ಲಂಡನ್: ಕೋವಿಡ್ 19 ವೈರಸ್ ನ ರೂಪಾಂತರಿತ ತಳಿ ಡೆಲ್ಟಾ ಪ್ರಕರಣಗಳ ಸಂಖ್ಯೆ ಬ್ರಿಟನ್ ನಲ್ಲಿ ಹೆಚ್ಚಳವಾಗುತ್ತಿದ್ದು, ಕಳೆದ ವಾರದಿಂದ 35,204 ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 111,157ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಶುಕ್ರವಾರ(ಜೂನ್ 26) ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಕ್ರೀಡೆಗೆ ಮಾಡಿದ ಅಪರಾಧವಾಗುತ್ತದೆ: ಸ್ವಾನ್
ಇಂಗ್ಲೆಂಡ್ ನ ಪಬ್ಲಿಕ್ ಹೆಲ್ತ್ (ಪಿಎಚ್ ಇ), ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಒಟ್ಟು ಡೆಲ್ಟಾ ರೂಪಾಂತರಿತ ತಳಿಯ(VOC) ಬಗ್ಗೆ ಹೇಳಿದೆ. 42 ಡೆಲ್ಟಾ ಎವೈ.1 ಉಪವಂಶಕ್ಕೆ ಸೇರಿದ್ದು, ಇದನ್ನು ಡೆಲ್ಟಾ ಪ್ಲಸ್ ಎಂದು ಕರೆಯಲಾಗುತ್ತದೆ. ಅಲ್ಲದೇ ಕೆಲವು ಹಂತದಲ್ಲಿ ಇದು ಕ್ಷಿಪ್ರವಾಗಿ ಹರಡಬಲ್ಲದು ಎಂದು ವಿವರಿಸಿದೆ.
ಡೆಲ್ಟಾ ರೂಪಾಂತರಿತ ಪ್ರಕರಣ ಈಗ ಬ್ರಿಟನ್ ನಲ್ಲಿ ಅಂದಾಜು 95 ಪ್ರತಿ ಶತದಷ್ಟು ಪ್ರಕರಣಗಳಿಗೆ ಕಾರಣವಾಗಿದೆ ಎಂದು ಪಿಎಚ್ ಇ ತಿಳಿಸಿದ್ದು, ಏತನ್ಮಧ್ಯೆ ಕೋವಿಡ್ 19 ಲಸಿಕೆಯ ಎರಡೂ ಡೋಸ್ ಗಳನ್ನು ಪಡೆಯುವುದರಿಂದ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಹೇಳಿದೆ.
ನಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮದ ಯಶಸ್ಸಿನ ಮೂಲಕ ಅಂಕಿಅಂಶಗಳ ಮಾಹಿತಿ ಪ್ರಕಾರ, ನಾವು ಪ್ರಕರಣಗಳ ಮತ್ತು ಆಸ್ಪತ್ರೆಗಳಿಗೆ ದಾಖಲಾಗುವ ಸಂಖ್ಯೆಯನ್ನು ಇಳಿಕೆ ಮಾಡಲು ಪ್ರಾರಂಭಿಸಿದ್ದೇವೆ ಎಂದು ಯುಕೆ ಆರೋಗ್ಯ ಭದ್ರತಾ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕ ಡಾ.ಜೆನ್ನಿ ಹ್ಯಾರಿಸ್ ತಿಳಿಸಿದ್ದಾರೆ.