Advertisement
ತಂದೆ ತೀರಿಕೊಂಡ ಬಳಿಕ ಐವಾನ್ ಮನೆಯಲ್ಲಿ ನಿಲ್ಲಲಿಲ್ಲ. ತನ್ನ ಅದೃಷ್ಟವನ್ನು ಹುಡುಕಿಕೊಂಡು ಮನೆಯಿಂದ ಹೊರಟ. ಒಂದೆಡೆ ಒಬ್ಬ ಜಮೀನ್ದಾರ ಕೆರೆ ತೋಡಿಸುವ ಕೆಲಸಕ್ಕೆ ಮುಂದಾಗಿದ್ದ. ಆದರೆ ಎಷ್ಟು ಆಳ ತೋಡಿದರೂ ನೀರು ಸಿಕ್ಕಿರಲಿಲ್ಲ. ಕೆಲಸದವರು ನಿರಾಶರಾಗಿ ಕೆಲಸ ನಿಲ್ಲಿಸಿ ಹೊರಟಿದ್ದರು. ಐವಾನ್ ಅಲ್ಲಿಗೆ ಹೋಗಿ, “”ಯಾಕೆ ಹಾಗೆಯೇ ಹೊರಟಿರಿ? ಆ ಮೂಲೆಯಲ್ಲಿ ಗುದ್ದಲಿಯಿಂದ ಅಗೆದು ನೋಡಿ. ಅಲ್ಲಿ ಭಾರೀ ಜಲರಾಶಿಯೇ ಇದೆ” ಎಂದು ಹೇಳಿದ. ಜಮೀನಾªರನಿಗೆ ಕೋಪ ಬಂತು. “”ಭಾರೀ ದೊಡ್ಡ ಜಲ ಪಂಡಿತನ ಹಾಗೆ ಬೊಗಳುತ್ತಿದ್ದೀಯಲ್ಲ, ನೀನೇ ಗುದ್ದಲಿಯಿಂದ ಅಗೆದು ನೀರು ಹರಿಸು ನೋಡೋಣ. ಇಷ್ಟು ದಿನದಿಂದ ನಾವು ಕೆಲಸ ಮಾಡುತ್ತಿದ್ದೇವೆ, ನಮ್ಮ ಕಣ್ಣಿಗೆ ಗೋಚರಿಸದ ನೀರು ನಿನಗೆ ಕಂಡಿತೆ? ನಿನ್ನ ಮಾತಿನಂತೆ ನೀರು ಸಿಗದೆ ಹೋದರೆ ಈ ಕೆರೆಯಲ್ಲಿ ನಿನ್ನನ್ನು ಸಮಾಧಿ ಮಾಡಿಹೋಗುತ್ತೇವೆ” ಎಂದು ಹೇಳಿ ಗುದ್ದಲಿಯನ್ನು ನೀಡಿದ.
Related Articles
Advertisement
ಐವಾನ್ ದೇವದೂತನ ಬಳಿಗೆ ಬಂದು ಒಳ್ಳೆಯ ಹೆಂಡತಿಯನ್ನು ಕೊಡುವಂತೆ ಬೇಡಿದ. ದೇವದೂತನು, “”ನಾಳೆ ಬೆಳಗ್ಗೆ ಸೂರ್ಯ ಉದಯಿಸುವ ಹೊತ್ತಿಗೆ ಸನಿಹದಲ್ಲಿರುವ ಸರೋವರದ ದಂಡೆಯಲ್ಲಿ ಕಾದು ಕುಳಿತಿರು. ಆಕಾಶ ಮಾರ್ಗದಲ್ಲಿ ಮೂರು ಹಂಸಗಳು ಹಾರುತ್ತ ಬಂದು ಕೆಳಗಿಳಿದು ಹಂಸದ ರೆಕ್ಕೆಯನ್ನು ಕಳಚಿ ಸ್ತ್ರೀರೂಪ ಧರಿಸುತ್ತವೆ. ಅವು ಜಲಕ್ರೀಡೆಗಾಗಿ ನೀರಿಗಿಳಿದಾಗ ಒಂದು ಹಕ್ಕಿಯ ರೆಕ್ಕೆಗಳನ್ನು ಅಡಗಿಸಿಡು. ಅವಳು ಬಂದು ಕೇಳಿದಾಗ ಕೊಡಬೇಡ. ನಿನ್ನನ್ನು ಮದುವೆಯಾಗುವಂತೆ ಕೇಳಿಕೋ. ಅವಳು ಒಪ್ಪಿಕೊಳ್ಳುತ್ತಾಳೆ. ಅವಳನ್ನು ವಿವಾಹವಾಗಿ ಸುಖವಾಗಿರು” ಎಂದು ಹೇಳಿದ.
