Advertisement

ಉಕ್ರೇನ್-ರಷ್ಯಾ ಸಂಘರ್ಷ: ನೆದರ್ಲೆಂಡ್‌ ಸಲಹೆಗೆ ಭಾರತ ಖಡಕ್‌ ಉತ್ತರ

07:49 PM May 06, 2022 | Team Udayavani |

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಭಾರತವು ಉಕ್ರೇನ್‌ ಬೆಂಬಲಕ್ಕೆ ನಿಲ್ಲಲಿಲ್ಲ ಎನ್ನುವ ವಿಚಾರವಾಗಿ ಮಾತನಾಡಿದ್ದ ನೆದರ್ಲೆಂಡ್‌ನ‌ ರಾಯಭಾರಿಗೆ ವಿಶ್ವಸಂಸ್ಥೆಯ ಭಾರತದ ಖಾಯಂ ಸದಸ್ಯರಾಗಿರುವ ಟಿ.ಎಸ್‌.ತಿರುಮೂರ್ತಿ ಖಡಕ್‌ ಉತ್ತರ ಕೊಟ್ಟಿದ್ದಾರೆ.

Advertisement

“ನಮಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ’ ಎಂದು ನೇರವಾಗಿ ಹೇಳಿದ್ದಾರೆ.

ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ವಿಶ್ವಸಂಸ್ಥೆ ಬದ್ಧತೆ ಪುನರುಚ್ಚರಿಸಲು ಮಾ.2ರಂದು ಮತ ಚಲಾಯಿಸಿತ್ತು. ಅದರಲ್ಲಿ 141 ರಾಷ್ಟ್ರಗಳು ಉಕ್ರೇನ್‌ಗೆ ಬೆಂಬಲಿಸುವುದಾಗಿ ಹೇಳಿದ್ದರೆ, ಭಾರತ ಸೇರಿ ಒಟ್ಟು 34 ರಾಷ್ಟ್ರಗಳು ತಟಸ್ಥವಾಗಿದ್ದವು. ಆದರೆ ಈ ವಿಚಾರದಲ್ಲಿ ಭಾರತ ದೂರ ಸರಿಯಬಾರದಿತ್ತು ಎಂದು ವಿಶ್ವಸಂಸ್ಥೆಯಲ್ಲಿನ ನೆದರ್ಲೆಂಡ್‌ನ‌ ರಾಯಭಾರಿ ಹೇಳಿದ್ದರು. ಅದಕ್ಕೆ ಉತ್ತರಿಸಿದ ತಿರುಮೂರ್ತಿ ಅವರು, “ರಾಯಭಾರಿಗಳೇ, ನೀವು ನಮ್ಮ ಬೆಂಬಲಕ್ಕೆ ನಿಲ್ಲದಿರಿ. ನಮ್ಮ ನಿಲುವನ್ನು ನಾವು ಹೇಳುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next