಮತ್ತು ಕೆತ್ತನೆಯ ಬಾಗಿಲುಗಳನ್ನು ಎತ್ತಿನ ಗಾಡಿಗಳಲ್ಲಿ ಹೇರಿಕೊಂಡು ಉಮಾಮಹೇಶ್ವರ ಮತ್ತು ಲಕ್ಷಿ$¾àನಾರಾಯಣ ಮತ್ತು ಸಾಲಕೋಡಿನ ಬೊಂಡಕಾರೇಶ್ವರ ದೇವಾಲಯಗಳಿಗೆ ತಂದು ಜೋಡಿಸಿದರಂತೆ.
ದೇವಾಲಯದಲ್ಲಿ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿ ವರ್ಷ ರಥಸಪ್ತಮಿಯಂದು ವೈಭವದ ಮಹಾರಥೋತ್ಸವ ಜರುಗುತ್ತದೆ. ಶುಕ್ಲ ಪಕ್ಷದ ಏಕಾದಶಿಯಂದು ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ.
ಈ ದೇವಾಲಯಕ್ಕೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿರುವ ಪರಂಪರಾಗತ ಭಕ್ತರಿದ್ದಾರೆ. ಸಾವಿರಾರು ಕುಟುಂಬಗಳು ತಮ್ಮ ಕುಲದೇವರೆಂದು ಈ ದೇವರನ್ನು ಆರಾಧಿಸುತ್ತಾರೆ. ವಿದ್ಯೆ,ಸಂತಾನಪ್ರಾಪ್ತಿ,ವಾಹಾದಿ ಶುಭ ಕಾರ್ಯ ಪ್ರಾರಂಭಕ್ಕೆ ಮುನ್ನ ಈ ದೇವರಿಗೆ ಪೂಜೆ ಸಲ್ಲಿಸುವುದು ,ಕಾರಣಿಕ ಕೇಳುವುದು(ಪ್ರಸಾದ ಕೇಳುವುದು) ವಾಡಿಕೆಯಲ್ಲಿದೆ. ಫೋಟೊ ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