ಅದೇ ಪ್ರಕಾರ ಐವಾನ್ ಮರುದಿನ ಸರೋವರದ ಬಳಿ ಕಾದುಕುಳಿತ. ಮೂರು ಹಂಸಗಳು ಬಂದವು. ರೆಕ್ಕೆ ಕಳಚಿ ಸುಂದರ ಸ್ತ್ರೀಯರಾಗಿ ಸರೋವರಕ್ಕಿಳಿದವು. ಅವನು ಒಬ್ಬಳ ರೆಕ್ಕೆಗಳನ್ನು ಅಪಹರಿಸಿದ. ರೆಕ್ಕೆಗಳು ಸಿಗದೆ ಅವಳು ಮರಳಿ ಹಂಸವಾಗುವಂತಿರಲಿಲ್ಲ. ತನ್ನನ್ನು ವಿವಾಹವಾಗುವಂತೆ ಅವನು ಕೇಳಿಕೊಂಡ. ಅವಳು ಸಮ್ಮತಿಸಿ ಅವನ ಜೊತೆಗೆ ಬಂದಳು. ಸಮೀಪದ ಕಾಡಿನ ಬಳಿ ಐವಾನ್ ಒಂದು ಗುಡಿಸಲು ಕಟ್ಟಿಕೊಂಡು ಸಂಸಾರ ಆರಂಭಿಸಿದ.
ಒಂದು ದಿನ ಪಕ್ಕದ ಊರಿನ ಜಮೀನ್ದಾರ ಕುದುರೆಯ ಮೇಲೇರಿಕೊಂಡು ತನ್ನ ಮಗನ ಜೊತೆಗೆ ಅದೇ ದಾರಿಯಾಗಿ ಬಂದ. ಐವಾನ್‌ನ ಹೆಂಡತಿಯನ್ನು ಕಂಡು ಬೆಕ್ಕಸ ಬೆರಗಾದ. ಇಂತಹ ರೂಪವತಿ ಭೂಮಿಯಲ್ಲಿರಲು ಸಾಧ್ಯವಿಲ್ಲ. ನೋಡಿದರೆ ದೇವಲೋಕದವಳ ಹಾಗೆ ಕಾಣಿಸುತ್ತಿದ್ದಾಳೆ. ತನ್ನ ಮಗನಿಗೆ ಇವಳನ್ನು ಮದುವೆ ಮಾಡಿಸಬೇಕು ಎಂದುಕೊಂಡ. ಐವಾನನ ಬಳಿಗೆ ಬಂದ. “”ಈ ಊರಿನಲ್ಲಿ ಒಂದು ವಿಚಿತ್ರ ಪದ್ಧತಿಯಿದೆ. ಹೊಸಬನಾದ ನಿನಗಿದು ತಿಳಿದಿರಲಿಕ್ಕಿಲ್ಲ. ನಾನು ಎರಡು ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಸರಿಯಾದ ಉತ್ತರ ಕೊಟ್ಟರೆ ನನ್ನ ಸಂಪತ್ತು ಪೂರ್ಣವಾಗಿ ನಿನಗೆ ದೊರಕುತ್ತದೆ. ಉತ್ತರ ಹೇಳಲು ಕಷ್ಟವಾದರೆ ನಿನ್ನ ಹೆಂಡತಿ ನನಗೆ ಸೊಸೆಯಾಗಬೇಕು. ಇದಕ್ಕೆ ಆಗುವುದಿಲ್ಲ ಎಂದು ನುಣುಚಿಕೊಂಡರೆ ಊರಿನ ನಿಯಮದಂತೆ ನಿನ್ನ ರುಂಡ ಮುಂಡದಿಂದ ಬೇರ್ಪಡುತ್ತದೆ” ಎಂದು ಹೇಳಿದ.
ವಿಧಿಯಿಲ್ಲದೆ ಐವಾನ್, “”ಸರಿ, ಪ್ರಶ್ನೆ ಕೇಳಿ” ಎಂದು ಹೇಳಿದ. ಜಮೀನಾªರ, “”ಸಂಜೆ ಸೂರ್ಯನು ಅಸ್ತಮಿಸುವ ವೇಳೆಗೆ ಕೆಂಪುಬಣ್ಣ ತಳೆಯುವುದು ಯಾಕೆ? ನರಕವೆಂದರೆ ಹೇಗಿರುತ್ತದೆ? ಈ ಎರಡು ಪ್ರಶ್ನೆಗಳಿಗೆ ಉತ್ತರ ಬೇಕು” ಎಂದು ಹೇಳಿದ. ಐವಾನ್ ಉತ್ತರ ತಿಳಿಯದೆ ತಲೆ ಕೆರೆಯುತ್ತಿದ್ದಾಗ ಹೆಂಡತಿ ಮನೆಯೊಳಗೆ ಕರೆದಳು. “”ಮೊದಲ ಪ್ರಶ್ನೆಗೆ ಉತ್ತರ ಹೇಳುತ್ತೇನೆ, ಹೋಗಿ ಹೇಳು. ನಾನು ಸೂರ್ಯನ ಮಗಳು. ನಾವು ಮೂವರು ಅವನಿಗೆ ಕಣ್ಣುಗಳಂತಿರುವ ಪುತ್ರಿಯರು. ಸಂಜೆ ನಾವು ವಿಹಾರಕ್ಕಾಗಿ ಹೊರಬಂದಾಗ ಅವನು ಕಣ್ಣು ಕಾಣಿಸದೆ ಕೆಂಪಗಾಗುತ್ತಾನೆ” ಎಂದಳು. ಐವಾನ್ ಜಮೀನಾªರನ ಬಳಿಗೆ ಹೋಗಿ ಇದನ್ನು ತಿಳಿಸಿದ. “”ಸರಿ, ಎರಡನೆಯ ಪ್ರಶ್ನೆಗೆ ಉತ್ತರ ಹೇಳು” ಎಂದು ಕೇಳಿದ ಜಮೀನ್ದಾರ.
