Advertisement

ಪೊಲೀಸರಿಗೆ ವೈರಸ್‌ ಸೋಂಕು ತಡೆಯಲು ಠಾಣೆಗಳಿಗೆ “ಅಲ್ಟ್ರಾ ವೈಲೆಟ್‌ ಸ್ಕ್ಯಾನರ್‌’

11:19 AM Jul 28, 2020 | mahesh |

ಮಹಾನಗರ: ಪೊಲೀಸರಿಗೆ ಕೋವಿಡ್ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರವು ಪೊಲೀಸ್‌ ಠಾಣೆಗಳಿಗೆ ವೈರಸ್‌ಗಳನ್ನು ನಾಶಪಡಿಸುವ “ಅಲ್ಟ್ರಾ ವೈಲೆಟ್‌ ಸ್ಕ್ಯಾ ನರ್‌ಯಂತ್ರ’ಗಳನ್ನು (ಯು.ವಿ.ಡಿಸ್‌ಇನ್‌ಫೆಕ್ಶನ್‌ ಬಾಕ್ಸ್‌) ನೀಡಿದೆ.

Advertisement

ಕೋವಿಡ್ ವಾರಿಯರ್‌ಗಳಾದ ಪೊಲೀಸರಿಗೂ ರಾಜ್ಯದಲ್ಲಿ ಅಧಿಕ ಪ್ರಮಾ ಣದಲ್ಲಿ ಸೋಂಕು ಪಸರಿಸುತ್ತಿರುವ ಹಿನ್ನೆಲೆ ಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಇದೀಗ ಮೊದಲ ಹಂತದಲ್ಲಿ ಕೋವಿಡ್ ಸೋಂಕು ಹೆಚ್ಚು ಇರುವ ಜಿಲ್ಲೆಗಳ ಪೊಲೀಸ್‌ ಠಾಣೆಗಳಿಗೆ ಮತ್ತು ಕಚೇರಿಗಳಿಗೆ ಯು.ವಿ. ಡಿಸಿನ್‌ಫೆಕ್ಶನ್‌ ಯಂತ್ರಗಳನ್ನು ಕೊಡಲಾಗಿದೆ.

ಠಾಣೆ ಅಥವಾ ಕಚೇರಿಗೆ ಬರುವ ಕಾಗದ ಪತ್ರ, ಪೊಲೀಸರ ಮೊಬೈಲ್‌ ಫೋನ್‌, ಕೀಬಂಚ್‌ ಮತ್ತಿತರ ವಸ್ತುಗಳನ್ನು 4ರಿಂದ 10 ನಿಮಿಷಗಳ ಕಾಲ ಈ ಯಂತ್ರದಲ್ಲಿ ಇರಿಸಿದರೆ ಅದರಲ್ಲಿರುವ ಎಲ್ಲ ರೀತಿಯ ವೈರಾಣುಗಳು ನಾಶವಾಗುತ್ತವೆ. ಆರೋಪಿಗಳಿಂದ ವಶಪಡಿಸಿಕೊಳ್ಳುವ ಮಾರಕಾಸ್ತ್ರಗಳು, ಮೊಬೈಲ್‌, ಕೀಬಂಚ್‌, ನಗದು ಮೊತ್ತ ಮತ್ತಿತರ ಸೊತ್ತು, ದೂರು ನೀಡಲು ಬರುವವರ ದೂರು, ಅರ್ಜಿ ಇತ್ಯಾದಿಗಳನ್ನು ಈ ಯಂತ್ರದಲ್ಲಿ ಹಾಕುವುದರಿಂದ ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು. ಮಂಗಳೂರು ಪೊಲೀಸ್‌ ಕಮಿಷನ ರೇಟ್‌, ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಬಹುತೇಕ ಎಲ್ಲ ಠಾಣೆಗಳಿಗೆ ಮತ್ತು ಪ್ರಮುಖ ಕಚೇರಿಗಳಿಗೆ ಈ ಯಂತ್ರವನ್ನು ಒದಗಿಸಲಾಗಿದೆ.

ಕುಡಿಯಲು ಬಿಸಿ ನೀರು ವ್ಯವಸ್ಥೆ
ಇದೇ ವೇಳೆ ಬಿಸಿ ನೀರು ಕುಡಿಯು ವುದರಿಂದ ಕೊರೊನಾ ಸೋಂಕು ತಗಲುವುದನ್ನು ಕಡಿಮೆ ಮಾಡಬಹುದು ಎಂಬ ಸಲಹೆಯ ಹಿನ್ನೆಲೆಯಲ್ಲಿ ಪೊಲೀಸರಿಗೆ ಬಿಸಿ ನೀರು ಲಭ್ಯವಾಗುವಂತೆ ಮಾಡಲು ಎಲ್ಲ ಠಾಣೆಗಳಲ್ಲಿ ಮತ್ತು ಕಚೇರಿಗಳಲ್ಲಿ ನೀರನ್ನು ಬಿಸಿ ಮಾಡುವ ವಾಟರ್‌ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ.

ಬಿಸಿ ನೀರು ಸೇವಿಸಲು ಸೂಚನೆ
ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯ ಅನೇಕ ಮಂದಿ ಪೊಲೀಸರಿಗೆ ಕೋವಿಡ್ ಸೋಂಕು ಈಗಾಗಲೇ ತಟ್ಟಿದೆ. ಠಾಣೆಯ ಸಿಬಂದಿಗೆ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಅಲ್ಟ್ರಾ ವೈರಲ್‌ ಡಿಸ್‌ಇನ್‌ಫೆಕ್ಶನ್‌ ಬಾಕ್ಸ್‌ ಉಪಕಾರಿಯಾಗಲಿದೆ. ಎಲ್ಲ ಠಾಣೆಗಳಿಗೆ ಮತ್ತು ಪ್ರಮುಖ ಕಚೇರಿಗಳಿಗೆ ಇದನ್ನು ಒದಗಿಸಲಾಗಿದೆ. ಇದರ ಜತೆಗೆ ಠಾಣೆಯ ಸಿಬಂದಿ ಬಿಸಿ ನೀರನ್ನೇ ಕುಡಿಯ ಬೇಕೆಂಬ ಉದ್ದೇಶದಿಂದ ವಾಟರ್‌ ಫಿಲ್ಟರ್‌ಗಳನ್ನು ಕೂಡ ಅಳವಡಿಸಿ ಬಿಸಿ ನೀರನ್ನೇ ಸೇವಿಸುವಂತೆ ಸೂಚಿಸಲಾಗಿದೆ.
– ವಿಕಾಸ್‌ ಕುಮಾರ್‌ , ಪೊಲೀಸ್‌ ಆಯುಕ್ತರು, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next