Advertisement
ಉಕ್ರೇನ್‌ನ ಉತ್ತರ ಭಾಗದಲ್ಲಿರುವ ಸುಮಿ ಪ್ರಾಂತ್ಯದಲ್ಲಿರುವ ಎರಡು ಗಡಿ ಗ್ರಾಮಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆ ಸಿದೆ. ಈ ಘಟನೆಯಲ್ಲಿ ಗಡಿ ಪರಿವೀಕ್ಷಣೆಯಲ್ಲಿ ನಿರತರಾಗಿದ್ದ ಯೋಧನೊಬ್ಬ ಗಾಯಗೊಂಡಿದ್ದಾನೆಂದು ಸ್ಥಳೀಯ ಗವರ್ನರ್ ಡಿಮಿಟ್ರೋ ಝಿವಿ ಟೆÕ„ವಿ ತಿಳಿಸಿದ್ದಾರೆ. ಈ ನಡುವೆ, ರಷ್ಯಾವು ಪ್ರಕಟನೆಯೊಂದನ್ನು ಹೊರಡಿಸಿದ್ದು ಅದರಲ್ಲಿ, ಉಕ್ರೇನ್‌ನಲ್ಲಿದ್ದ ಅಮೆರಿಕ, ನ್ಯಾಟೋ ಹಾಗೂ ಐರೋಪ್ಯ ರಾಷ್ಟ್ರಗಳ ಶಸ್ತ್ರಾಸ್ತ್ರ ಸಮೂಹವೊಂದನ್ನು ನಾಶಪಡಿ ಸಿರುವುದಾಗಿ ಹೇಳಿದೆ.
ಉಕ್ರೇನ್‌ನ ಮೇಲೆ ರಷ್ಯಾ ದಾಳಿ ನಡೆಸಲು ಅಮೆರಿಕವೇ ಕಾರಣ ಎಂದು ಅಲ್‌ಕಾಯಿದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ತನ್ನ ಹೊಸ ವೀಡಿಯೋ ಸಂದೇಶದಲ್ಲಿ ಆರೋಪಿಸಿದ್ದಾನೆ. ಒಸಾಮಾ ಬಿನ್ ಲಾಡೆನ್‌ನ 11ನೇ ಪುಣ್ಯತಿಥಿಯ ನಿಮಿತ್ತ ಬಿಡುಗಡೆ ಮಾಡಲಾಗಿರುವ ಪ್ರೀ-ರೆಕಾರ್ಡೆಡ್ ವೀಡಿಯೋದಲ್ಲಿ ಆತ, ಉಕ್ರೇನ್‌ನನ್ನು ರಷ್ಯಾ ವಿರುದ್ಧ ಎತ್ತಿಕಟ್ಟುತ್ತಾ ಬಂದ ಅಮೆರಿಕ ಯುದ್ಧದ ಸಂದರ್ಭದಲ್ಲಿ ಉಕ್ರೇನ್‌ಗೆ ಬೆಂಬಲವಾಗಿ ನಿಲ್ಲಲಿಲ್ಲ. ಇದರಿಂದ, ರಷ್ಯಾಕ್ಕೆ ಉಕ್ರೇನ್ ಮೇಲೆ ದಾಳಿ ನಡೆಸಲು ಸುಲಭವಾಯಿತು ಅವರು ಆರೋಪಿಸಿದ್ದಾನೆ. ಗೋಧಿ ಬೆಲೆ ಹೆಚ್ಚಳ?
ಉಕ್ರೇನ್‌ನಲ್ಲಿನ ಯುದ್ಧದ ಪರಿಸ್ಥಿತಿಯಂದಾಗಿ ಆ ದೇಶದಿಂದ ಪ್ರತೀವರ್ಷ ಆಗುತ್ತಿದ್ದ ಗೋಧಿಯ ರಫ್ತಿನ ಪ್ರಮಾಣ ಗಣನೀಯ ಮಟ್ಟದಲ್ಲಿ ಇಳಿಕೆಯಾಗಲಿದ್ದು, ಅದರ ಪರಿಣಾಮದಿಂದ, ಇಡೀ ಜಗತ್ತಿನಲ್ಲಿ ಗೋಧಿಯ ಬೆಲೆ ಕೂಡ ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇಡೀ ಜಗತ್ತಿಗೆ ಉಕ್ರೇನ್ ಗೋಧಿಯ ಬಟ್ಟಲು ಎಂದೇ ಖ್ಯಾತಿ ಗಳಿಸಿದೆ. ಕಳೆದ ವರ್ಷ, ಅಲ್ಲಿ 33 ಮಿಲಿಯನ್ ಟನ್‌ನಷ್ಟು ಗೋಧಿ ಬೆಳೆಯಲಾಗಿದ್ದು, ಅಲ್ಲಿಂದ ಜಗತ್ತಿನ ನಾನಾ ರಾಷ್ಟ್ರಗಳಿಗೆ 20 ಮಿಲಿಯನ್ ಟನ್‌ನಷ್ಟು ಗೋಧಿ ಸರಬರಾಜಾಗಿದೆ.
Related Articles
Advertisement