ವಾಷಿಂಗ್ಟನ್ :ಅಮೆರಿಕಾದಲ್ಲಿ ರಷ್ಯಾ ವಿರೋಧಿ ಹೋರಾಟ ತರೇವಾರಿ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಲ್ಲಿನ ‘ ಗುಂಡು’ ಪ್ರಿಯರೂ ಈಗ ರಷ್ಯಾ ವಿರುದ್ಧ ತಮ್ಮ ವಿರೋಧ ಪ್ರಕಟಿಸಿದ್ದಾರೆ.
ಲಾಸ್ ವೆಗಾಸ್ ನಲ್ಲಿ ರಷ್ಯಾ ವೋಡ್ಕಾ ಬಾಟಲಿಗಳನ್ನು ಒಡೆದು ಚರಂಡಿಗೆ ಸುರಿಯಲಾಗುತ್ತಿದೆ. ರಷ್ಯಾ ನಿರ್ಮಿತ ಎಲ್ಲ ಶ್ರೇಣಿಯ ಮಧ್ಯಗಳನ್ನೂ ಈಗ ನಿರಾಕರಿಸುತ್ತಿರುವ ಅಮೆರಿಕಾದ ಕುಡುಕರು ಉಕ್ರೇನಿಯನ್ ವೋಡ್ಕಾ ಸೇವೆನೆ ಮಾಡದಿರುವ ಮೂಲಕ ಆ ದೇಶಕ್ಕೆ ತಮ್ಮದೇ ಆದ ಮಾರ್ಗ ದಲ್ಲಿ ತಿರುಗೇಟು ನೀಡಲು ಮುಂದಾಗಿದ್ದಾರೆ.
ಮುನ್ನೂರು ಡಾಲರ್ ಕೊಟ್ಟು ರಷ್ಯನ್ ವೋಡ್ಕಾ ಖರೀದಿಸಿ ಅವುಗಳನ್ನು ಟಾಯ್ಲೆಟ್ ಗೆ ಚೆಲ್ಲಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಅಗುತ್ತಿದೆ.
ರಷ್ಯಾ ವೋಡ್ಕಾ ಬದಲು ಈಗ ಉಕ್ರೇನಿಯನ್ ಮದ್ಯ ನೆಮಿರಾಫ್ – ವೋಡ್ಕಾದ ಒಂದು ಶಾಟ್ ಗೆ ೫ ಅಮೆರಿಕನ್ ಡಾಲರ್ ಕೊಟ್ಟು ಖರೀದಿಸಲಾಗುತ್ತಿದೆ. ಈ ರೀತಿ ದುಬಾರಿಯಾಗಿ ತೆತ್ತ ಹಣವನ್ನು ರೆಡ್ ಕ್ರಾಸ್ ಮೂಲಕ ಉಕ್ರೇನ್ ಗೆ ಮಾನವೀಯ ನೆರವು ಕಲ್ಪಿಸಲು ರವಾನಿಸಲಾಗುವುದು ಎಂದು ಅಮೆರಿಕಾ ದ ವಾಣಿಜ್ಯ ಚಾನಲ್ ಗಳಲ್ಲಿ ವರದಿ ಪ್ರಕಟವಾಗಿದೆ.
ಗುರುವಾರದಿಂದ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು ವಿರೋಧಿಸಲು ಕೆನಡಾಕೂಡ ರಷ್ಯಾದ ವೋಡ್ಕಾ ಸ್ಟಾಕ್‌ಗಳನ್ನು ಬದಿಗೆ ಸರಿಸಿರುವ ಬಗ್ಗೆ ವರದಿಯಾಗಿದೆ.