ಪ್ರಪಂಚದಲ್ಲಿ ಎಂಥೆಂತ ಪ್ರೇಮಿಗಳು ಇರುತ್ತಾರೆ ಅಂದ್ರೆ, ಇಲ್ಲೊಂದು ಜೋಡಿ ನಾವು ಜಗಳವಾಡಿ ಬೇರೆಯಾಗುತ್ತೇವೆ ಎಂಬ ಕಾರಣಕ್ಕೆ ಕೈಗಳನ್ನು ಸರಪಳಿಯಿಂದ ಕಟ್ಟಿಕೊಂಡು ಜೀವನ ಸಾಗಿಸುತ್ತಿದೆ.
ಹೌದು ಉಕ್ರೇನ್ ದೇಶದ ಕಾರು ವ್ಯಾಪಾರಿ ಅಲೆಕ್ಸಾಂಡರ್ ಕುಡ್ಲೆ ಮತ್ತು ಬ್ಯುಟಿಶಿಯನ್ ವಿಕ್ಟೋರಿಯಾ ಪುಸ್ತೊವಿಟೋ ದಂಪತಿ ತಮ್ಮ ಸಂಬಂಧ ಹಾಳಾಗಬಾರದೆಂದು ಈ ನಿರ್ಧಾರಕ್ಕೆ ಬಂದಿದೆ. ಮೂರು ತಿಂಗಳುಗಳ ಕಾಲ ಕೈ ಕಟ್ಟಿಕೊಂಡೇ ಜಿವನ ನಡೆಸಬೇಕೆಂದು ನಿರ್ಧಾರ ಮಾಡಿರುವ ಈ ಜೋಡಿ ಸದ್ಯ ಒಂದು ತಿಂಗಳನ್ನು ಪೂರೈಸಿದ್ದಾರೆ. ಅಲ್ಲದೆ ತಮ್ಮ ದಿನನಿತ್ಯದ ಜೀವನವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಾಕಷ್ಟು ಫಾಲೋವರ್ಸ್ ಪಡೆದಿದ್ದಾರೆ.
ಒಟ್ಟಿಗೆ ಜೀವನ ಮಾಡುತ್ತಿದ್ದ ಅಲೆಕ್ಸಾಂಡರ್ ಮತ್ತು ವಿಕ್ಟೋರಿಯಾ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿ ವಾಗ್ವಾದಗಳು ನಡೆಯುತ್ತಿದ್ದವಂತೆ. ವಾರದಲ್ಲಿ ಎರಡು ಮೂರು ಬಾರಿ ಈ ರೀತಿಯ ಜಗಳವಾಗಿ, ಹಲವಾರು ಬಾರಿ ಬ್ರೇಕ್ ಅಪ್ ಆಗಲೂ ನಿರ್ಧರಿಸಿದ್ದರಂತೆ.
ಇನ್ನು ತನ್ನ ಪ್ರೇಯಸಿ ತನ್ನನ್ನು ಬಿಟ್ಟು ಹೋಗುವುದಾಗಿ ಹೇಳಿದ್ದು, ಅವಳ ಜೊತೆಯಲ್ಲೇ ಇರಲು ಬಯಸಿದ ಅಲೆಕ್ಸಾಂಡರ್ ಗೆ ಈ ಐಡಿಯಾ ಹೊಳೆಯಿತಂತೆ.
ಕೈ ಕಟ್ಟಿಕೊಂಡು ಕೆಲವು ದಿನ ಬದುಕೋಣ ಎಂದು ಮಡದಿ ವಿಕ್ಟೋರಿಯಾ ಬಳಿ ಹೇಳಿದಾಗ ಒಪ್ಪಲಿಲ್ಲವಂತೆ. ಆದ್ರೂ ಕೂಡ ಹೇಗೋ ಮಾಡಿ ಒಪ್ಪಿಸಿದ ಅಲೆಕ್ಸಾಂಡರ್ ಸದ್ಯ ತನ್ನ ಮಾತಿನಂತೆ ಜೊತೆಯಾಗಿ ಬದುಕುತ್ತಿದ್ದಾರೆ. ಸಿಗರೇಟ್ ಸೇದಲು ಹೋಗುವಾಗ, ಶಾಪಿಂಗ್ ಮಾಡಲು ಹೋಗುವಾಗ ಈ ಜೋಡಿ ಕೈ ಕಟ್ಟಿಕೊಂಡೇ ಹೋಗುತ್ತಾರಂತೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ವಿಕ್ಟೋರಿಯಾ, ಮೊದಲು ನಾನು ಈ ಐಡಿಯಾವನ್ನು ಒಪ್ಪಿರಲಿಲ್ಲ. ಆದ್ರೆ ಕೆಲವು ದಿನಗಳ ನಂತ್ರ ಇದು ಅಭ್ಯಾಸವಾಗಿದೆ. ಸಿ ಸದ್ಯ ನಾಮ್ಮಿಬ್ಬರ ಸಂಬಂಧ ಉತ್ತಮವಾಗಿದೆ. ನಾನು ಅವನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.
ಇನ್ನು ಅಲೆಕ್ಸಾಂಡರ್ ಕೂಡ ಈ ಬಗ್ಗೆ ಮಾತನಾಡಿದ್ದು, ನಮ್ಮ ನಡುವೆ ಈಗಲೂ ಜಗಳ ನಡೆಯುತ್ತಿವೆ. ಆದ್ರೆ ಕೊನೆಯಲ್ಲಿ ಮಾತು ಬಿಟ್ಟು ಸುಮ್ಮನಾಗುತ್ತೇವೆ ವಿನಃ ಬ್ರೇಕ್ ಅಪ್ ಆಗುವುದಿಲ್ಲ ಎಂದಿದ್ದಾರೆ.