Advertisement

ಶತ್ರು ಟ್ಯಾಂಕರ್ ಗಳನ್ನು ತಡೆಯಲು ಸೇತುವೆ ಜೊತೆ ತನ್ನನ್ನೇ ಸ್ಫೋಟಿಸಿಕೊಂಡ ಉಕ್ರೇನ್ ನ ಯೋಧ!

04:12 PM Feb 26, 2022 | Team Udayavani |

ಕೀವ್: ರಷ್ಯಾದ ಟ್ಯಾಂಕರ್ ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು ಉಕ್ರೇನಿಯನ್ ಸೈನಿಕನೊಬ್ಬ ತನ್ನ ಸಹಿತ ಸೇತುವೆಯನ್ನೇ ಸ್ಫೋಟಿಸಿದ್ದಾನೆ.

Advertisement

ರಷ್ಯಾದ ಆಕ್ರಮಿತ ಕ್ರೈಮಿಯಾವನ್ನು ಉಕ್ರೇನ್ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಸೇತುವೆಯನ್ನು ಸೈನಿಕ ಸ್ಫೋಟಿಸಿದ್ದಾನೆ. ಈ ಪ್ರಕ್ರಿಯೆಯಲ್ಲಿ ಆತ ತನ್ನ ಪ್ರಾಣ ತ್ಯಾಗ ಮಾಡಿದ್ದಾನೆ.

ಈ ಸೈನಿಕನ ಹೆಸರು ಮೆರೈನ್ ಬೆಟಾಲಿಯನ್ ಎಂಜಿನಿಯರ್ ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್. ಉಕ್ರೇನಿಯನ್ ಮಿಲಿಟರಿಯ ಪ್ರಕಾರ ರಷ್ಯಾದ ಟ್ಯಾಂಕ್‌ಗಳು ಆಕ್ರಮಣ ಮಾಡಿದಾಗ ವೊಲೊಡಿಮಿರೊವಿಚ್ ಅವರನ್ನು ದಕ್ಷಿಣ ಪ್ರಾಂತ್ಯದ ಖೆರ್ಸನ್‌ನಲ್ಲಿರುವ ಹೆನಿಚೆಸ್ಕ್ ಸೇತುವೆ ಭಧ್ರತೆಹೆ ನಿಯೋಜಿಸಲಾಗಿತ್ತು

ರಷ್ಯಾದ ಟ್ಯಾಂಕ್‌ಗಳನ್ನು ತಡೆಯುವ ಏಕೈಕ ಮಾರ್ಗವೆಂದರೆ ಸೇತುವೆಯನ್ನು ಸ್ಫೋಟಿಸುವುದು ಎಂದು ಸೈನ್ಯ ನಿರ್ಧರಿಸಿತು. ಅದರ ಪ್ರಕಾರ, ವೊಲೊಡಿಮಿರೊವಿಚ್ ಈ ಕೆಲಸಕ್ಕೆ ಸ್ವಯಂ ಪ್ರೇರಿತರಾಗಿ ಮುಂದಾದರು ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಮನಕಲಕುವ ದೃಶ್ಯ: ಉಕ್ರೇನ್ ನಲ್ಲಿ ಸಿಲುಕಿದ್ದ 219 ಭಾರತೀಯರು ಮುಂಬಯಿಯತ್ತ

Advertisement

ಸೇತುವೆಯನ್ನು ಸ್ಫೋಟಿಸಿದ ವೊಲೊಡಿಮಿರೊವಿಚ್ ಗೆ ತಕ್ಷಣ ಸುರಕ್ಷಿತವಾಗಿ ಮರಳಲು ಸಾಧ್ಯವಾಗಿಲ್ಲ, ಸ್ಫೋಟದಲ್ಲಿ ಅವರೂ ಸಾವನ್ನಪ್ಪಿದರು. ವೊಲೊಡಿಮಿರೊವಿಚ್ ಶೌರ್ಯದ ಕಾರ್ಯದಿಂದ ರಷ್ಯಾದ ಟ್ಯಾಂಕ್ ಪಡೆಗಳು ದೀರ್ಘ ಮಾರ್ಗವನ್ನು ತೆಗೆದುಕೊಳ್ಳುವಂತೆ ಮಾಡಿತು, ಇದರಿಂದಾಗಿ ಉಕ್ರೇನಿಯನ್ ಮಿಲಿಟರಿಗೆ ಪ್ರತಿದಾಳಿ ನಡೆಸಲು ಇನ್ನೂ ಹೆಚ್ಚಿನ ಸಮಯಾವಕಾಶ ಸಿಕ್ಕಿತು.

“ನಾವು ಬದುಕಿರುವವರೆಗೂ ಹೋರಾಡುತ್ತೇವೆ! ಮತ್ತು ನಾವು ಜೀವಂತವಾಗಿರುವವರೆಗೂ ನಾವು ಹೋರಾಡುತ್ತೇವೆ!” ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next