ಕೀವ್: ಉಕ್ರೇನ್ ನಲ್ಲಿರುವ ಯೂರೋಪ್ ನ ಅತೀದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಗುರುವಾರ ಏಕಾಏಕಿ ರಷ್ಯಾ ಪಡೆಗಳು ದಾಳಿ ನಡೆಸಿ ತಮ್ಮ ವಶಕ್ಕೆ ಪಡೆದಿದ್ದವು. ಆದರೆ ಇದೀಗ ಪರಮಾಣು ಸ್ಥಾವರದ ಮೇಲೆ ಉಕ್ರೇನ್ ಮತ್ತೆ ನಿಯಂತ್ರಣ ಸಾಧಿಸಿದೆ ಎಂದು ವರದಿಯಾಗಿದೆ.
ಉಕ್ರೇನ್ ನ ಸುಮಿ ನಗರದ ಬೀದಿಗಳಲ್ಲಿ ಹೋರಾಟ ಭುಗಿಲೆದ್ದಿದೆ. ನಿವಾಸಿಗಳು ಮನೆಯಲ್ಲಿಯೇ ಇರುವಂತೆ ಅಥವಾ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಲಾಗಿದೆ.
ರಾಜಧಾನಿ ಕೀವ್ ನ ಹೊರಗಿನ ಇರ್ಪಿನ್ ಪಟ್ಟಣದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ರಷ್ಯಾದ ಪಡೆಗಳು ಬಾಂಬ್ ದಾಳಿ ನಡೆಸಿವೆ.
ಇದನ್ನೂ ಓದಿ:ಉಕ್ರೇನಿಯನ್ ಬಂದರು ನಗರ ಮರಿಯುಪೋಲ್ ನ್ನು ವಶಕ್ಕೆ ಪಡೆದ ರಷ್ಯಾ!
ಯುರೋಪ್‌ನಲ್ಲೇ ಅತಿ ದೊಡ್ಡದಾದ ಈ ಪರಮಾಣು ಸ್ಥಾವರದಲ್ಲಿ ನಡೆದ ಸ್ಫೋಟದಲ್ಲಿ ಉಕ್ರೇನ್‌ನ ಮೂವರು ಸೈನಿಕರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ನ್ಯಾಟೋ ವಿದೇಶಾಂಗ ಸಚಿವರು ತುರ್ತು ಸಭೆ ನಡೆಸಿದ್ದಾರೆ. ಆದರೆ, ಸದ್ಯಕ್ಕೆ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಿಲ್ಲ, ಎಲ್ಲ ರಿಯಾಕ್ಟರ್‌ಗಲೂ ಸುಸ್ಥಿತಿಯಲ್ಲಿವೆ ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಸ್ಪಷ್ಟಪಡಿಸಿದೆ.