Advertisement

ತೈಲ ಸಂಗ್ರಹಾಗಾರದ ಮೇಲೆ ಉಕ್ರೇನ್‌ನಿಂದ ದಾಳಿ; ರಷ್ಯಾಕ್ಕೆ ಉಕ್ರೇನ್‌ ಶಾಕ್‌!

01:44 AM Apr 02, 2022 | Team Udayavani |

ಮಾಸ್ಕೋ/ಕೀವ್‌: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂ ಭಿಸಿ 37 ದಿನಗಳು ಪೂರೈಸು­ತ್ತಿ­ರು­ ವಂತೆಯೇ ಹೊಸ ಸುದ್ದಿ­ಯೊಂದು ಸ್ಫೋಟ­ಗೊಂಡಿದೆ. ಇದೇ ಮೊದಲ ಬಾರಿಗೆ ಉಕ್ರೇನ್‌ನ ಹೆಲಿಕಾಪ್ಟರ್‌ರಷ್ಯಾದ ಮೇಲೆ ದಾಳಿ ನಡೆಸಿವೆ!

Advertisement

ರಷ್ಯಾದ ಪಶ್ಚಿಮದಲ್ಲಿರುವ ಇಂಧನ ಸಂಗ್ರಹಾಗಾರದ ಮೇಲೆ ಉಕ್ರೇನ್‌ ದಾಳಿ ನಡೆಸಿದೆ ಎಂದು ರಷ್ಯಾದ ಪ್ರಾದೇಶಿಕ ಗವರ್ನರ್‌ ಹೇಳಿ­ದ್ದಾರೆ. ಯುದ್ಧ ಆರಂಭ­­ವಾದಾಗಿನಿಂದ ರಷ್ಯಾ ನೆಲದ ಮೇಲೆ ವೈಮಾನಿಕ ದಾಳಿಯಾಗಿರು­ವುದು ಇದೇ ಮೊದಲು.

ಇದರಿಂದ ತೈಲ ಸಂಗ್ರಹಾ­ಗಾರದ­ಲ್ಲಿದ್ದ ಇಬ್ಬರು ಸಿಬಂದಿ ಗಾಯ­ಗೊಂಡಿದ್ದಾರೆ. 170 ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸಿ­ದ್ದಾರೆ ಎಂದೂ ರಷ್ಯಾ ಹೇಳಿದೆ. ಜತೆಗೆ, ಈ ಬೆಳವಣಿಗೆಯು ಎರಡೂ ದೇಶಗಳ ನಡುವಿನ ಸಂಧಾನ ಮಾತುಕತೆಗೆ ಅಡ್ಡಿ ಉಂಟುಮಾಡಲಿದೆ ಎಂದೂ ಎಚ್ಚರಿ­ಸಿದೆ.

ಈ ನಡುವೆ, ಅಚ್ಚರಿಯ ಬೆಳವಣಿಗೆ ಎಂಬಂತೆ ಕಳೆದೊಂದು ತಿಂಗಳಿಂದ ಚರ್ನೋಬಿಲ್‌ ಅಣು ವಿದ್ಯುತ್‌ ಸ್ಥಾವರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ರಷ್ಯಾ ಪಡೆ, ಶುಕ್ರವಾರ ಅದನ್ನು ಉಕ್ರೇನಿಯನ್ನರಿಗೆ ಬಿಟ್ಟುಕೊಟ್ಟು ಅಲ್ಲಿಂದ ಹೊರಟಿದೆ.

Advertisement

Udayavani is now on Telegram. Click here to join our channel and stay updated with the latest news.

Next