Advertisement
ಓಕ್ಸಾನಾ ಮಲಾಯಾ 3 ವರ್ಷದವಳಾಗಿದ್ದಾಗ, ತನ್ನ ಹೆತ್ತವರು ಅತಿಯಾಗಿ ಮದ್ಯಪಾನ ಮಾಡಿ ಈಕೆಯನ್ನು ಮನೆಯಿಂದ ಹೊರಗಟ್ಟಿದರು. ಅಂದು ತಮ್ಮ ಮನೆಯ ಸಾಕು ನಾಯಿ ಜತೆ ಮಲಗಿದ್ದ ಆಕೆಯ ಜೀವನವು ಆಘಾತಕಾರಿ ತಿರುವು ಪಡೆಯಿತು. 5 ವರ್ಷ ನಾಯಿಗೂಡಿನಲ್ಲೇ ಬೆಳೆದ ಈಕೆ, ನಾಯಿಗಳ ರೀತಿ 4 ಕಾಲಿನಲ್ಲಿ ನಡೆಯುವುದು, ಬೊಗಳುವುದು, ಕೈಗಳ ಸಹಾಯವಿಲ್ಲದೆ ಬಾಯಿ ಯಿಂದಲೇ ಆಹಾರ ಸೇವನೆ ಮಾಡುತ್ತಿದ್ದಳು. ದೇಹವನ್ನು ತನ್ನ ನಾಲಗೆಯಲ್ಲಿ ನೆಕ್ಕುವ ಮೂಲಕ ಶುಚಿ ಮಾಡಿಕೊಳ್ಳುತ್ತಿದ್ದ ಆಕೆ, ನೀರನ್ನೂ ನಾಲಗೆಯಲ್ಲಿ ನೆಕ್ಕುತ್ತಿದ್ದಳು. ಇಂಥ ಪರಿಸ್ಥಿತಿಯಲ್ಲಿ ಆಕೆಯನ್ನು ರಕ್ಷಿಸಿದ ಅಧಿಕಾರಿಗಳು, ಸೂಕ್ತ ಮನೋಚಿಕಿತ್ಸೆಯನ್ನು ನೀಡಿದ್ದಾರೆ. ಈಗ ಆಕೆಗೆ 40 ವರ್ಷ ವಯಸ್ಸು. Advertisement
Ukraine: ನಾಯಿಗೂಡಿನಲ್ಲಿ ಬೆಳೆದ ಓಕ್ಸಾನಾ, ನಾಯಿಯಂತೆಯೇ ಆದಳು!
12:19 AM Feb 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.