Advertisement
ಕೇಂದ್ರ ವಸತಿ ಮತ್ತು ನಗರ ವ್ಯವ ಹಾರಗಳ ಮಂತ್ರಾಲಯ ಭಾರತ ಸರಕಾರ ನವದೆಹಲಿ, ಆಯುಕ್ತಾಲಯ ಉದ್ಯಮ ಶೀಲತೆ ಮತ್ತು ಜೀವನೋಪಾಯ ಬೆಂಗ ಳೂರು, ಜಿಲ್ಲಾಡಳಿತ ಮತ್ತು ಉಳ್ಳಾಲ ನಗರಸಭೆ ಇವುಗಳ ವತಿಯಿಂದ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಉಳ್ಳಾಲ ನಗರಸಭಾ ಮಹಾತ್ಮಾಗಾಂಧಿ ರಂಗಮಂದಿರದಲ್ಲಿ ಶನಿವಾರ ನಡೆದ ಶಹರೀ ಸಮೃದ್ಧಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಜನೆಯ ಸಬ್ಸಿಡಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುವ ನಿಟ್ಟಿನಲ್ಲಿ ಜನ ಧನ್ ಯೋಜನೆ ಜಾರಿಗೆ ತಂದಿದ್ದು, ಪ್ರತಿಯೊಬ್ಬರ ಕೈಯಲ್ಲೂ ಬ್ಯಾಂಕ್ ಪುಸ್ತಕ, ಎಟಿಎಂ ಕಾರ್ಡ್ ಇರಲು ಈ ಯೋಜನೆ ಪೂರಕವಾಗಿದೆ ಎಂದರು. ಆಯುಷ್ಮಾನ್ ಯೋಜನೆಯ ಮೂಲಕ ಅತ್ಯಂತ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಕೇಂದ್ರ ಸರಕಾರ ಕೇವಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಆ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲೂ ಪಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಯೋಜನೆ, ದುಬಾರಿ ಔಷಧ ಗಳನ್ನು ಕಡಿಮೆ ಬೆಲೆಯಲ್ಲಿ ನೀಡುವ ಜನೌಷಧಿ ಕೇಂದ್ರ, ದುಬಾರಿ ವೈದ್ಯಕೀಯ ಪರಿಕರಗಳನ್ನು ಕಡಿಮೆದರದಲ್ಲಿ ನೀಡುವ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಡಿದ್ದು, ಯೋಜನೆ ಯನ್ನು ಜನರ ಕಾಲಬುಡಕ್ಕೆ ತರುವ ಕಾರ್ಯವನ್ನು ಮಾಡಿದೆ ಎಂದರು.
Related Articles
Advertisement
ಜಿಲ್ಲಾ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ, ಹಂಪನಕಟ್ಟೆ ಸಿಂಡಿಕೇಟ್ ಬ್ಯಾಂಕ್ ಹಿರಿಯ ಸಮಾಲೋಚಕ ಸತೀಶ್ ಅತ್ತಾವರ ಅವರು ಜನ್ ಧನ್ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆಯ ಕುರಿತು ಮಾಹಿತಿ ನೀಡಿದರು. ರಾಷ್ಟ್ರೀಯ ಪೌಷ್ಟಿಕ ಅಭಿಯಾನದ ಕುರಿತು ಅಂಗನವಾಡಿ ಮೇಲ್ವಿಚಾರಕಿ ಕಲ್ಪನಾ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಕುರಿತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣ, ಪ್ರಧಾನ ಮಂತ್ರಿ ಅವಾಝ್ ಯೋಜನೆ ಕುರಿತು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಮಾಜ ಅಭಿವೃದ್ಧಿ ಪರಿಣತ ತನೂರ್ಯ ಮಾಹಿತಿ ನೀಡಿದರು.
ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ ಸ್ವಾಗತಿಸಿದರು. ಎನ್. ವಂದಿಸಿದರು. ಐರಿನ್ ರೆಬೆಲ್ಲೋ ನಿರ್ವಹಿಸಿದರು.
ಆದೇಶ ಪತ್ರ, ಅಡುಗೆ ಅನಿಲ ವಿತರಣೆಸ್ವಯಂ ಉದ್ಯೋಗ ಯೋಜನೆಯಡಿ ಫಲಾನುಭವಿಗಳಿಗೆ ಆದೇಶ ಪತ್ರ, ಪಿಎಂಎವೈ ಯೋಜನೆಯಡಿ ಕಾಮಗಾರಿ ಆದೇಶ ಪತ್ರ, ಸ್ವಸಹಾಯ ಗುಂಪುಗಳಿಗೆ ಆವರ್ತಕ ನಿಧಿ ಆದೇಶ ಪತ್ರ, ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಅನೌಪಚಾರಿಕ ನೈರ್ಮಲ್ಯ ಕಾರ್ಯಕರ್ತರ ಸ್ವಸಹಾಯ ಸಂಘ ರಚನೆ ಬಗ್ಗೆ ಆದೇಶ ಪತ್ರ, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ವಿತರಣೆಯನ್ನು ಸಂಸದ ನಳಿನ್ ಕುಮಾರ್ ನೆರವೇರಿಸಿದರು.