ಅಂಶಗಳು ಬಹಿರಂಗವಾಗಿವೆ.
Advertisement
ಕ್ಯಾನ್ಸರ್ ರೋಗಿಗಳ ಆರೈಕೆಗೂ ಅಡಚಣೆಕೋವಿಡ್ ಬಳಿಕ ಉಕ್ರೇನ್‌ನಲ್ಲಿ ಕ್ಯಾನ್ಸರ್ ರೋಗಿಗಳ ಆರೈಕೆ ಕೇಂದ್ರಗಳು ಹಿಂದಿನಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೀಗ ಯುದ್ಧದ ಪರಿಣಾಮ ಈ ಕೇಂದ್ರಗಳು ಬಹುತೇಕ ಸ್ತಬ್ಧಗೊಂಡಿವೆ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಸರ್ಜರಿ ಸಹಿತ ಬಹುತೇಕ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ಮುಖ್ಯವಾಗಿರುವ ಕಾಯಿಲೆ ಪತ್ತೆ ಪರೀಕ್ಷೆ, ಕಿಮೋ ಥೆರಪಿ ಮತ್ತು ರೇಡಿಯೋಥೆರಪಿ ಸಹಿತ ಅಗತ್ಯ ಆರೋಗ್ಯ ಸೇವೆಗಳು ಸ್ಥಗಿತಗೊಂಡಿದೆ ಎಂದು ಲಾನ್ಸೆಟ್ ವರದಿ ಮಾಡಿದೆ.
ರಷ್ಯಾ ಸೇನೆ ಉಕ್ರೇನ್ ಮೇಲೆ ನಡೆಸುತ್ತಿರುವ ಆಕ್ರಮಣದಿಂದಾಗಿ ಉಕ್ರೇನ್‌ನಲ್ಲಿ ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಕಾರಣವಾಗಬಹುದು ಮತ್ತು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ ನೀಡ ಬಹುದು ಎಂದು ಸಂಶೋಧನ ತಜ್ಞರು ಎಚ್ಚರಿಸಿದ್ದಾರೆ.
Related Articles
Advertisement
ಯುದ್ಧದ ಪರಿಣಾಮ ಉಕ್ರೇನ್‌ನಲ್ಲಿ ಪೋಲಿಯೋ ಪರೀಕ್ಷೆ ಮತ್ತು ಲಸಿಕೆ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಇತ್ತ ವಿಶ್ವ ಆರೋಗ್ಯ ಸಂಸ್ಥೆ ಬೆಟ್ಟು ಮಾಡಿದೆ. ಯುರೋಪ್ ಅನ್ನು ಪೋಲಿಯೋ ಮುಕ್ತ ಎಂದು ಘೋಷಿಸಿದ 19 ವರ್ಷಗಳ ಅನಂತರ 2021ರ ಅಕ್ಟೋಬರ್‌ನಲ್ಲಿ ಉಕ್ರೇನ್‌ನಲ್ಲಿ ಮೊದಲ ಪೋಲಿಯೋ ಪ್ರಕರಣ ದಾಖಲಾಗಿದೆ. ಇದೇ ವೇಳೆ ಯುದ್ಧ ಆರಂಭಗೊಂಡ ಬಳಿಕ ಉಕ್ರೇನ್‌ನ ಹಲ ವೆಡೆ ಆಹಾರದ ಅಭಾವ ಕಾಣಿಸಿ ಕೊಂಡಿದ್ದು ಇದರಿಂದಾಗಿ ಮಕ್ಕಳಿಗೆ ಅಗತ್ಯ ವಾದ ಪೋಷಕಾಂಶಗಳು ಲಭಿಸದಂತಾಗಿದೆ.
ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮರಷ್ಯಾದ ಸೇನಾ ಆಕ್ರಮಣವು ಉಕ್ರೇನಿಯನ್ನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮಗಳನ್ನು ಬೀರಲಿದೆ. ದೈಹಿಕ ಮತ್ತು ಮಾನಸಿಕವಾಗಿ ಇಲ್ಲಿನ ಜನರು ಈಗಾಗಲೇ ಕುಸಿದು ಹೋಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ವೈದ್ಯರ ಕೊರತೆ
ಕಳೆದ ಕೆಲವು ವರ್ಷಗಳಿಂದೀಚೆಗೆ ಉಕ್ರೇನ್‌ನ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣ ಪ್ರಕ್ರಿಯೆಗಳು ನಡೆದಿದ್ದು ಈ ಯುದ್ಧದಿಂದಾಗಿ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಬಿಗಡಾಯಿಸುವ ಪರಿಸ್ಥಿತಿ ತಲೆದೋರಿದೆ. ರಷ್ಯಾ ಸೇನೆ ಉಕ್ರೇನ್‌ನಲ್ಲಿನ ಆಸ್ಪತ್ರೆಗಳು, ಚಿಕಿತ್ಸಾಲಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ ಪರಿಣಾಮ ಆರೋಗ್ಯ ಸೇವೆಯಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ. ಆರೋಗ್ಯ ಕಾರ್ಯಕರ್ತರು, ವೈದ್ಯರು, ಆರೋಗ್ಯ ಸಿಬಂದಿ ಕೊರತೆ ವ್ಯಾಪಕವಾಗಿದ್ದರೆ ಅಗತ್ಯ ಔಷಧಗಳಾಗಲಿ, ವೈದ್ಯಕೀಯ ಸಾಧನ, ಉಪಕರಣಗಳ ಅಲಭ್ಯತೆ ಕಾಡತೊಡಗಿದೆ. ಯುದ್ಧ ಇನ್ನೂ ತಿಂಗಳುಗಳ ಕಾಲ ಮುಂದುವರಿದಲ್ಲಿ ಜನರ ಆರೋಗ್ಯ ರಕ್ಷಣೆ ಬಲುದೊಡ್ಡ ಸವಾಲಾಗಲಿದೆ. ಪೋಲಿಯೋ ಪಿಡುಗು
2021ರ ಉಕ್ರೇನ್‌ನಲ್ಲಿ ಒಂದು ಪೋಲಿಯೋ ಪ್ರಕರಣ ದೃಢಪಟ್ಟಿದ್ದರೆ 19 ಲಕ್ಷಣ ರಹಿತ ಪ್ರಕರಣಗಳು ದಾಖಲಾಗಿದ್ದವು. ದೇಶದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಕೇಂದ್ರದ ಪ್ರಕಾರ, ಕೇವಲ ಶೇ. 53ರಷ್ಟು ಮಕ್ಕಳಿಗೆ ಮಾತ್ರ ಪೋಲಿಯೋ ಲಸಿಕೆ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ ಸುಮಾರು ಲಸಿಕೆ ಪಡೆಯದ 1,40,000ಮಕ್ಕಳಿಗೆ ಲಸಿಕೆ ನೀಡಲು ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿತ್ತಾದರೂ ಯುದ್ಧದ ಪರಿಣಾಮ ಈ ಅಭಿಯಾನ ಸ್ಥಗಿತಗೊಂಡಿದೆ. ಭವಿಷ್ಯದಲ್ಲಿ ಪೋಲಿಯೋ ಸಮಸ್ಯೆ ದೇಶದಲ್ಲಿ ಇನ್ನಷ್ಟು ತೀವ್ರಗೊಳ್ಳುವ ಆತಂಕ ಸೃಷ್ಟಿಯಾಗಿದೆ. ಇತರ ಸವಾಲುಗಳು
