Advertisement
ಮಂಗಳೂರು ವಿಭಾಗ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್ ನೇತೃತ್ವದ ತಂಡವು 2,450 ಲೀ. ಸ್ಪಿರಿಟ್, 242 ಲೀ. ನಕಲಿ ಬ್ರಾಂಡಿ, 2..34 ಲೀ. ಪ್ರಸ್ಟೀಜ್ ವಿಸ್ಕಿ ಸೇರಿದಂತೆ ಸಾರಾಯಿ ಪ್ಯಾಂಕಿಂಗ್ ಯಂತ್ರ, ಸಾಗಾಟಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಕ್ಕ ಪಡೆದುಕೊಂಡಿದ್ದು, ಮೂವರನ್ನು ಬಂಧಿಸಿದೆ. ಇಬ್ಬರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Related Articles
ಸಾಂತ್ಯದಲ್ಲಿ ನಿತ್ಯಾನಂದ ಮತ್ತು ತಲಪಾಡಿಯ ಸತೀಶ್ ಅಕ್ರಮ ಅಡ್ಡೆಯ ಪ್ರಮುಖ ರೂವಾರಿ ಕುಂಜತ್ತೂರು ನಿವಾಸಿ ಅನ್ನು ಯಾನೆ ಅರವಿಂದ್ ಎಂಬಾತನಾಗಿದ್ದು, ಆತನ ವಿರುದ್ಧ ಕರ್ನಾಟಕ ಮತ್ತು ಕೇರಳದಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. 9 ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಕುಂಜತ್ತೂರು ಪ್ರದೇಶ ಅಕ್ರಮ ದಾಸ್ತನಿಗೆ ಅವಕಾಶವಿರದ ಕಾರಣ ತಲಪಾಡಿ ಮತ್ತು ಸಾಂತ್ಯದಲ್ಲಿ ಈ ಚಟುವಟಿಕೆ ಅರವಿಂದ್ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಅಲ್ಲಿಂದ ನಕಲಿ ಸಾರಾಯಿಯನ್ನು ಕಾಸರಗೋಡು ಜಿಲ್ಲೆಯ ವಿವಿಧೆಡೆಗೆ ಏಜೆಂಟ್‌ಗಳ ಮೂಲಕ ಸಾಗಾಟ ಮಾಡುತ್ತಿದ್ದರು.
Advertisement
ಬುಧವಾರ ಮಂಗಳೂರು ವಿಭಾಗದ ಅಬಕಾರಿ ಅಧಿಕಾರಿಗಳ ತಂಡ ಕಾಸರಗೋಡು ಜಿಲ್ಲೆಯ ಅಬಕಾರಿ ಇಲಾಖೆಯ ತಂಡದೊಂದಿಗೆ ಅರವಿಂದನ ಮನೆಗೆ ದಾಳಿ ನಡೆಸಿದ್ದು, ಆರೋಪಿ ಮನೆಯಿಂದ ಹೊರಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಅರವಿಂದ ವಿದೇಶಕ್ಕೆ ತೆರಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಮಾತನಾಡಿ, ಅಧಿಕಾರ ಸ್ವೀಕರಿಸಿದ 2 ತಿಂಗಳ ಅವಧಿಯಲ್ಲಿ ಇದು ಬೃಹತ ದಾಳಿಯಾಗಿದ್ದು, ಅಕ್ರಮ ಸ್ಪಿರಿಟ್ ಸೇರಿದಂತೆ ನಕಲಿ ಸಾರಾಯಿ ಮಾರಾಟದ ಮೇಲೆ ನಿಗಾ ವಹಿಸಿದ್ದು, ಈ ಪ್ರಕರಣದ ಹಿಂದೆ ಇರುವ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ಅಬಕಾರಿ ಮಂಗಳೂರು ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ ಟಿ., ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಮಾರ್ಗದರ್ಶನದಲ್ಲಿ ಉಪಅಧೀಕ್ಷಕ ಸೈಯ್ಯದ್ ತಫಿjàಲುಲ್ಲಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ದಕ್ಷಿಣ ವಲಯ-2 ಅಬಕಾರಿ ಇಲಾಖೆ ನಿರೀಕ್ಷಕಿ ಕಮಲಾ ಎಚ್.ಎನ್. ಉಪ ನಿರೀಕ್ಷಕರಾದ ಅಶೀಷ್, ಉಮೇಶ್, ಉಪ ವಿಭಾಗ 2 ಮಂಗಳೂರು ದಕ್ಷಿಣ ವಲಯ 1 ಮತ್ತು ಪೂರ್ವ ವಲಯ 1ರ ಅಬಕಾರಿ ಇಲಾಖೆಯ ಸಿಬಂದಿ ಭಾಗವಹಿಸಿದ್ದರು.