Advertisement

ರಷ್ಯಾ ಬಾಂಬ್ ದಾಳಿಗೆ ಸಿಲುಕಿ ಕಾಲು ಕಳೆದುಕೊಂಡರೂ ಕೈ ಬಿಡದ ಪ್ರಿಯಕರ

12:01 AM May 05, 2022 | Team Udayavani |

ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯ ಬದುಕಿನಲ್ಲಿ ರಷ್ಯಾ ಸೇನೆ ಹುದುಗಿಸಿಟ್ಟಿದ್ದ ಆ “ನೆಲಬಾಂಬ್‌’ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.

Advertisement

ಉಕ್ರೇನ್‌ನಲ್ಲಿ ನರ್ಸ್‌ ಆಗಿರುವ 23 ವರ್ಷದ ಒಕ್ಸಾನಾ ಮತ್ತು ಭಾವೀ ಪತಿ ವಿಕ್ಟರ್‌ ಮಾ.27ರಂದು ನಡೆದುಕೊಂಡು ಸಾಗುತ್ತಿದ್ದಾಗ, ನೆಲಬಾಂಬ್‌ ಸ್ಫೋಟಿಸಿ ಒಕ್ಸಾನಾ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಳು. ವಿಕ್ಟರ್‌ ಸಣ್ಣಪುಟ್ಟ ಗಾಯಗಳಿಂದ ಪಾರಾದ. ಇಲ್ಲಿಗೆ ತನ್ನ ಬದುಕೇ ಮುಗಿಯಿತು ಎಂದು ಭಾವಿಸಿದ್ದಳು ಒಕ್ಸಾನಾ. ಆದರೆ ವಿಕ್ಟರ್‌ ಆಕೆಯ ಕೈಬಿಡಲಿಲ್ಲ. ಕಾಲು­ಗಳಿಲ್ಲದೇ ಇದ್ದರೂ ಪ್ರೀತಿ ಕಮ್ಮಿಯಾಗಿಲ್ಲ ಎಂದ ವಿಕ್ಟರ್‌ ಆಸ್ಪತ್ರೆಯಲ್ಲೇ ಒಕ್ಸಾನಾಳನ್ನು ವಿವಾಹವಾಗಿದ್ದಾನೆ.

ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಈ ವೀಡಿಯೋ ಭಾರೀ ವೈರಲ್‌ ಆಗಿದ್ದು ಉಕ್ರೇನ್‌ ಸರಕಾರ ಕೂಡ ಇದನ್ನು ವಿಶೇಷ ಲವ್‌ ಸ್ಟೋರಿ ಎಂದು ಬಣ್ಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next