Advertisement

ಸಾವು ತಂದಿತೇ ಜನ್ಮಭೂಮಿಯ ಮೇಲಿನ ದಾಳಿ?

12:13 AM Mar 05, 2022 | Team Udayavani |

ರಷ್ಯಾದ ಉದ್ಯಮಿ ಮಿಖಾಯಿಲ್‌ ವ್ಯಾಟ್‌ಫೋರ್ಡ್‌ (66) ಎಂಬುವರು, ಯುನೈಟೆಡ್‌ ಕಿಂಗ್‌ಡಮ್‌ನ ಸರ್ರೆ ನಗರದಲ್ಲಿರುವ ತಮ್ಮ ಬಂಗಲೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

Advertisement

ಉದ್ದಿಮೆಯಲ್ಲಾಗಲೀ, ವೈಯಕ್ತಿಕ ಜೀವನದಲ್ಲಾಗಲೀ ನಷ್ಟವಾಗಿಲ್ಲ. ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ಹೇರಿದ ಜಗತ್ತಿನ ನಾನಾ ರಾಷ್ಟ್ರಗಳು ಮಾಡಿರುವ ಪಟ್ಟಿಯಲ್ಲಿ ಇವರ ಕಂಪೆನಿ ಹೆಸರಿರಲಿಲ್ಲ. ಆದರೂ ಇವರೇಕೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿತ್ತು.

ಅಂದಹಾಗೆ, ಈ ಉದ್ಯಮಿಯ ಜನ್ಮಭೂಮಿ ಉಕ್ರೇನ್‌. ಅವರು ಬೆಳೆದು ದೊಡ್ಡ ಉದ್ಯಮಿಯಾಗಿದ್ದು ರಷ್ಯಾದಲ್ಲಿ. ಹಾಗಾಗಿ ಎರಡೂ ದೇಶಗಳ ಬಗ್ಗೆ ಆತ್ಮೀಯತೆ ಹೊಂದಿದ್ದ ಈ ಉದ್ಯಮಿಗೆ, ರಷ್ಯಾ ದೇಶ ಉಕ್ರೇನ್‌ ಮೇಲೆ ದಾಳಿ ಮಾಡಿದ್ದು ಬೇಸರ ತಂದಿರಬಹುದು. ಅದಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next