Advertisement

15 ನಿಮಿಷದ ದಾರಿಗೆ 32 ಲಕ್ಷ ರೂ. ಬಾಡಿಗೆ ಹಾಕಿದ ಉಬರ್:‌ ಗ್ರಾಹಕ ಕಕ್ಕಾಬಿಕ್ಕಿ.!

12:20 PM Oct 10, 2022 | Team Udayavani |

ವಾಷಿಂಗ್ಟನ್:‌  ಕರ್ನಾಟಕದಲ್ಲಿ ಸದ್ಯ ಓಲಾ- ಉಬರ್‌ ಬಗ್ಗೆ ಜೋರಾದ ಚರ್ಚೆಗಳು ನಡೆಯುತ್ತಿವೆ. ನಿಯಮಕ್ಕಿಂತ ಹೆಚ್ಚಿನ ಹಣ ಪಡೆದುಕೊಳ್ಳುತ್ತಾರೆ ಎನ್ನುವ ಕಾರಣದಿಂದ ಸರ್ಕಾರ ಎರಡು ಕಂಪೆನಿಗಳಿಗೆ ನೋಟಿಸ್‌ ಜಾರಿ ಮಾಡಿದೆ. ಅಮೆರಿಕಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.

Advertisement

ಯುಕೆ ಮ್ಯಾಂಚೆಸ್ಟರ್‌ನ 22 ವರ್ಷದ ಆಲಿವರ್ ಕಪ್ಲಾನ್ ಎಂಬಾತ ತನ್ನ ಕೆಲಸ ಮುಗಿದ ಬಳಿಕ ರೈಡ್-ಶೇರ್ ಅಪ್ಲಿಕೇಶನ್‌ನಿಂದ ಉಬರ್‌ ಕ್ಯಾಬ್‌ ಬುಕ್‌ ಮಾಡಿದ್ದಾರೆ. ತನ್ನ ಸ್ನೇಹಿತರನ್ನು ಭೇಟಿಯಾಗಲು ಪಬ್‌ ವೊಂದಕ್ಕೆ ಹೋಗುವ ನಿಟ್ಟಿನಲ್ಲಿ ಕ್ಯಾಬ್‌ ನಲ್ಲಿ ಹತ್ತಿ‌ ಡ್ರಾಪ್‌ ಆಫ್ ಲೋಕೇಷನ್‌ ಸೆಟ್‌ ಮಾಡಿ ಕೂರುತ್ತಾರೆ. ಆಲಿವರ್ ಕಪ್ಲಾನ್ ಹತ್ತಿದ ಸ್ಥಳದಿಂದ ಸರಿಯಾಗಿ 15 ನಿಮಿಷದ ದಾರಿಯಾಗಿ ಸಾಗಿದರೆ ಪಬ್‌ ಸಿಗುತ್ತದೆ. ಅಲ್ಲಿಗೆ $11( 906.53 ರೂ.) ಆಗುತ್ತದೆ. ಆದರೆ ಮರುದಿನ ಎದ್ದು ಮೊಬೈಲ್‌ ನೋಡಿದ ಆಲಿವರ್ ರೈಡ್‌ ಶೇರ್‌ ನಿಂದ ಬಂದ  ಮೆಸೇಜ್‌ ನೋಡಿ ಶಾಕ್‌ ಆಗುತ್ತಾರೆ.

4 ಕಿ.ಮೀ ದೂರವಷ್ಟೇ ಕ್ಯಾಬ್‌ ನಲ್ಲಿ ಹೋದ ಆಲಿವರ್ ಗೆ ಬಂದ ಬಾಡಿಗೆ ಹಣ ಬರೋಬ್ಬರಿ $39,317  (32,51,300 ಲಕ್ಷ ರೂ.) ಪ್ರತಿದಿನ ಕೆಲಸ ಮುಗಿಸಿ ಉಬರ್‌ ಕ್ಯಾಬ್ ನಲ್ಲೇ ಮನೆಗೆ ಬರುವ‌ ಆಲಿವರ್ ಗೆ ಇದನ್ನು ನೋಡಿ ಆಘಾತವಾಗುತ್ತದೆ. ಕೂಡಲೇ ಗ್ರಾಹಕ ಸಿಬ್ಬಂದಿಗೆ ಕರೆ ಮಾಡಿ ಈ ರೀತಿ ಆಗಿದೆ. ಇಷ್ಟು ಬಾಡಿಗೆ ಹಣ ಬಂದಿದೆ ಎಂದು ತೊಂದರೆಯನ್ನು ಹೇಳಿಕೊಳ್ಳುತ್ತಾರೆ.

ಉಬರ್‌ ಇದನ್ನು ಪರಿಶೀಲಿಸಿದ ಬಳಿಕ, ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ. ನಿಮ್ಮ ಡ್ರಾಪ್‌ ಆಫ್‌ ಸ್ಥಳದ ಹೆಸರು ಆಸ್ಟ್ರೇಲಿಯಾದಲ್ಲೂ ಇದೆ. ಎಡವಟ್ಟಿನಿಂದಾಗಿ ಆಸ್ಟ್ರೇಲಿಯಾಕ್ಕೆ ಡ್ರಾಪ್‌ ಆಫ್‌ ಲೋಕೇಷನ್‌ ಸೆಟ್‌ ಆಗಿದೆ ಎಂದಿದೆ. ಪುಣ್ಯಕ್ಕೆ ಆಲಿವರ್‌ ಅಕೌಂಟ್‌ ನಿಂದ ಯಾವುದೇ ಹಣ ಕಡಿತಗೊಂಡಿಲ್ಲ. ಅದಕ್ಕೆ ಕಾರಣ ಆಲಿವರ್‌ ಅವರ ಬ್ಯಾಂಕ್‌ ಖಾತೆಯಲ್ಲಿ ಅಷ್ಟು ಹಣವಿರಲಿಲ್ಲ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next