“ದೇಶದ ಮೇಲೆ ರಷ್ಯಾ ದಾಳಿಯಿಂದ ಅಪ್ಪನ ಅಂತ್ಯಸಂಸ್ಕಾರ ಮಾಡಲೂ ಅಸಾಧ್ಯವಾಯಿತು’- ಇದು ಅಲಿಯಾ (35) ಎಂಬವರ ಅಳಲು.
ಫೆ.24ರಂದು ಉಕ್ರೇನ್ ಮೇಲೆ ದಾಳಿ ನಡೆಸಲಾರಂಭಿಸಿತ್ತು. ಅದರ ಹಿಂದಿನ ದಿನ (ಫೆ.24)ಅವರ ತಂದೆ ನಿಧನ ಹೊಂದಿದ್ದರು. ಅವರ ಕಣ್ಣೀರ ಕಥೆ ಹೀಗಿದೆ “ಅಪ್ಪನ ಅಂತ್ಯಸಂಸ್ಕಾರ ಮಾಡಲೆಂದು ನಾವು ದಾಖಲೆ ಸಿದ್ಧತೆಗೆ ಒದ್ದಾಡುತ್ತಿದ್ದೆವು. ಆದರೆ ಅಷ್ಟರಲ್ಲೇ ಯುದ್ಧ ಆರಂಭ ವಾಯಿತು. ಎಲ್ಲ ದಾಖಲೆ ಸಿದ್ಧವಿತ್ತು, ದಾಖಲೆ ಬೇಕೆನ್ನುವಾಗಲೇ . ಯುದ್ಧ ಆರಂಭವಾಗಿ ಅಂತ್ಯ ಸಂಸ್ಕಾರವನ್ನೂ . ಮಾಡದಂತಾಯಿತು. .
ನಾನು ಕೆಲಸ ಮಾಡುವ ಜರ್ಮನ್ ಕಂಪೆನಿ ನನ್ನ ಕುಟುಂಬವನ್ನು . ಪೋಲೆಂಡ್‌ಗೆ ಸ್ಥಳಾಂತರಿಸಲು ಸಹಾಯ ಮಾಡಿತು. 140 ಕಿ.ಮೀ. ದೂರ ಕ್ರಮಿಸಲು 16 ಗಂಟೆ ಬೇಕಾಯಿತು. ಕೊನೆಗೆ 17 ಕಿ.ಮೀ. ದೂರವನ್ನು ಕೊರೆಯುವ ಚಳಿಯಲ್ಲಿ ನಡೆದೇ ಕ್ರಮಿಸಿದೆವು. ಆದರೆ ವಯಸ್ಸಿನ ಮಿತಿ ಮತ್ತು ಉಕ್ರೇನ್ ಸರಕಾರದ ನಿಯಮದಿಂದಾಗಿ ನನ್ನ ಪತಿಗೆ ಪೋಲೆಂಡ್‌ಗೆ ಪ್ರವೇಶಕ್ಕೆ ಅನುಮತಿ ಸಿಗಲಿಲ್ಲ.
ನನ್ನ ಜೀವವೇ ಆಗಿದ್ದ ಪತಿ ಇದೀಗ ಕೀವ್‌ನಲ್ಲಿರುವ ಹಳ್ಳಿಯಲ್ಲಿ ಅವರ ತಂದೆ ತಾಯಿ ಜತೆ ಇದ್ದಾರೆ. ಅಲ್ಲಿ ಕುಡಿಯುವುದಕ್ಕೆ ನೀರೂ ಗತಿಯಿಲ್ಲ’ ಎಂದು ಅಲಿಸಾ ನೋವನ್ನು ತೋಡಿಕೊಂಡಿದ್ದಾರೆ.