Advertisement
ಕಟ್ಟಿಗೆ ತುಂಬಿಕೊಂಡು ಕೇರಳ ರಾಜ್ಯದ ಕಡೆ ಹೋಗುತ್ತಿದ್ದ ಲಾರಿಯನ್ನು ಪೊಲೀಸರು ತಪಾಸಣೆಗೆಂದು ತೊಕ್ಕೊಟ್ಟು ಜಂಕ್ಷನ್ ಬಳಿ ತಡೆದಿದ್ದು, ಈ ಸಂದರ್ಭ ಚಾಲಕ ಲಾರಿಯನ್ನು ರಸ್ತೆ ಬದಿಯ ಸ್ಲಾಬ್ ಮೇಲೆ ನಿಲ್ಲಿಸಿದ್ದಾರೆ.ಭಾರ ಹೆಚ್ಚಾಗಿದ್ದರಿಂದ ಸ್ಲಾಬ್ ಮುರಿದು, ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಕ್ಲೀನರ್ ಶಿವಮೊಗ್ಗ ಮೂಲದ ವಸಂತ್ ಕುಮಾರ್ ಲಾರಿ ಅಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದರೆ ಮೃತಪಟ್ಟಿದ್ದಾರೆ.
ಪ್ರತಿಭಟನೆ: ರಾಷ್ಟೀಯ ಹೆದ್ದಾರಿ ಅವ್ಯವಸ್ಥೆ ಮತ್ತು ಪೊಲೀಸರು ಅನಾವಶ್ಯಕ ಕೇಸು ಹಾಕುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಅರ್ಧ ಗಂಟೆ ಕಾಲ ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ನಡೆಸಿದರು. ಟ್ರಾಫಿಕ್ ಪೊಲೀಸರು ಸಂಧಾನ ನಡೆಸಿದ ನಂತರ ಪ್ರತಿಭಟನೆ ವಾಪಾಸ್ ಪಡೆಯಲಾಯಿತು. ಸ್ಥಳಕ್ಕೆ ಮಂಗಳೂರು ಕಮಿಷನರೇಟ್ ವಲಯದ ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಗೋಪಿ ಕೃಷ್ಣ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ವರದಿ ಪ್ರಕಟಿಸಿದ್ದ ಉದಯವಾಣಿ: ತೊಕ್ಕೊಟ್ಟು ಜಂಕ್ಷನ್ ಬಳಿಯ ಸ್ಲಾಬ್ ಗಳ ಅವ್ಯವಸ್ಥೆಯ ಬಗ್ಗೆ ಉದಯವಾಣಿ ಈ ಹಿಂದೆ ಹಲವು ಬಾರಿ ವರದಿ ಪ್ರಕಟಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.