ಲಂಡನ್: ಯುನೈಟೆಡ್ ಕಿಂಗ್‌ಡಮ್‌ನ ವಿತ್ತ ಸಚಿವ ರಿಷಿ ಸುನಕ್ ಅವರು ದೀಪಾವಳಿ ಪ್ರಯುಕ್ತ ಗುರುವಾರ ಮಹಾತ್ಮಾ ಗಾಂಧಿ ಸ್ಮರಣಾರ್ಥ ಐದು ಪೌಂಡ್ ಮೌಲ್ಯದ ಹೊಸ ನಾಣ್ಯ ಬಿಡುಗಡೆ ಮಾಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅಹಿಂಸಾತ್ಮಕವಾಗಿ ಯಶಸ್ಸು ಸಾಧಿಸಿದ ಮಹಾತ್ಮ ಗಾಂಧಿಯವರ ಜೀವನ ಸಾಧನೆಗಳನ್ನು ಯು.ಕೆ.ಯಲ್ಲಿ ಸ್ಮರಿಸಿಕೊಳ್ಳುವ ಕಾರ್ಯಕ್ರಮದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಚಿನ್ನ ಮತ್ತು ಬೆಳ್ಳಿಯಲ್ಲಿಯೂ ಈ ವಿಶೇಷ ನಾಣ್ಯ ಲಭ್ಯವಾಗಲಿದೆ. ಹೀನಾ ಗ್ಲೋವರ್ ವಿನ್ಯಾಸ ಮಾಡಿರುವ ನಾಣ್ಯದಲ್ಲಿ ದೇಶದ ರಾಷ್ಟ್ರೀಯ ಪುಷ್ಪ ಕಮಲ, “ನನ್ನ ಜೀವನವೇ ನನ್ನ ಸಂದೇಶ’ ಎಂಬ ಮಹಾತ್ಮಾ ಗಾಂಧಿಯವರ ಸಂದೇಶವನ್ನು ಮುದ್ರಿಸಲಾಗಿದೆ.
“ಮಹಾತ್ಮಾ ಗಾಂಧಿಯವರಿಂದ ಜಗತ್ತೇ ಪ್ರಭಾವಿತವಾಗಿದೆ. ಹಿಂದೂ ಸಮುದಾಯಕ್ಕೆ ಸೇರಿದ ನಾನು, ದೀಪಾವಳಿ ಸಂದರ್ಭದಲ್ಲಿಯೇ ಅವರ ಸ್ಮರಣಾರ್ಥವಾಗಿ ಈ ನಾಣ್ಯ ಬಿಡುಗಡೆ ಮಾಡಲು ಹೆಮ್ಮೆ ಎನಿಸುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಭೂಮಿಕೆ ವಹಿಸಿದ್ದ ಅವರ ಬಗ್ಗೆ ಯು.ಕೆ.ಯಲ್ಲಿ ಮೊದಲ ಬಾರಿಗೆ ನಾಣ್ಯ ಹೊರ ತರುವುದು ಅತ್ಯಂತ ಪ್ರಸ್ತುತವೂ ಆಗಿದೆ’ ಎಂದು ಕಾರ್ಯಕ್ರಮದಲ್ಲಿ ರಿಷಿ ಸುನಕ್ ಹೇಳಿದ್ದಾರೆ.
ಇದನ್ನೂ ಓದಿ : ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿದ ಕಳ್ಳರಿಗೆ ಜೈಲು ದಾರಿ ತೋರಿಸಿದ ಪೊಲೀಸರು