ಬ್ರಿಟನ್: ಅಕ್ಟೋಬರ್ ನಿಂದ ಸ್ಟೂಡೆಂಟ್ ವೀಸಾ(Student Visa) ಶುಲ್ಕವನ್ನು 127 ಪೌಂಡ್ಸ್ ನಷ್ಟು ಹೆಚ್ಚಳ ಮಾಡಲು ಯುನೈಟೆಡ್ ಕಿಂಗ್ ಡಮ್ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:DY Chandrachud: ನ್ಯಾಯಮೂರ್ತಿಗಳ ನೇಮಕಾತಿ ಕುರಿತ ಟೀಕೆಗೆ ಮುಖ್ಯ ನ್ಯಾಯಮೂರ್ತಿ ಹೇಳಿದ್ದೇನು
ವಿದ್ಯಾಭ್ಯಾಸ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ವೀಸಾ ಶುಲ್ಕವನ್ನು 13 ಸಾವಿರ ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಸ್ಟೂಡೆಂಟ್ ವೀಸಾ ಶುಲ್ಕವನ್ನು ಒಟ್ಟು 490 ಪೌಂಡ್ಸ್ ಗೆ ಏರಿಕೆ ಮಾಡಲಾಗಿದ್ದು, ಇದು ದೇಶದೊಳಗೆ ಅರ್ಜಿ ಸಲ್ಲಿಸುವ ಮೊತ್ತಕ್ಕೆ ಸಮನಾಗಿರುತ್ತದೆ. ಅಕ್ಟೋಬರ್ 4ರಿಂದ ಶುಲ್ಕ ಏರಿಕೆಯಾಗಲಿದೆ ಎಂದು ಬ್ರಿಟನ್ ಸಚಿವಾಲಯ ವಿವರಿಸಿದೆ.
2021-2022ನೇ ಸಾಲಿನಲ್ಲಿ ಯುನೈಟೆಡ್ ಕಿಂಗ್ ಡಮ್ ನಲ್ಲಿ 1,20,000 ಲಕ್ಷಕ್ಕಿಂತಲೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದರು. ಇದರೊಂದಿಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಮುದಾಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿರುವುದಾಗಿ ಹೈಯರ್ ಎಜುಕೇಶನ್ ಸ್ಟ್ಯಾಟಿಸ್ಟಿಕ್ಸ್ ಏಜೆನ್ಸಿ ತಿಳಿಸಿದೆ.
2023ನೇ ಸಾಲಿನಲ್ಲಿ ಭಾರತೀಯರಿಗೆ ಒಟ್ಟು 1,42,848 ಪ್ರಾಯೋಜಿತ ಅಧ್ಯಯನ ವೀಸಾವನ್ನು ನೀಡಲಾಗಿದೆ. ಇದು 2022ರ ಜೂನ್ ಅಂತ್ಯಕ್ಕೆ ಹೋಲಿಸಿದಲ್ಲಿ 49,883 ವೀಸಾ ಹೆಚ್ಚಳ ಮಾಡಿದಂತಾಗಿದೆ ಎಂದು ಬ್ರಿಟನ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.