Advertisement
ಮಂಗಳವಾರ ವಿತ್ತ ಸಚಿವ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರ ಅಳಿಯ ರಿಷಿ ಸುನಕ್, ಪಾಕಿಸ್ತಾನ ಮೂಲದ ಆರೋಗ್ಯ ಸಚಿವ ಸಾಜಿದ್ ನವೀದ್ ಸೇರಿದಂತೆ ಎಂಟು ಮಂದಿ ಸಚಿವರು ರಾಜೀನಾಮೆ ನೀಡಿದ್ದರು. ಇದರಿಂದಾಗಿ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದ ಸರ್ಕಾರದ ಭವಿಷ್ಯ ಹೊಯ್ದಾಡುವಂತಾಗಿದೆ. ಸುನಕ್ ರಾಜೀನಾಮೆಯಿಂದ ತೆರವಾಗಿರುವ ವಿತ್ತ ಸಚಿವ ಸ್ಥಾನಕ್ಕೆ ಇರಾನ್ ಮೂಲದ ನದೀಂ ಜಹಾವಿ ಅವರನ್ನು ನೇಮಿಸಲಾಗಿದೆ.
ಒಂದು ವೇಳೆ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದರೆ ರಿಷಿ ಸುನಕ್‌ರನ್ನು ಆ ಹುದ್ದೆಗೆ ನೇಮಕ ಮಾಡುವ ಸಾಧ್ಯತೆಗಳು ಇವೆ. ಇದೇ ವೇಳೆ, ಸುನಕ್ ತಮ್ಮ ರಾಜೀನಾಮೆ ಪತ್ರದಲ್ಲಿ ಬೋರಿಸ್ ಜಾನ್ಸನ್ ನಾಯಕತ್ವದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ. ನಾಗರಿಕರಿಗೆ ಕಡಿಮೆ ಪ್ರಮಾಣದಲ್ಲಿ ತೆರಿಗೆ ವಿಧಿಸುವುದು ಮತ್ತು ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಸಾಧಿಸಲು ಬಯಸುತ್ತೇನೆ. ಈ ಉದ್ದೇಶ ಈಡೇರಲು ಒಂದು ಸದೃಢ ಮತ್ತು ಸಮರ್ಥ ಸರ್ಕಾರದ ಅಗತ್ಯ ಇದೆ. ಈ ಸತ್ಯವನ್ನು ಕೇಳಲು ದೇಶದ ಜನರು ಕಾತರರಾಗಿದ್ದಾರೆ’ ಎಂದು ರಾಜೀನಾಮೆ ಪತ್ರದಲ್ಲಿ ಸುನಕ್ ಬರೆದಿದ್ದಾರೆ.