Advertisement

ಅಕ್ಷತಾ ವಿರುದ್ಧದ ಆರೋಪ ಸುಳ್ಳು

11:26 PM Apr 07, 2022 | Team Udayavani |

ಲಂಡನ್‌: ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌ ಅವರ ಪತ್ನಿ, ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ವಿರುದ್ಧದ ಆರೋಪ ಸುಳ್ಳು. ಹೀಗೆಂದು ಅವರ ವಕ್ತಾರೆ ಕ್ವಾಸಿ ಕ್ವಾರ್ಟೆಂಗ್‌ ಸ್ಪಷ್ಟನೆ ನೀಡಿದ್ದಾರೆ.

Advertisement

“ರಿಷಿ ಸುನಕ್‌ ಮತ್ತು ಅಕ್ಷತಾ ಮೂರ್ತಿ ಅವರು ತಮ್ಮೆಲ್ಲ ನಿರ್ಧಾರಗಳಲ್ಲೂ ಪಾರದರ್ಶಕತೆ ಕಾಪಾಡಿಕೊಂಡು ಬಂದಿದ್ದಾರೆ. ಜನರು ಸುಖಾಸುಮ್ಮನೆ ವಿವಾದ ಸೃಷ್ಟಿಸುವುದು ಸರಿಯಲ್ಲ’ ಎಂದಿದ್ದಾರೆ.

ವಿದೇಶೀ ಆದಾಯದ ಮೇಲೆ ಕೋಟ್ಯಂತರ ರೂ. ತೆರಿಗೆ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ಯು.ಕೆ.ಯಲ್ಲಿ ನಾನ್‌-ಡೊಮಿಸೈಲ್‌ (ನಿವಾಸಿಯಲ್ಲ) ಸ್ಥಾನಮಾನ  ಪಡೆದಿದ್ದಾರೆ’ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಅದಕ್ಕಾಗಿ ಈ ಸ್ಪಷ್ಟನೆ ಕೊಡಲಾಗಿದೆ.

ಯುಕೆ ಕಾನೂನಿನ ಪ್ರಕಾರ, ನಿವಾಸಿಯಲ್ಲ  ಸ್ಥಾನಮಾನ ಹೊಂದಿರುವವರು ಸಾಗರೋತ್ತರ ಕಂಪೆನಿಗಳ ಲಾಭಾಂಶದ ಮೇಲೆ ತೆರಿಗೆ ಪಾವತಿಸಬೇಕಾಗಿಲ್ಲ. ಅಕ್ಷತಾ ಇನ್ಫೋಸಿಸ್‌ನಿಂದ ವಾರ್ಷಿಕ 114.30 ಕೋಟಿ ರೂ. ಲಾಭಾಂಶ ಪಡೆಯುತ್ತಿದ್ದಾರೆ. ಯುಕೆಯ ನಿವಾಸಿ ಎಂಬ ಸ್ಥಾನ ಮಾನ ಪಡೆದರೆ ಅವರು ಈ ಮೊತ್ತಕ್ಕೆ ತೆರಿಗೆ ಪಾವತಿ ಸಬೇಕಾಗುತ್ತದೆ. ಅದಕ್ಕಾಗಿಯೇ ಅವರು ಈ ಸ್ಥಾನ ಮಾನ ಪಡೆದಿಲ್ಲ ಎನ್ನುವುದು ವಿರೋಧಿಗಳ ವಾದ.

Advertisement

Udayavani is now on Telegram. Click here to join our channel and stay updated with the latest news.

Next