Advertisement

ಉಕ್ರೇನ್‌ಗೆ ಮರಳಲು ವಿವಿಗಳ ಸಂದೇಶ: ಭಾರತೀಯ ವಿದ್ಯಾರ್ಥಿಗಳಿಗೆ ತಲೆಬಿಸಿ

08:47 PM Aug 18, 2022 | Team Udayavani |

ನವದೆಹಲಿ: ರಷ್ಯಾ ಯುದ್ಧ ಆರಂಭಿಸುವ ಪೂರ್ವಕಾಲದಲ್ಲಿ ಉಕ್ರೇನ್‌ ವೈದ್ಯಕೀಯ ವಿದ್ಯಾರ್ಥಿಗಳ ಸ್ವರ್ಗವೆನಿಸಿತ್ತು. ಅದೇ ಕಾರಣಕ್ಕೆ 20,000ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದರು. ಇದೀಗ ಅದೇ ದೇಶ ಭಾರತೀಯರಿಗೆ ನರಕವೆನಿಸಿದೆ.

Advertisement

ಇಷ್ಟರ ಮಧ್ಯೆ ವಿದ್ಯಾರ್ಥಿಗಳಿಗೆ ಉಕ್ರೇನ್‌ ವಿವಿಗಳಿಂದ ಆಘಾತಕಾರಿ ಸಂದೇಶ ಬಂದಿದೆ. “ಸೆ.1ರಿಂದ ಮಾಮೂಲಿಯಂತೆ ಭೌತಿಕ ತರಗತಿಗಳು ಆರಂಭವಾಗಲಿವೆ. ಹಾಗೆಯೇ ಕ್ರಾಕ್‌-1, ಕ್ರಾಕ್‌-2 ಪರೀಕ್ಷೆಗಳು ನಡೆಯಲಿವೆ. ನೀವು ಹಾಜರಾಗಿ, ಸುರಕ್ಷತೆಯ ಬಗ್ಗೆ ಭರವಸೆ ನೀಡುತ್ತೇವೆ’ ಇಂತಹ ಸಂದೇಶಗಳು ಉಕ್ರೇನ್‌ ವಿವಿಗಳಿಂದ ಭಾರತೀಯ ವಿದ್ಯಾರ್ಥಿಗಳಿಗೆ ತಲುಪಿವೆ!

ಸದ್ಯ ಇನ್ನೂ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಆ ದೇಶಕ್ಕೆ ಹೋಗುವ ಧೈರ್ಯ ಭಾರತೀಯ ವಿದ್ಯಾರ್ಥಿಗಳಿಗಿಲ್ಲ. ಹಾಗಂತ ಆನ್‌ಲೈನ್‌ ಪಾಠಗಳಿಗೆ ಭಾರತೀಯ ವೈದ್ಯಕೀಯ ಇಲಾಖೆ ಮಾನ್ಯತೆ ನೀಡುವುದಿಲ್ಲ. ಇಷ್ಟೆಲ್ಲದರ ಮಧ್ಯೆ ಬೇರೆ ದೇಶಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುತ್ತೇವೆಂದು ಉಕ್ರೇನ್‌ ನೀಡಿದ್ದ ಭರವಸೆಗಳೂ ಈಡೇರಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ 3ನೇ ವರ್ಷದ ಮಹತ್ವದ ಪರೀಕ್ಷೆ ಕ್ರಾಕ್‌-1, ವೈದ್ಯಕೀಯ ಸೇವೆ ಸಲ್ಲಿಸಲು ಪರವಾನಗಿ ನೀಡುವ ಕ್ರಾಕ್‌-2 ಪರೀಕ್ಷೆಗಳಿಗೆ ಹಾಜರಾಗಲೇಬೇಕು. ಇದಕ್ಕೆ ಗೈರಾದರೆ ಇಲ್ಲಿಯವರೆಗಿನ ಪದವಿಗಳು ವ್ಯರ್ಥವಾಗುತ್ತವೆ. ಇಷ್ಟೆಲ್ಲ ಗೊಂದಲಗಳ ನಡುವೆ ಭಾರತೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next