Advertisement

Ullala: ಹಲ್ಲೆ ಆರೋಪಿ ಮೇಲೆ ಎಂಟು ಮಂದಿಯಿಂದ ದಾಳಿ; ಹತ್ಯೆಗೆ ಯತ್ನ

02:29 AM Nov 12, 2024 | Team Udayavani |

ಉಳ್ಳಾಲ: ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಇನ್‌ಸ್ಪೆಕ್ಟರ್‌ ಕಚೇರಿಯಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭ ಠಾಣಾಧಿಕಾರಿಯ ಎದುರೇ ಹಿಂದೂ ಮುಖಂಡನಿಗೆ ಹಲ್ಲೆ ನಡೆಸಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿ ಆಸೀಫ್ ಕಾರಿಗೆ ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಬಂದ ಎಂಟು ಮಂದಿ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಕೆ.ಸಿ.ರೋಡ್‌ ಬಳಿಯ ಜಿಯೋ ಪೆಟ್ರೋಲ್‌ ಬಂಕ್‌ ಬಳಿ ನಡೆದಿದ್ದು, ಘಟನೆ ನಡೆದು ಮೂರು ದಿನಗಳ ಬಳಿಕ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಎಲ್ಲರ ಕೈಯಲ್ಲೂ ಮೊಟ್ಟೆ ಹಾಗೂ ತಲವಾರುಗಳಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಒಂದು ಬೈಕಿನಲ್ಲಿದ್ದವರು ಕಾರಿಗೆ ತಲವಾರು ಬೀಸಿದ್ದಾರೆ. ಗಾಜಿಗೆ ಹಾನಿಯಾಗಿದೆ. ಬೈಕುಗಳಲ್ಲಿದ್ದವರು ಹಿಂಬಾಲಿಸಲು ಆರಂಭಿಸಿದಾಗ ರಕ್ಷಣೆಗಾಗಿ ಕಾರಿನಲ್ಲೇ ಮಂಜೇಶ್ವರ ಪೊಲೀಸ್‌ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದೆ. ಪೊಲೀಸರು ಘಟನೆ ನಡೆದ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಲು ತಿಳಿಸಿದ್ದರಿಂದ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೂವರ ಬಂಧನ
ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಮೂವರನ್ನು ಬಂಧಿ ಸಿದ್ದಾರೆ. ಸುರತ್ಕಲ್‌ ಇಡ್ಯಾ ನಿವಾಸಿ ಅಣ್ಣಪ್ಪ ಸ್ವಾಮಿ (24), ನಾರ್ಲ ತಲಪಾಡಿಯ ಸಚಿನ್‌ (24) ಕಂಬ್ಳಪದವು ಪಾದಲ್‌ ಕೋಡಿಯ ಕುಶಿತ್‌ (18) ಬಂಧಿತರು.

Advertisement

Udayavani is now on Telegram. Click here to join our channel and stay updated with the latest news.

Next