ಐವಾನ್ ಮತ್ತೆ ಹೆಂಡತಿಯ ಮುಖ ನೋಡಿದ. ಅವಳು ಜಮೀನ್ದಾರನಿಗೆ, “”ನರಕ ಹೇಗಿದೆಯೆಂಬುದನ್ನು ಅಲ್ಲಿಗೆ ಹೋಗಿ ನೋಡಿ ಹೇಳಬೇಕಲ್ಲವೆ? ನನ್ನ ಗಂಡ ಒಬ್ಬನೇ ಹೋಗಿಬಂದರೆ ನಿಮಗೆ ನಂಬಿಕೆ ಬರಲಾರದು. ಜೊತೆಗೆ ನಿಮ್ಮ ಮಗನನ್ನೂ ಕಳುಹಿಸಿ. ಸ್ವಲ್ಪ ಹೊತ್ತಿನ ಬಳಿಕ ಕೂಗಿ ಕೇಳಿದರೆ ನಿಮ್ಮ ಮಗನೇ ಉತ್ತರ ಕೊಡುತ್ತಾನೆ” ಎಂದಳು. ಜಮೀನ್ದಾರ ಮಗನನ್ನು ಕಳುಹಿಸಿದ. ಅವಳು ಅವನನ್ನು ಮನೆಯ ಹಿಂಬದಿಗೆ ಕರೆದುಕೊಂಡು ಹೋಗಿ ಅವನ ತಲೆಯನ್ನು ಗಟಾರದ ಕೊಳಕು ನೀರು ಹೊರ ಬರುವ ತೂಬಿನೊಳಗೆ ತೂರಿಸಿ ಬಿಗಿಯಾಗಿ ಹಿಡಿದುಕೊಂಡಳು. ಸ್ವಲ್ಪ ಹೊತ್ತಿನಲ್ಲಿ ಜಮೀನಾªರ ಹೊರಗೆ ನಿಂತು, “”ಮಗನೇ ಎಲ್ಲಿದ್ದೀಯಾ, ನರಕ ಹೇಗಿದೆ?” ಎಂದು ಕೇಳಿದ. “”ಅಪ್ಪಾ, ದುರ್ಗಂಧದಿಂದ ಉಸಿರುಕಟ್ಟುತ್ತಿದೆ, ನರಕ ಭಯಾನಕವಾಗಿದೆ. ಬೇಗನೆ ನನ್ನನ್ನು ಮರಳಿ ಕರೆಸಿಕೊಳ್ಳದಿದ್ದರೆ ಸತ್ತುಹೋಗುತ್ತೇನೆ” ಎಂದು ಹೇಳಿದ ಮಗ.
“”ನನ್ನ ಮಗನನ್ನು ವಾಪಾಸು ಕರೆಸಿ” ಎಂದ ಜಮೀನ್ದಾರ. ಐವಾನನ ಹೆಂಡತಿ ಒಪ್ಪಲಿಲ್ಲ. “”ಎರಡೂ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತಲ್ಲವೆ? ಮೊದಲು ನಿಮ್ಮ ಸಕಲ ಆಸ್ತಿಯನ್ನೂ ನಮಗೆ ನೀಡಿರುವುದಾಗಿ ಬರೆದುಕೊಡಿ. ಇಲ್ಲವಾದರೆ ನರಕದಲ್ಲಿಯೇ ನಿಮ್ಮ ಮಗ ಸತ್ತುಹೋಗುತ್ತಾನೆ” ಎಂದು ಹೇಳಿದಳು. ಜಮೀನ್ದಾರ ಹಾಗೆಯೇ ನಡೆದುಕೊಂಡು ಮಗನ ಜೊತೆಗೆ ತಲೆ ತಗ್ಗಿಸಿ ಹೊರಟುಹೋದ.
ಪರಾಶರ