ಮಾನವ ಕಳ್ಳಸಾಗಣೆ, ಲಿಂಗ ಆಧಾರಿತ ಹಿಂಸೆ, ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯ ಸಮಸ್ಯೆ ಸಹಿತ ಇನ್ನಿತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಲಿದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಕೋವಿಡ್ ಸಾಂಕ್ರಾಮಿಕ ಮತ್ತು ರಷ್ಯಾ ಆಕ್ರಮಣದ ಮೊದಲು ಉಕ್ರೇನ್‌ನಲ್ಲಿ ಜನರ ಜೀವಿತಾವಧಿ ತುಲನಾತ್ಮಕವಾಗಿ ಕಡಿಮೆಯಾಗಿತ್ತು. ಮುಂದಿನ ವರ್ಷಗಳಲ್ಲಿ ಇದು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಕೋವಿಡ್ 19 ನಿಂದಾದ ಪರಿಣಾಮ
ರಷ್ಯಾ-ಉಕ್ರೇನ್ ಸಂಘರ್ಷವು ಕೋವಿಡ್-19 ಸೋಂಕಿನ ಹರಡುವಿಕೆಯನ್ನು ಹೆಚ್ಚಿಸುತ್ತದೆ ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ. ಇದರ ಪ್ರಕಾರ, 2022ರ ಮಾರ್ಚ್ 14ರ ವರೆಗೆ ಉಕ್ರೇನ್‌ನಲ್ಲಿ 4.8 ದಶಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದರೆ 1,06,985 ಸಾವು ಸಂಭವಿಸಿದೆ. ಮತ್ತೆ ಕೆಲವೊಂದು ವರದಿಗಳ ಪ್ರಕಾರ ಈ ವರ್ಷದ ಫೆಬ್ರವರಿ ಅಂತ್ಯಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ದಾಖಲಾದ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಯುದ್ಧ ಆರಂಭಗೊಂಡ ಬಳಿಕ ಕೋವಿಡ್ ಪರೀಕ್ಷೆ ಬಹುತೇಕ ಸ್ಥಗಿತಗೊಂಡಿರುವುದೇ ಇದಕ್ಕೆ ಕಾರಣ. ಯುದ್ಧ ಆರಂಭವಾಗುತ್ತಿದ್ದಂತೆ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ನೆಲಮಾಳಿಗೆ, ಭೂಗತ ಮೆಟ್ರೋ ನಿಲ್ದಾಣ ಹೀಗೆ ನಾನಾ ಕಡೆಗಳಲ್ಲಿ ಆಶ್ರಯ ಪಡೆದರು. ಇನ್ನು ಲಕ್ಷಾಂತರ ಸಂಖ್ಯೆಯಲ್ಲಿ ಜನರು ನೆರೆ ರಾಷ್ಟ್ರಗಳಿಗೆ ವಲಸೆ ಹೋದರು. ಪ್ರಾಣಭೀತಿಯ ಸಂದರ್ಭದಲ್ಲಿ ಶುಚಿತ್ವ, ನೈರ್ಮಲ್ಯ, ಶುದ್ಧ ಆಹಾರ, ದಟ್ಟಣೆ ಇವೆಲ್ಲದರತ್ತ ಲಕ್ಷ್ಯ ಹರಿಸುವ ಪ್ರಶ್ನೆಯಾದರೂ ಎಲ್ಲಿಂದ?. ಸಹಜವಾಗಿಯೇ ಇವೆಲ್ಲವೂ ಕೋವಿಡ್‌ನ ಜತೆಯಲ್ಲಿ ಇತರ ಸಾಂಕ್ರಾಮಿಕ ರೋಗಗಳು ಹರಡಲೂ ಕಾರಣವಾಯಿತು. ದಡಾರ, ಪೋಲಿಯೋ, ಶ್ವಾಸಕೋಶದ ಸೋಂಕುಗಳು, ಕ್ಷಯ, ಎಚ್‌ಐವಿ, ಅತಿಸಾರದಂತಹ ಕಾಯಿಲೆಗಳು ಹರಡಲು ಈ ಬೆಳವಣಿಗೆಗಳು ಪೂರಕ ಎನ್ನುತ್ತಾರೆ ಆರೋಗ್ಯ ತಜ್ಞರು. - ಪ್ರೀತಿ ಭಟ್, ಗುಣವಂತೆ