Advertisement

ಕೀವ್‌ಗೆ ಇನ್ನಷ್ಟು  ನೋವು; ಸಮೀಪದಲ್ಲಿವೆ  ರಷ್ಯಾದ ಟ್ಯಾಂಕ್‌ಗಳು, ದಾಳಿ ಹೆಚ್ಚಳ

02:39 AM Mar 11, 2022 | Team Udayavani |

ಕೀವ್‌: ಇನ್ನು ನ್ಯಾಟೋಗೆ ಸೇರುವುದಿಲ್ಲ ಎಂಬ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಹೇಳಿಕೆ ಬಳಿಕವೂ ರಷ್ಯಾ ಪಡೆಗಳು ರಾಜಧಾನಿ ಕೀವ್‌ ಮೇಲೆ ದಾಳಿ ಮುಂದುವರಿಸಿವೆ. ಕೀವ್‌ನ ಪೂರ್ವ ಮತ್ತು ಪಶ್ಚಿಮ ಭಾಗದಿಂದ  ಟ್ಯಾಂಕರ್‌ಗಳು ಮುನ್ನುಗ್ಗುತ್ತಿವೆ.

Advertisement

ಅತ್ತ ಖಾರ್ಕಿವ್‌ ಮತ್ತು ಮರಿಯುಪೋಲ್‌ ನಗರಗಳ ಮೇಲಿನ ಬಾಂಬ್‌ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಕೀವ್‌ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವತ್ತ ಪುತಿನ್‌ ಸೇನೆ ಮುನ್ನುಗ್ಗುತ್ತಿದೆ. ಆದರೆ ಉಕ್ರೇನ್‌ ಸೇನೆ ತೀವ್ರ ಪ್ರತಿರೋಧ ತೋರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಇರ್ಪಿನ್‌ ಮೇಲೆ ರಾತ್ರಿ ವೇಳೆಯಲ್ಲೂ ದಾಳಿ ನಡೆಸಲಾಗುತ್ತಿದೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಮರಿಯುಪೋಲ್‌ನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮೇಲೆ ನಡೆದ ದಾಳಿ ವಿರುದ್ಧ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿದೆ.  ಇದೊಂದು ಮಾನವತೆಯ ಮೇಲಿನ ಕ್ರೂರ ದಾಳಿ ಎಂದು ಹಲವಾರು ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ನರಹತ್ಯೆ ಆರೋಪ ಸಂಬಂಧ ರಷ್ಯಾ ವಿರುದ್ಧ ತನಿಖೆ ನಡೆಸಬೇಕಾಗಿದೆ ಎಂದೂ ಆಗ್ರಹಿಸಿವೆ.

ಇದನ್ನೂ ಓದಿ:ರೈಲು ಪ್ರಯಾಣಿಕರಿಗೆ ಬ್ಲ್ಯಾಂಕೆಟ್‌ ಪೂರೈಸಲು ಸೂಚನೆ

ಆದರೆ ರಷ್ಯಾ ಮಾತ್ರ ದಾಳಿ ನಡೆಸಿದಾಗ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ ಎಂದು ವಾದಿಸಿದೆ. ಇದಕ್ಕೆ ಪ್ರತಿಯಾಗಿ ಆಸ್ಪತ್ರೆ ಮೇಲಿನ ದಾಳಿಯಲ್ಲಿ ಗಾಯಗೊಂಡವರ ಫೋಟೋಗಳನ್ನು ಉಕ್ರೇನ್‌ ಬಿಡುಗಡೆ ಮಾಡಿದೆ.

Advertisement

ಉಕ್ರೇನ್‌ ಪ್ರಕಾರ, ದಾಳಿ ಆರಂಭವಾದಾಗಿನಿಂದ 12 ಸಾವಿರ ರಷ್ಯಾ ಸೈನಿಕರು ಹತ್ಯೆಯಾಗಿದ್ದಾರೆ. ಹಾಗೆಯೇ ರಷ್ಯಾದ 335 ಟ್ಯಾಂಕ್‌ಗಳು, 1,100 ಶಸ್ತ್ರಾಸ್ತ್ರ ಸಾಗಣೆ ವಾಹನಗಳು, 500 ವಾಹನಗಳು, 81 ಹೆಲಿಕಾಪ್ಟರ್‌ಗಳು, 49 ಪ್ಲೇನ್‌ಗಳು ನಾಶವಾಗಿವೆ ಎಂದು ಉಕ್ರೇನ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next